ಇನ್ನೂ ಕಮರಿಲ್ಲ ಅಫ್ಘನ್ನರ ಸೆಮಿಫೈನಲ್ ಕನಸು: ಕೊನೆಯ ಒಂದು ಸ್ಥಾನಕ್ಕೆ ಹೇಗಿದೆ ಪೈಪೋಟಿ!!
ವಿಶ್ವಕಪ್ ಟೂರ್ನಿಯ 8ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಶ್ವದಾಖಲೆಯ ಪ್ರದರ್ಶನದಿಂದಾಗಿ ಅಫ್ಘಾನಿಸ್ತಾನ ತಂಡ ಗೆಲುವಿನ ಸನಿಹದಿಂದ ಪಂದ್ಯವನ್ನು ಕಳೆದುಕೊಂಡು ಆಘಾತ ಅನುಭವಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸವಾಲಿನ ಗುರಿ ಮುಂದಿಟ್ಟಿತ್ತು.
ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ವಿರುದ್ಧ ಬೌಲಿಂಗ್‌ನಲ್ಲಿಯೂ ಸಂಪೂರ್ಣ ಮೇಲುಗೈ ಸಾಧಿಸಿದ್ದ ಅಫ್ಘಾನಿಸ್ತಾನ ತಂಡ ಒಂದು ಹಂತದಲ್ಲಿ ಆಸ್ಟ್ರೇಲಿಯಾವನ್ನು 91 ರನ್‌ಗಳೀಗೆ 7 ವಿಕೆಟ್ ಕಬಳಿಸಿ ಗೆಲುವಿನ ಕನಸು ಕಾಣುತ್ತಿತ್ತು. ಆದರೆ ಆಸಿಸ್ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಇಡೀ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತಾ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ಅಸಾಧ್ಯ ಗೆಲುವನ್ನು ಸಾಧಿಸಲು ಕಾರಣವಾದರು. ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಈ ಅದ್ಭುತ ಜೊತೆಯಾಟದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

ಈ ಗೆಲುವಿನಿಂದಿಗೆ ಆಸ್ಟ್ರೇಲಿಯಾ ತನ್ನ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ ಆದರೆ ಅಫ್ಘಾನಿಸ್ತಾನ ತಂಡದ ಸೆಮಿಫೈನಲ್ ಪಯಣದ ಹಾದಿ ದುರ್ಗಮವಾಗಿದೆ. ಹಾಗಿದ್ದರೂ ತಂಡಕ್ಕೆ ಇನ್ನೂ ಅವಕಾಶವಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿದರೆ ಈ ಕನಸು ಜೀವಂತವಾಗಿರಲಿದೆ. ಆದರೆ ಸೆಮಿಫೈನಲ್ ಸ್ಪರ್ಧೆಯಲ್ಲಿರುವ ಉಳಿದ ಎರಡು ತಂಡಗಳಾದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ನೆಟ್‌ರನ್‌ರೇಟ್ ಪ್ರಮುಖ ಪಾತ್ರವಹಿಸಲಿದೆ.
ಇನ್ನು ಕೊನೆಯ ಲೀ್ ಪಂದ್ಯದಲ್ಲಿ ಎಲ್ಲಾ ಮೂರು ತಂಡಗಳು ಗೆಲುವು ಸಾಧಿಸಿದರೆ ಈ ಮೂರು ತಂಡಗಳು 10 ಅಂಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿರಲಿದೆ. ಆಗ ನೆಟ್ ರನ್‌ರೇಟ್‌ನ ಆಧಾರದಲ್ಲಿ ಸೆಮಿಫೈನಲ್‌ಗೆ ಯಾರು ಪ್ರವೇಶಿಸಲಿದ್ದಾರೆ ಎನ್ನುವುದು ನಿರ್ಧಾರವಾಗಲಿದೆ.
ಅಫ್ಘಾನಿಸ್ತಾನ ತಂಡ ನೆಟ್ ರನ್‌ರೇಟ್‌ನಲ್ಲಿ ಹಿಮದುಳಿದಿರುವುದು ತಂಡಕ್ಕೆ ಸಹಜವಾಗಿಯೇ ದೊಡ್ಡ ಹಿನ್ನಡೆಯುಂಟು ಮಾಡಲಿದೆ. ಕೊನೆಯ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಅಫ್ಘಾನಿಸ್ತಾನ ತಂಡ ಎದುರಿಸಲಿದ್ದು ಇಲ್ಲಿ ಗೆಲುವು ಸಾಧಿಸುವ ಜೊತೆಗೆ ಭಾರೀ ಕೆಳಕ್ಕಿಳಿದಿರುವ ನೆಟ್‌ರನ್‌ರೇಟ್ ಎಷ್ಟರಮಟ್ಟಿಗೆ ಮೇಲತ್ತಲಿದೆ ಎನ್ನುವುದು ಪ್ರಶ್ನಾರ್ಹ. ಹೀಗಾಗಿ ಅಫ್ಘಾನಿಸ್ತಾನ ತಂಡಕ್ಕೆ ತಾನು ಗೆಲುವುದರ ಜೊತೆಗೆ ತನ್ನೊಂದಿಗೆ ಸೆಮಿಫೈನಲ್ ಸ್ಪರ್ಧೆಯಲ್ಲಿರುವ ಉಳಿದ ಎರಡು ತಂಡಗಳಾದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡ ಸೋಲು ಅನುಭವಿಸಲಿ ಎಂದು ಪ್ರಾರ್ಥಿಸುವುದಷ್ಟೇ ಉಳಿದುಕೊಂಡಂತಿದೆ.
ಇನ್ನು ಸೆಮಿಫೈನಲ್ ಸ್ಪರ್ಧೆಯಲ್ಲಿರುವ ನ್ಯೂಜಿಲೆಂಡ್ ತಂಡ ಕೊನೆಯ ಲೀಗ್ ಪಂದ್ಯವನ್ನು ನವೆಂಬರ್ 9ರಂದು ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ಇನ್ನು ಪಾಕಿಸ್ತಾನ ತಂಡ ಕೊನೆಯ ಲೀಗ್ ಪಂದ್ಯವನ್ನು ನವೆಂಬರ್ 11ರಂದು ಇಂಗ್ಲೆಂಡ್ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications