ಕೇಪೆ ವರ್ಡೆ ಫುಟ್ಬಾಲ್ ಲೋಕದ RCB: ಕೇವಲ 1% ಚಾನ್ಸ್, ಇತಿಹಾಸ ನಿರ್ಮಿಸಿದ ಚಿಕ್ಕ ರಾಷ್ಟ್ರ
ಕ್ರೀಡೆಯಲ್ಲಿ ಕೊನೆಯ ಕ್ಷಣದವರೆಗೂ ಜಯ ಯಾರಿಗೆ ದಕ್ಕುತ್ತದೆ ಎಂದು ಹೇಳುವುದು ಕಷ್ಟ. ಗೆದ್ದೆ ಬಿಟ್ಟೆವು ಎಂಬ ಆತ್ಮವಿಶ್ವಾಸದಲ್ಲಿದ್ದ ಅದೆಷ್ಟೋ ತಂಡಗಳು, ಸಪ್ಪೆ ಮುಖವನ್ನು ಹಾಕಿಕೊಂಡು ಬೇಡವಾದ ಮನಸ್ಸಿನಿಂದಲೇ ಸೋಲನ್ನು ಅಪ್ಪಿಕೊಂಡಿವೆ. ಇನ್ನು ಅಸಾಧ್ಯವಾದದ್ದನ್ನು ಮಾಡಿ ತಮ್ಮಲ್ಲಿರುವ ಕ್ಷಮತೆಯನ್ನು ತೋರಿಸಿ ಎಲ್ಲರ ಗಮನ ಸೆಳೆದ ಅದೆಷ್ಟೋ ತಂಡಗಳು ಇತಿಹಾಸದ ಪುಟ ಸೇರಿವೆ. ಹೀಗಾಗಿಯೇ ಕ್ರೀಡೆಯಲ್ಲಿ ಕೊನೆಯ ಕ್ಷಣದವರೆಗೂ ಏನು ಹೇಳಲು ಬರುವುದಿಲ್ಲ.
2024ರ ಐಪಿಎಲ್ ನೆನಪಿದ್ದರೆ ಆರ್‌ಸಿಬಿ ನೀಡಿದ ಪ್ರದರ್ಶನ ಕಣ್ಣ ಮುಂದೆ ಬರುತ್ತದೆ. ಈ ಲೀಗ್‌ನ ಆರಂಭದಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆಗ ಆರ್‌ಸಿಬಿಗೆ ಪ್ಲೇ ಆಫ್ ತಲುಪುವ ಅವಕಾಶ ಒನ್ ಪರ್ಸೆಂಟ್ ಇತ್ತು. ಈ ತಂಡ ಪ್ಲೇ ಆಫ್ ತಲುಪುವುದು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶ ಪಡೆದಿತ್ತು. ಇದೇ ರೀತಿಯ ಪ್ರದರ್ಶನ ಫುಟ್ಬಾಲ್ ಅಂಗಳದಲ್ಲಿ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಕಂಡು ಬಂದಿದೆ.

ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಆಡಲು ಸಜ್ಜಾಗಿದ್ದ ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರ ಕೇಪೆ ವರ್ಡೆ. ಈ ದೇಶ ಫುಟ್ಬಾಲ್ ವಿಶ್ವಕಪ್‌ಗೆ ಅರ್ಹತೆ ಪಡೆದಾಗ ಲೀಗ್ ಹಂತದಲ್ಲೇ ಈ ದೇಶ ಮನೆ ಕಡೆಗೆ ಪ್ರಯಾಣ ಬೆಳೆಸುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಅಲ್ಲದೆ ಲೀಗ್ ಹಂತದಿಂದ ಈ ದೇಶ ಮುನ್ನಡೆಯಲು ಜಸ್ಟ್ 1 ಪರ್ಸೆಂಟ್ ಆಸೆ ಇತ್ತು.
ಇತಿಹಾಸ ನಿರ್ಮಿಸಿದ ಕೇಪೆ ವರ್ಡೆ
ಕೇಪೆ ವರ್ಡೆ ಆ ಒಂದು ಪರ್ಸೆಂಟ್ ಆಸೆಯನ್ನು ಇಟ್ಟುಕೊಂಡೇ ಫುಟ್ಬಾಲ್ ಅಂಗಳಕ್ಕೆ ಕಾಲಿಟ್ಟಿತು. ತಾನು ನೀವು ತಿಳಿದುಕೊಂಡಷ್ಟು ದುರ್ಬಲ ಅಲ್ಲ ಎಂದು ಸಾಬೀತು ಪಡಿಸಲು ಕೇಪೆ ವರ್ಡೆಗೆ ಹೆಚ್ಚು ಸಮಯ ಬೇಕಾಗಲಿಲ್ಲ. ತಾನಾಡಿದ ಮೊದಲ ಪಂದ್ಯದಲ್ಲೇ ಕೇಪೆ ತನ್ನಲ್ಲಿರುವ ಸಾಮರ್ಥ್ಯವನ್ನು ಸಾಬೀತು ಪಡಿಸಿತು. ಮಾಜಿ ಚಾಂಪಿಯನ್ ಸ್ಪೇನ್ ತಂಡದ ವಿರುದ್ಧ ಕೇಪೆ ವರ್ಡೆ ನೀಡಿದ ಕೆಚ್ಚೆದೆಯ ಆಟ ಎಲ್ಲರ ಗಮನ ಸೆಳೆಯಿತು. ಈ ಪಂದ್ಯದಲ್ಲಿ ಸ್ಪೇನ್‌ಗೆ ಒಂದೇ ಒಂದು ಗೋಲನ್ನು ಬಿಟ್ಟುಕೊಡದೆ ಡ್ರಾ ಮಾಡಿಕೊಂಡಿತು.
ಸೋಲಿಲ್ಲದೆ ನಾಕೌಟ್ ಹಂತಕ್ಕೆ ಪ್ರವೇಶ
ಇನ್ನು ಎಚ್ ಗುಂಪಿನ ಎರಡನೇ ಪಂದ್ಯದಲ್ಲಿ ಕೇಪೆ ವರ್ಡೆ ಎರಡು ಬಾರಿಯ ವಿಶ್ವ ಚಾಂಪಿಯನ್ನರ ವಿರುದ್ಧವೂ ಅದೇ ರೀತಿ ಪ್ರದರ್ಶನ ನೀಡಿದರು. ಲೀಗ್ ಹಂತದ ಎರಡನೇ ಪಂದ್ಯದಲ್ಲಿ 2-2 ಡ್ರಾ ಸಾಧಿಸಿದ ಕೇಪೆ ವರ್ಡೆ ಅಚ್ಚರಿಯ ಫಲಿತಾಂಶ ನೀಡಿತು. ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೌದಿ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತು. ಈ ಮೂಲಕ ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ರೌಂಡ್ ಆಫ್ 32ಕ್ಕೆ ಲಗ್ಗೆ ಇಟ್ಟಿತು. ಫುಟ್ಬಾಲ್ ಪಂಡಿತರ 1% ಲೆಕ್ಕಾಚಾರವನ್ನು ಉಲ್ಟಾ ಮಾಡಿ ಕೇಪೆ ವರ್ಡೆ ದಾಖಲೆ ಬರೆಯಿತು.
ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ ಕೇಪೆ ವರ್ಡೆ ತಾನಾಡಿದ ಮೊದಲ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದು ದಾಖಲೆ ಬರೆಯಿತು. ರೌಂಡ್ ಆಫ್ 32ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಆಡಿದ ಕೆಚ್ಚೆದೆಯ ಆಟ ವಿಶ್ವದ ಗಮನ ಸೆಳೆಯಿತು. ಈ ಪಂದ್ಯದಲ್ಲಿ ಕೇಪೆ ವರ್ಡೆ 3-2 ಗೋಲುಗಳಿಂದ ಸೋಲು ಕಂಡಿದೆ. ಆದರೆ ತನ್ನ ಅಮೋಘ ಆಟದಿಂದ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

