CCL 2023 Points Table: ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಗೆದ್ದ ನಂತರ ಅಂಕಪಟ್ಟಿ ಹೀಗಿದೆ

ಶನಿವಾರ, ಮಾರ್ಚ್ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನ 10ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಚೆನ್ನೈ ರೈನೋಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು.
ಈ ಪಂದ್ಯದ ಗೆಲುವಿನೊಂದಿಗೆ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಆಡಿದ ಮೂರು ಪಂದ್ಯಗಳಲ್ಲಿ ಮೂರನ್ನು ಗೆದ್ದು 6 ಪಾಯಿಂಟ್‌ಗಳೊಂದಿಗೆ 2.229 ನೆಟ್ ರನ್‌ರೇಟ್ ಮೂಲಕ ಸಿಸಿಎಲ್ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇದೇ ವೇಳೆ ಸೋಲು ಕಂಡ ಚೆನ್ನೈ ರೈನೋಸ್ ತಂಡ ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಎರಡು ಸೋಲಿನೊಂದಿಗೆ 2 ಅಂಕಗಳನ್ನು ಹೊಂದಿದೆ. 1.34 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ರಿತೇಶ್ ದೇಶ್‌ಮುಖ್ ನಾಯಕತ್ವದ ಮುಂಬೈ ಹೀರೋಸ್ ವಿರುದ್ಧ 10 ವಿಕೆಟ್‌ಗಳ ಜಯದೊಂದಿಗೆ 2023ರ ಸಿಸಿಎಲ್ ಅಭಿಯಾನ ಪ್ರಾರಂಭಿಸಿದ ನಂತರ, ಚೆನ್ನೈ ರೈನೋಸ್ ಸತತ ಎರಡು ಪಂದ್ಯಗಳನ್ನು ಸೋತಿದೆ.

ಸಿಸಿಎಲ್ 2023ರ ಅಂಕಪಟ್ಟಿ
ಕರ್ನಾಟಕ ಬುಲ್ಡೋಜರ್ಸ್ - 3 ಪಂದ್ಯ, 3 ಗೆಲುವು, 6 ಅಂಕ
ತೆಲುಗು ವಾರಿಯರ್ಸ್ - 3 ಪಂದ್ಯ, 2 ಗೆಲುವು, 1 ಸೋಲು, 4 ಅಂಕ
ಭೋಜಪುರಿ ದಬಾಂಗ್ಸ್ - 2 ಪಂದ್ಯ, 2 ಗೆಲುವು, 4 ಅಂಕ
ಚೆನ್ನೈ ರೈನೋಸ್ - 3 ಪಂದ್ಯ, 1 ಗೆಲುವು, 2 ಸೋಲು, 2 ಅಂಕ
ಮುಂಬೈ ಹೀರೋಸ್ - 2 ಪಂದ್ಯ, 1 ಗೆಲುವು, 1 ಸೋಲು, 2 ಅಂಕ
ಪಂಜಾಬ್ ದೆ ಶೇರ್ - 3 ಪಂದ್ಯ, 1 ಗೆಲುವು, ಸೋಲು, 2 ಅಂಕ
ಬೆಂಗಾಲ್ ಟೈಗರ್ಸ್ - 2 ಪಂದ್ಯ, 2 ಸೋಲು, 0 ಅಂಕ
ಕೇರಳ ಸ್ಟ್ರೈಕರ್ಸ್ - 2 ಪಂದ್ಯ, 2 ಸೋಲು, 0 ಅಂಕ
ಶನಿವಾರ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಸಿಸಿಎಲ್ 2023ರ ಮೊದಲ ಸೋಲು ಕಂಡರು. ಪಂಜಾಬ್ ಡಿ ಶೇರ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತು, ಮೂರು ಪಂದ್ಯಗಳಿಂದ ನಾಲ್ಕು ಅಂಕಗಳು ಮತ್ತು 1.871 ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಿಳಿದಿದೆ.
WPL 2023: ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆ ಬಗ್ಗೆ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹೇಳಿದ್ದೇನು?
ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್‌ನ 10 ಓವರ್‌ಗಳಲ್ಲಿ 84 ರನ್ ಗಳಿಸಿತು. ನಂತರ, ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನಿಂಗ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ ಅವರ ಅಮೋಘ ಅರ್ಧಶತಕದ ನೆರವಿನಿಂದ 109 ರನ್ ಕಲೆಹಾಕಿ ಅಮೂಲ್ಯ 25 ರನ್‌ಗಳ ಮುನ್ನಡೆ ಗಳಿಸಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಚೆನ್ನೈ ರೈನೋಸ್ ಸ್ಕೋರ್ ಬೋರ್ಡ್‌ನಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಒಟ್ಟು 125 ರನ್ ಬಾರಿಸಿ, ಆತಿಥೇಯ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ 102 ರನ್‌ಗಳ ಗುರಿಯನ್ನು ನೀಡಿತು.
ಚೆನ್ನೈ ರೈನೋಸ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಹತ್ತು ರನ್‌ಗಳನ್ನು ಸಹ ಬಿಟ್ಟುಕೊಡಲಿಲ್ಲ. ಆದರೆ, ಕರ್ನಾಟಕ ಬುಲ್ಡೋಜರ್ಸ್ ನಂತರದ ಓವರ್‌ಗಳಲ್ಲಿ ಅದ್ಭುತವಾಗಿ ಪುನರಾಗಮನ ಮಾಡಿದರು. ಟರುಣ್ ಬಚ್ಚನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ ಕಾರಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications