Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ 50ನೇ ಹುಟ್ಟುಹಬ್ಬ: ಆರ್‌ಸಿಬಿ ಸ್ಪೆಷಲ್ ವಿಶ್; ಸೆಹ್ವಾಗ್ ಉಲ್ಟಾ ನಿಂತು ಶುಭಕೋರಿದ್ದೇಕೆ?

Celebrities, Cricketers and cricket teams wished Sachin Tendulkar on his 50th birthday

ಇಂದು ( ಏಪ್ರಿಲ್ 24) ಕ್ರಿಕೆಟ್ ಲೋಕದ ಸಾರ್ವಭೌಮ, ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನ. ತನ್ನ ಹದಿನಾರನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ 1989ರಿಂದ 2013ರವರೆಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದು ರನ್ ವಿಚಾರದಲ್ಲಿ ಹಾಗೂ ಸೆಂಚುರಿಗಳ ವಿಚಾರದಲ್ಲಿ ಯಾವ ಕ್ರಿಕೆಟಿಗನೂ ಮಾಡಿರದಂತಹ ದಾಖಲೆಗಳನ್ನು ಮಾಡಿದ್ದಾರೆ.

ಹೀಗೆ ಟೀಮ್ ಇಂಡಿಯಾಗೆ ಬೃಹತ್ ಕೊಡುಗೆ ನೀಡಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳು, ಕ್ರಿಕೆಟ್ ತಂಡಗಳು, ಕ್ರಿಕೆಟಿಗರು ಹಾಗೂ ವಿವಿಧ ಕ್ಷೇತ್ರಗಳ ನಾಯಕರು ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ಹರಿದಾಡುತ್ತಿದ್ದು, ಅವುಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಪೋಸ್ಟ್‌ಗಳು ವೈರಲ್ ಆಗಿವೆ.

ಹೀಗೆ ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬಕ್ಕೆ ಯಾವ ಕ್ರಿಕೆಟ್ ತಂಡಗಳು, ಕ್ರಿಕೆಟಿಗರು ಯಾವ ರೀತಿ ಶುಭ ಕೋರಿದ್ದಾರೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ..

ಸಚಿನ್ ತೆಂಡೂಲ್ಕರ್ ಮಾಡಿರುವ ಸಾರ್ವಕಾಲಿಕ ದಾಖಲೆಗಳನ್ನು ಬರೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಚಿನ್ ತೆಂಡೂಲ್ಕರ್‌ಗೆ ಹುಟ್ಟುಹಬ್ಬದ ಶುಭ ಕೋರಿದೆ. 664 ಪಂದ್ಯಗಳು, 34357 ರನ್‌ಗಳು, 100 ಸೆಂಚುರಿಗಳು.. ಮಾಸ್ಟರ್ ಬ್ಲಾಸ್ಟರ್‌ಗೆ 50ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೋಸ್ಟ್ ಮಾಡಿದ್ದು, ಸಚಿನ್ ವಿಶ್ವಕಪ್ ಹಿಡಿದಿರುವ, ಕೊಹ್ಲಿ ಸಚಿನ್ ಹೊತ್ತು ಸಾಗಿರುವ ಹಾಗೂ ಕೊಹ್ಲಿ ಜತೆ ಸಚಿನ್ ಮಾತನಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದೆ.

sehwag

ಇನ್ನು ವಿರೇಂದ್ರ ಸೆಹ್ವಾಗ್ ಸಚಿನ್ ತೆಂಡೂಲ್ಕರ್‌ಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಸಚಿನ್ ಜತೆ ಅನೇಕ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿರುವ ವಿರೇಂದ್ರ ಸೆಹ್ವಾಗ್ ಆ ಸಂದರ್ಭಗಳಲ್ಲಿ ನಾನು ನಿಮ್ಮ ಮಾತುಗಳಿಗೆ ಉಲ್ಟಾ ನಡೆದುಕೊಳ್ಳುತ್ತಿದ್ದೆ ಎಂಬ ವಿಚಾರವನ್ನು ಇಟ್ಟುಕೊಂಡು ಈಗ ಉಲ್ಟಾ ನಿಂತು ಹುಟ್ಟುಹಬ್ಬದ ಶುಭಕೋರಿದ್ದಾರೆ. ನಿಮ್ಮ ಮಾತುಗಳಿಗೆ ಮೈದಾನದಲ್ಲಿ ಉಲ್ಟಾ ನಡೆದುಕೊಂಡಿದ್ದೇನೆ ಹೀಗಾಗಿ ಈಗ ಉಲ್ಟಾ ನಿಂತು ಶುಭ ಕೋರುತ್ತಿದ್ದೇನೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.

Story first published: Monday, April 24, 2023, 10:42 [IST]
Other articles published on Apr 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+