Champions Trophy 2025: ವೇಳಾಪಟ್ಟಿಯಲ್ಲಿ ಲಾಹೋರ್ ಭಾರತ ತಂಡದ ತವರು ನೆಲೆಯಾಗಿ ಸೂಚಿಸಿದ ಪಿಸಿಬಿ!
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಮುಂದಿನ ವರ್ಷ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ನೆರೆಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವ ತನ್ನ ಪ್ರಯತ್ನದಲ್ಲಿ ಲಾಹೋರ್ ಸ್ಥಳವನ್ನು ಭಾರತದ ತವರು ನೆಲೆಯಾಗಿ ಸೂಚಿಸಿದೆ.
ಏಪ್ರಿಲ್ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಕಳುಹಿಸಲಾದ ಪಂದ್ಯಾವಳಿಯ ಕರಡು ವೇಳಾಪಟ್ಟಿಯಲ್ಲಿ ಈ ಸಲಹೆಯನ್ನು ನೀಡಲಾಗಿದೆ ಎಂದು ಪಿಸಿಬಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

"ಹೌದು, ಲಾಹೋರ್ ಸ್ಥಳವನ್ನು ತಂಡದ ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಅವರಿಗೆ ಅತ್ಯುತ್ತಮ ಭದ್ರತಾ ವ್ಯವಸ್ಥೆಗಳನ್ನು ಒದಗಿಸಲು ಭಾರತೀಯ ತಂಡಕ್ಕೆ ತವರು ನೆಲೆಯಾಗಿ ಸೂಚಿಸಲಾಗಿದೆ," ಎಂದು ಪಿಸಿಬಿ ಮೂಲಗಳು ಹೇಳಿವೆ.
ಕಳೆದ ವರ್ಷ ಭಾರತ ತಂಡವು ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲು ನಿರಾಕರಿಸಿತು. ಅದಾದನಂತರ ಭಾರತದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು. ಅಂತಿಮವಾಗಿ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ ಗೆಲುವು ಸಾಧಿಸಿ 8ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆಯೇ?
ಮುಂದಿನ ವರ್ಷ ಫೆಬ್ರವರಿ 19ರಿಂದ ಮಾರ್ಚ್ 9ರ ನಡುವೆ ಪಾಕಿಸ್ತಾನ ಪ್ರಮುಖ ಐಸಿಸಿ 50-ಓವರ್‌ಗಳ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಸಂಭಾವ್ಯವಾಗಿ ಆಯೋಜಿಸಲಿದೆ.
ಐಸಿಸಿ ಕಾರ್ಯಕಾರಿ ಮಂಡಳಿಯು ಕರಡು ವೇಳಾಪಟ್ಟಿಯನ್ನು ಇನ್ನೂ ಅನುಮೋದಿಸಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕರಾಚಿ ಮತ್ತು ರಾವಲ್ಪಿಂಡಿಯನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಇತರ ಸ್ಥಳಗಳಾಗಿ ಆಯ್ಕೆ ಮಾಡಿದೆ.
1996ರ ನಂತರ ಪಾಕಿಸ್ತಾನ ಯಾವುದೇ ಪ್ರಮುಖ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಆದರೂ ಅದು 2008ರಲ್ಲಿ ಸಂಪೂರ್ಣ ಏಷ್ಯಾ ಕಪ್ ಮತ್ತು ಕಳೆದ ವರ್ಷ ಇದೇ ಏಷ್ಯಾ ಕಪ್‌ನ ಕೆಲವೇ ಪಂದ್ಯಗಳನ್ನು ಆಯೋಜಿಸಿತ್ತು.
ಐಸಿಸಿ ಪಂದ್ಯಾವಳಿಗಾಗಿ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತದೆಯೇ ಎಂಬುದನ್ನು ಬಿಸಿಸಿಐ ಇನ್ನೂ ಔಪಚಾರಿಕವಾಗಿ ಖಚಿತಪಡಿಸಿಲ್ಲ ಮತ್ತು ಅದು ಕಷ್ಟಸಾಧ್ಯವಾಗಿದೆ.
ಭಾನುವಾರ, ನ್ಯೂಯಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ 6 ರನ್‌ಗಳ ಅವಮಾನಕಾರಿ ಸೋಲಿನ ನಂತರ, ಪಾಕಿಸ್ತಾನ ತಂಡದಲ್ಲಿ ಪ್ರಮುಖ ಕೂಲಂಕುಷ ಬದಲಾವಣೆ ನಡೆಯಲಿದೆ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೂಚಿಸಿದ್ದಾರೆ.
ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಎಲ್ಲಾ ಮೂರು ಕ್ರೀಡಾಂಗಣಗಳನ್ನು ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ನವೀಕರಿಸಲಾಗುವುದು ಎಂದು ಮೊಹ್ಸಿನ್ ನಖ್ವಿ ಹೇಳಿದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮೊದಲು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಭಾಗವಹಿಸುವ ತಂಡಗಳೊಂದಿಗೆ ಯೋಜಿಸಿರುವ ತ್ರಿಕೋನ ಸರಣಿಯ ಕಾರಣ, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಂದ್ಯಾವಳಿಯನ್ನು ಆಯೋಜಿಸುವುದಾಗಿ ಪಿಸಿಬಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications