ಭಾರತವೇ ಫೇವರಿಟ್ ಎಂದ ಪಾಕಿಸ್ತಾನದ ಅಪ್ಪಟ ಅಭಿಮಾನಿ
ಲಂಡನ್, ಮೇ 31 : ಚಾಂಪಿಯನ್ಸ್ ಟ್ರೋಫಿಯಲ್ಲಿ ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಸೆಣಸಲಿದೆ. ಇದಕ್ಕಾಗಿ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಎಜ್ ಬಾಸ್ಟನ್ ನತ್ತ ಮುಖ ಮಾಡಿದ್ದಾರೆ.
ಭಾರತದ ಸಚಿನ್ ಫ್ಯಾನ್ ಸುಧೀರ್ ಗೌತಮ್ ರಂತೆ ಪಾಕಿಸ್ತಾನದ ಅಪ್ಪಟ ಅಭಿಮಾನಿ 'ಚಾಚಾ ಶಿಕಾಗೋ' ಅಲಿಯಾಸ್ ಬಷಿರ್ ಕೂಡಾ ಈ ಮಹಾನ್ ಕದನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ನಡುವೆ ಬಷೀರ್ ತಮ್ಮ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ.[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]
ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೇಲುಗೈ ಸಾಧಿಸುವುದು ಖಚಿತ.[ಎಲ್ಲಕ್ಕಿಂತ ಹೆಚ್ಚಿನ ಮೋಹ ಯಾವುದದು, ಈ ಜಾಹೀರಾತು ನೋಡಿ!]

ಪಾಕಿಸ್ತಾನದಲ್ಲಿ ಈಗ ಈ ಮುಂಚಿನ ಶಕ್ತಿ ಇಲ್ಲ, ಟೀಂ ಇಂಡಿಯಾದ ಆಟಗಾರರು ಉತ್ತಮ ಲಯದಲ್ಲಿದ್ದಾರೆ ಎಂದು ಬಷಿರ್ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತ ತುಂಬಾ ಮುಂದೆ ಹೋಗಿದೆ, ಈಗ ಯಾವುದೇ ಬಿರುಸಿನ ಪಂದ್ಯ ನಿರೀಕ್ಷೆಯಿಲ್ಲ ಎಂದಿದ್ದಾರೆ.[ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]
2011ರ ವಿಶ್ವಕಪ್ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಮಿಸ್ ಮಾಡಿಕೊಂಡಿಲ್ಲ. ಆದರೆ, ಈ ಬಾರಿ ರಮ್ಜಾನ್ ಇರುವುದರಿಂದ ಬರ್ಮಿಂಗ್ ಹ್ಯಾಮ್ ಗೆ ಹೋಗಲು ಆಗುತ್ತಿಲ್ಲ. ಭಾರತ ಹಾಗು ಪಾಕಿಸ್ತಾನ ಪಂದ್ಯ ನೋಡಲು ಬರುತ್ತಿದ್ದೀರಾ ಎಂದು ಕೇಳಿಕೊಂಡು ಸುಧೀರ್ ನನಗೆ ಕರೆ ಮಾಡಿದ್ದ.
ಆದರೆ, ನಾನು ಮೆಕ್ಕಾಗೆ ಹೋಗುತ್ತಿರುವುದರಿಂದ ಪಂದ್ಯ ನೋಡಲು ಮೈದಾನಕ್ಕೆ ಬರುತ್ತಿಲ್ಲ. ನನ್ನ ಪ್ರಕಾರ ಟೀಂ ಇಂಡಿಯಾಗೆ ಸುಲಭ ಜಯ ಸಿಗಲಿದೆ ಎಂದು ಕರಾಚಿ ಮೂಲದ 64 ವರ್ಷ ವಯಸ್ಸಿನ ಚಾಚಾ ಹೇಳಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Pakistan fan turns India supporter
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications