ಹೈವೋಲ್ಟೇಜ್ ಪಂದ್ಯಕ್ಕೆ ಕೆಲವೇ ಗಂಟೆಗೆ ಮುನ್ನ ಇದೇನು ಟ್ವಿಟ್ಟರ್ ಟ್ರೆಂಡಿಂಗ್
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಜೊತೆ ಇಂದು (ಜೂ 4) ಎಜ್ ಬಾಸ್ಟನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಪಂದ್ಯಕ್ಕೆ ಮುನ್ನ ಸಾಮಾಜಿಕ ತಾಣದಲ್ಲಿ, ಉಗ್ರರನ್ನು ಬೆಂಬಲಿಸುವ ದೇಶದ ಜೊತೆ ಪಂದ್ಯ ಆಡದಂತೆ 'ಅಭಿಯಾನ' ಟ್ರೆಂಡಿಂಗ್ ನಲ್ಲಿದೆ.
ಶನಿವಾರ (ಜೂ 3) ರಾತ್ರಿಯಿಂದ ಆರಂಭವಾಗಿರುವ #WalkOutFromPakMatch ಅಭಿಯಾನ ಟ್ವಿಟ್ಟರ್ ನಲ್ಲಿ ಭರ್ಜರಿ ಟ್ರೆಂಡಿಂಗ್ ನಲ್ಲಿದ್ದು, ಪರ ವಿರೋಧ ಟ್ವೀಟುಗಳು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದೆ.[ಭಾರತ-ಪಾಕ್ ಮುಖಾಮುಖಿ: ಇತಿಹಾಸ ಹೇಳುವ 5 ಮಹತ್ವದ ಅಂಶ]
ನಮ್ಮ ಯೋಧರ ಶವವನ್ನು ವಿರೂಪಗೊಳಿಸುವುದು, ಗಡಿ ಉಲ್ಲಂಘನೆ, ಉಗ್ರರಿಗೆ ಬೆಂಬಲ ನೀಡುವ 'ನೀಚ ಪಾಕಿಸ್ತಾನದಂತ' ದೇಶದ ಜೊತೆ ಕ್ರೀಡೆ ಸೇರಿದಂತೆ, ಯಾವುದೇ ಸಂಬಂಧ ಇಟ್ಟುಕೊಳ್ಳಬಾರದೆಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಸಿಸಿಐ ಈ ಕೂಡಲೇ ಉಗ್ರ ದೇಶದ ಜೊತೆಗೆ ಪಂದ್ಯವನ್ನು ಆಡುವುದಿಲ್ಲ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮುಂದೆ ಪ್ರಸ್ತಾವನೆ ಸಲ್ಲಿಸಬೇಕೆಂದು ಟ್ವಿಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಈ ಕೆಲಸವನ್ನು ಹಿಂದೆನೇ ಮಾಡಬೇಕಿತ್ತು, ಪಂದ್ಯ ಶುರುವಾಗುವ ಕೆಲವೇ ಗಂಟೆಯ ಮುಂದೆ ಹೀಗೆ ಒತ್ತಾಯಿಸಿದರೆ, ಪಾಕ್ ಜೊತೆ ಆಡಲು ನಮ್ಮ ಕ್ರಿಕೆಟಿಗರಿಗೆ ಸಾಮರ್ಥ್ಯವಿಲ್ಲ ಎನ್ನುವ ಸಂದೇಶ ರವಾನೆಯಾಗುತ್ತೆ ಎನ್ನುವ ಪ್ರತ್ಯುತ್ತರವೂ ಬರುತ್ತಿದೆ.[ಭಾರತವನ್ನು ಪಾಕ್ ಮಣಿಸುವುದು ಕಷ್ಟಸಾಧ್ಯ ಎಂದ ಅಫ್ರೀದಿ]
#WalkOutFromPakMatch ಹ್ಯಾಷ್ ಟ್ಯಾಗಿನಲ್ಲಿನ ಕೆಲವೊಂದು ಸ್ಯಾಂಪಲ್ ಟ್ವೀಟುಗಳು, ಮುಂದೆ ಓದಿ..
ವಾಕ್ ಔಟ್ ಫ್ರಂಮ್ ಪಾಕ್ ಮ್ಯಾಚ್ ಟ್ರೆಂಡಿಂಗ್
ಎಲ್ಲಿಯವರೆಗೆ ಭಾರತದ ಯೋಧರು ಮಹಾನರೋ, ಅಲ್ಲಿಯವರೆಗೆ ನಿಮ್ಮ ಕ್ರಿಕೆಟ್ ಕೂಡಾ ಮಹಾನ್. ವಾಕ್ ಔಟ್ ಫ್ರಂಮ್ ಪಾಕ್ ಮ್ಯಾಚ್
ಪಾಕ್, ಮ್ಯಾಚ್ ಆಡಿ ಪಂದ್ಯ ಸೋಲಲಿ
ಯಾಕೆ ಮ್ಯಾಚ್ ಬಹಿಷ್ಕರಿಸಬೇಕು. ಅವರ ದೇಶದಲ್ಲಂತೂ ಅವರಿಗೆ ಆಡಲು ಆಗುತ್ತಿಲ್ಲ, ಮ್ಯಾಚ್ ಆಡಿ ಪಂದ್ಯ ಸೋಲಲಿ.

ಕಾಬೂಲ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರ
ಅಫ್ಘಾನಿಸ್ಥಾನದಂತಹ ಸಣ್ಣ ಮುಸ್ಲಿಂ ದೇಶ, ಕಾಬೂಲ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಸಂಬಂಧವನ್ನು ಕಡಿದುಕೊಂಡಿದೆ. ನಮ್ಮ ದೇಶಕ್ಕೆ ಇದ್ಯಾಕೆ ಸಾಧ್ಯವಿಲ್ಲ?
ಪಾಕ್ ಜೊತೆ ಪಂದ್ಯ ಆಡಬಾರದು
ಪಾಕ್ ಜೊತೆ ಪಂದ್ಯ ಆಡಬಾರದು ಎನ್ನುವುದು ಮೂರ್ಖರ ನಿರ್ಧಾರ, ಮ್ಯಾಚ್ ಆಡಿ ಗೆದ್ದು ಕಾಶ್ಮೀರ ವಿಷಯ ಇತ್ಯರ್ಥಗೊಳಿಸಿ ಎನ್ನುವ ಗೊತ್ತುಗುರಿಯಿಲ್ಲದ ಟ್ವೀಟ್

ಪಾಕ್ ಜೊತೆ ಕ್ರಿಕೆಟ್ ಸಂಬಂಧ ಯಾಕೆ ಬೇಡ?
ಪಾಕಿಸ್ತಾನದ ಜೊತೆಗಿನ ಪಂದ್ಯದಿಂದ ಹೊರಗೆ ನಡೆಯಬೇಡಿ, ಕಾರಣ ಇಲ್ಲಿದೆ...
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications