Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿರುದ್ಧ ಗೆದ್ದು, ಸೆಮೀಸ್ ಗೆ ಲಗ್ಗೆ ಇಟ್ಟ ಪಾಕಿಸ್ತಾನ

ಕಾರ್ಡಿಫ್, ಜೂನ್ 12: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ ಅಲ್ಪಮೊತ್ತಕ್ಕೆ ಕುಸಿಯಿತು. ಉತ್ಸಾಹದಿಂದ ಚೇಸ್ ಮಾಡಿದ ಪಾಕಿಸ್ತಾನ ಏಳು ವಿಕೆಟ್ ಕಳೆದುಕೊಂಡರೂ ಹೋರಾಟ ಮುಂದುವರೆಸಿ,3 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ, ಸೆಮಿಫೈನಲ್ ತಲುಪಿದೆ.

ಗ್ಯಾಲರಿ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ಉಪಾಂತ್ಯಕ್ಕೆ ಲಗ್ಗೆ ಇಟ್ಟ ಭಾರತ

ಪಾಕಿಸ್ತಾನ ಚೇಸ್:
*
74/1 ಸ್ಕೋರ್ ನಿಂದ 137/6ಗೆ ಕುಸಿದಿದ್ದ ಪಾಕಿಸ್ತಾನ ತಂಡ
* ನಾಯಕ ಸರ್ಫರಾಜ್ ಅಹ್ಮದ್ ಅಜೇಯ 71 ಹಾಗೂ ಮೊಹಮ್ಮದ್ ಅಮೀರ್ ಅಜೇಯ 28ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು

In Pics : ಶ್ರೀಲಂಕಾದ ಸೆಮೀಸ್ ಕನಸು ಭಗ್ನಗೊಳಿಸಿದ ಪಾಕಿಸ್ತಾನ

* 237ರನ್ ಗಳನ್ನು 44.5 ಓವರ್ ಗಳಲ್ಲಿ ಚೇಸ್ ಮಾಡಿ, 3 ವಿಕೆಟ್ ಗಳಿಂದ ಗೆದ್ದ ಪಾಕಿಸ್ತಾನ
*
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಜೂನ್ 14ರಂದು ಮೊದಲ ಸೆಮಿಫೈನಲ್ ನಲ್ಲಿ ಸೆಣಸಲಿದೆ.

Pakistan vs Sri Lanka

ಶ್ರೀಲಂಕಾ ಇನ್ನಿಂಗ್ಸ್:
* ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶ್ರೀಲಂಕಾಕ್ಕೆ ಆರಂಭಿಕ ಆಟಗಾರ ನಿರೋಶನ್ ಡಿಕ್ ವೆಲ್ಲಾ ಅರ್ಧಶತಕ(73ರನ್) ಬಾರಿಸಿ ಆಸರೆಯಾದರು.
* ಪಾಕಿಸ್ತಾನ ಪರ ಜುನೈದ್ ಖಾನ್, ಹಸನ್ ಅಲಿಗೆ ತಲಾ 3 ವಿಕೆಟ್ ಗಳಿಸಿದರು. ಚೊಚ್ಚಲ ಪಂದ್ಯವಾಡುತ್ತಿರುವ ಫಾಹೀಮ್ ಅಶ್ರಫ್ 2 ವಿಕೆಟ್ ಕಿತ್ತು ಗಮನ ಸೆಳೆದರು.

VIDEO: ಲಂಕಾ-ಪಾಕ್ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವಿಶೇಷತೆ
ಈ ಲೀಗ್ ಪಂದ್ಯವನ್ನು ಗೆದ್ದವರು ಎ ಗುಂಪಿನ ಅಗ್ರಸ್ಥಾನಿ ಇಂಗ್ಲೆಂಡ್ ವಿರುದ್ಧ ಜೂನ್ 14ರಂದು ಮೊದಲ ಸೆಮಿಫೈನಲ್ ಆಡುವ ಅರ್ಹತೆ ಪಡೆಯಲಿದೆ.
Champions Trophy: Pakistan bowl against Sri Lanka

ಒಂದು ವೇಳೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡವು 265 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳ ಅಂತರದ ಗೆಲುವು ಸಾಧಿಸಿದರೆ ಉತ್ತಮ ರನ್ ರೇಟ್ ಆಧಾರ ಮೇಲೆ ಬಿ ಗುಂಪಿನ ಅಗ್ರಸ್ಥಾನಕ್ಕೇರಲಿದ್ದು, ಬಾಂಗ್ಲಾದೇಶ ವಿರುದ್ಧ ಆಡಬೇಕಾಗುತ್ತದೆ.



ಟೀಂ ಇಂಡಿಯಾ ಸದ್ಯಕ್ಕೆ ಬಿ ಗುಂಪಿನ ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಫಾಹೀಮ್ ಅಶ್ರಫ್ ಅವರು ಚೊಚ್ಚಲ ಪಂದ್ಯವನ್ನಾಡುತ್ತಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+