ಲಂಡನ್, ಜೂನ್ 19: ಟೀಂ ಇಂಡಿಯಾ ಡ್ರೆಸಿಂಗ್ ರೂಮಿನಲ್ಲಿ ನಿನ್ನೆ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ಕಿತ್ತಾಡಿಕೊಂಡರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಚಿನ್ ಅವರ ಸ್ಫೂರ್ತಿಗೆ ಬೆಲೆ ಸಿಗಲಿಲ್ಲ. ಸಚಿನ್ ಅವರ ಆಸೆಗೆ ನಿರಾಶೆ ಮೂಡಿಸಿದ್ದಕ್ಕಾಗಿ ಟೀಂ ಇಂಡಿಯಾದ ಹಲವು ಸದಸ್ಯರು ನಿರಾಶೆಯಲ್ಲಿದ್ದಾರೆ.
ಭಾರತದ ಯುವ ಆಟಗಾರರಿಗೆ ಸ್ಫೂರ್ತಿ ತುಂಬಲು ಸಚಿನ್ ತೆಂಡೂಲ್ಕರ್ ಅವರೇನೂ ಓವಲ್ ಮೈದಾನಕ್ಕೆ ಬಂದಿರಲಿಲ್ಲ. ಆದರೆ, ಸಚಿನ್ ಅವರ ಬದಲಿಗೆ ಅವರ ಹೆಲ್ಮೆಟ್ ವೊಂದನ್ನು ಟೀಂ ಇಂಡಿಯಾ ಡ್ರೆಸಿಂಗ್ ರೂಮಿನಲ್ಲಿರಿಸಲಾಗಿತ್ತು.

ಡ್ರೆಸಿಂಗ್ ರೂಮಿನ ಗೋಡೆಯೊಂದರ ಮೇಲೆ ಸಚಿನ್ ಅವರು ಬಳಸುತ್ತಿದ್ದ ಹೆಲ್ಮೆಟ್ ತೂಗು ಹಾಕಲಾಗಿತ್ತು. ಅದರ ಕೆಳಗಡೆ 1996-2000 ಎಂದು ಬರೆಯಲಾಗಿದ್ದು, ಸಚಿನ್ ಅವರ ಹಸ್ತಾಕ್ಷರವೂ ಇದೆ. ಅದರ ಕೆಳಗೆ 23 ಟೆಸ್ಟ್ ಕ್ರಿಕೆಟ್ ಪಂದ್ಯ ಹಾಗೂ 730 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಎಂದು ಬರೆಯಲಾಗಿದೆ.