ಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ವೇಳಾಪಟ್ಟಿ, ಟಿವಿ ಪ್ರಸಾರ ಮಾಹಿತಿ
ಲಂಡನ್, ಜೂನ್ 11: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಉಪಾಂತ್ಯ ಹಂತ ತಲುಪಿದೆ. ಮೂರು ತಂಡಗಳು ಜೂನ್ 11ರಂದೇ ಸೆಮಿಫೈನಲ್ ಹಂತಕ್ಕೇರಿವೆ. ನಾಲ್ಕನೇ ತಂಡ ಯಾವುದು ಎಂಬ ಕುತೂಹಲಕ್ಕೆ ಜೂನ್ 12ರಂದು ಉತ್ತರ ಸಿಕ್ಕಿದೆ. ಶ್ರೀಲಂಕಾವನ್ನು 3 ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ತಂಡ, ಸೆಮೀಸ್ ಗೆ ಲಗ್ಗೆ ಇಟ್ಟಿದೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಭಾನುವಾರ (ಜೂನ್ 11) ದಂದು ಓವಲ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ ಗಳ ಅಂತರದ ಸುಲಭ ಜಯ ದಾಖಲಿಸಿದ ಹಾಲಿ ಚಾಂಪಿಯನ್ಸ್ ಟೀಂ ಇಂಡಿಯಾ, ಸೆಮಿಫೈನಲ್ ತಲುಪಿದ ಮೂರನೇ ತಂಡ ಎನಿಸಿತು.
ವಿರಾಟ್ ಕೊಹ್ಲಿ ಪಡೆ ಬಿ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕು ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದ್ದರೆ, ಎ ಗುಂಪಿನಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ(6 ಅಂಕಗಳು) ಹಾಗೂ ಬಾಂಗ್ಲಾದೇಶ ಎರಡನೇ ಸ್ಥಾನ(3 ಅಂಕಗಳು) ದಲ್ಲಿದೆ.

ಒಂದು ಪಂದ್ಯ ಗೆದ್ದು, ಒಂದು ಪಂದ್ಯ ಸೋತು, ಒಂದು ಮಳೆಯಿಂದ ರದ್ದಾದ ಪಂದ್ಯದಲ್ಲಿ ಒಂದು ಅಂಕ ಗಳಿಸುವ ಮೂಲಕ ಮುರ್ತಜಾ ನೇತೃತ್ವದ ಬಾಂಗ್ಲಾದೇಶ ತಂಡ ಮೊದಲ ಚಾಂಪಿಯನ್ಸ್ ಟ್ರೋಫಿಯಲ್ಲೇ ಸೆಮಿಸ್ ಹಂತಕ್ಕೇರಿದೆ.
ಗ್ಯಾಲರಿ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ಉಪಾಂತ್ಯಕ್ಕೆ ಲಗ್ಗೆ ಇಟ್ಟ ಭಾರತ
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:
ಜೂನ್ 14 (ಬುಧವಾರ) - ಮೊದಲ ಸೆಮಿಫೈನಲ್ (ಎ 1) ಇಂಗ್ಲೆಂಡ್ ವಿರುದ್ಧ (ಬಿ2) ಪಾಕಿಸ್ತಾನ
* ಸಮಯ 3 PM IST (10.30 AM Local, 9.30 AM GMT)
* ಕಾರ್ಡಿಫ್ ವೇಲ್ಸ್ ಸ್ಟೇಡಿಯಂ, ಕಾರ್ಡಿಫ್
ಜೂನ್ 15 (ಗುರುವಾರ) - 2ನೇ ಸೆಮಿಫೈನಲ್ (ಎ2) ಬಾಂಗ್ಲಾದೇಶ ವಿರುದ್ಧ (ಬಿ1) ಭಾರತ
* ಸಮಯ 3 PM IST (10.30 AM Local, 9.30 AM GMT)
* ಎಜ್ ಬಾಸ್ಟನ್, ಬರ್ಮಿಂಗ್ ಹ್ಯಾಮ್
ಜೂನ್ 18 (ಭಾನುವಾರ)- ಫೈನಲ್
* ಸಮಯ 3 PM IST (10.30 AM Local, 9.30 AM GMT)
* ದಿ ಓವಲ್, ಲಂಡನ್
ಸೂಚನೆ: ಎಲ್ಲಾ ಪಂದ್ಯಗಳು ಸ್ಟಾರ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ, ಮೊಬೈಲ್ ನಲ್ಲಿ ಹಾಟ್ ಸ್ಟಾರ್.ಕಾಂನಲ್ಲಿ ನೋಡಬಹುದು.
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications