Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2023ರ ವಿಶ್ವಕಪ್ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ?; ಭದ್ರತಾ ಕಾಳಜಿ ಎತ್ತಿದ ಹೈದರಾಬಾದ್ ಪೊಲೀಸರು

ಭಾರತದಲ್ಲಿ ಅಕ್ಟೋಬರ್ 5ರಿಂದ ಆರಂಭವಾಗುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಂಡಿದೆ. ಆದರೆ, ಇದೀಗ ಮತ್ತೊಮ್ಮೆ ವೇಳಾಪಟ್ಟಿಯಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಇದೆ.

ಹೈದರಾಬಾದ್ ಕ್ರಿಕೆಟ್ ಸಂಸ್ಥೆಯು (ಹೆಚ್‌ಸಿಎ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಈ ಬಗ್ಗೆ ತಿಳಿಸಿದ್ದು, ಸತತ ದಿನಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವುದು ಕಷ್ಟವಾಗಬಹುದು ಎಂದಿದೆ.

Changes In World Cup 2023 Schedule Again?; Hyderabad Police Raises Security Concerns

ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಅಕ್ಟೋಬರ್ 9ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಮರುದಿನ ಅಂದರೆ, ಅಕ್ಟೋಬರ್ 10ರಂದು ಅದೇ ಸ್ಥಳದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇದೇ ವೇಳೆ ಹೈದರಾಬಾದ್ ಪೊಲೀಸರು ಎರಡು ಪಂದ್ಯಗಳ ನಡುವೆ ಯಾವುದೇ ಅಂತರವಿಲ್ಲದ ಬಗ್ಗೆ ಭದ್ರತಾ ಕಳವಳ ಹೊರಹಾಕಿದ್ದಾರೆ. ಅದರಲ್ಲಿಯೂ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳಿಗೆ ವಿಶೇಷ ಕಾಳಜಿ ಹೊಂದಿದೆ.

ಈ ಮೊದಲು ಪಂದ್ಯವನ್ನು ಅಕ್ಟೋಬರ್ 12ರಂದು ನಿಗದಿಪಡಿಸಲಾಗಿತ್ತು. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯವನ್ನು ಅಕ್ಟೋಬರ್ 14ಕ್ಕೆ ಮರು ನಿಗದಿಪಡಿಸಲಾಗಿದೆ.

ಈ ಪಂದ್ಯದ ನಡುವೆ ಅಂತರವನ್ನು ಹೆಚ್ಚು ಮಾಡಲು ಮತ್ತು ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಸಮಯವನ್ನು ನೀಡುವ ಸಲುವಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ಪಂದ್ಯವನ್ನು ಮುಂಚಿತವಾಗಿ ಆಡಿಸಲು ತೀರ್ಮಾನಿಸಲಾಗಿದೆ.

ಗುಜರಾತ್‌ನಲ್ಲಿ ನಡೆಯುವ ನವರಾತ್ರಿ ಉತ್ಸವದ ಮೊದಲ ದಿನದಂದು ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಭದ್ರತಾ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಕಾಳಜಿ ವ್ಯಕ್ತಪಡಿಸಿದ ನಂತರ, ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಬದಲಾಯಿಸಲಾಯಿತು.

ಇದೇ ರೀತಿಯ ಪರಿಸ್ಥಿತಿಯು ನವೆಂಬರ್ 12ರಂದು ಕೋಲ್ಕತ್ತಾದಲ್ಲಿ ಕಾಳಿ ಪೂಜೆಯ ದಿನದಂದು ನಡೆಯುವ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಪಂದ್ಯಕ್ಕೂ ತಟ್ಟಿತು ಮತ್ತು ಇದರ ಪರಿಣಾಮವಾಗಿ ಆ ಪಂದ್ಯವನ್ನು ನವೆಂಬರ್ 11ಕ್ಕೆ ಮರು ನಿಗದಿಪಡಿಸಲಾಗಿದೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದೆ. ವಿಶ್ವಕಪ್ ಟಿಕೆಟ್‌ಗಳು ಆಗಸ್ಟ್ 25ರಿಂದ ಅಧಿಕೃತವಾಗಿ ಮಾರಾಟವಾಗಲಿವೆ.

Story first published: Sunday, August 20, 2023, 15:18 [IST]
Other articles published on Aug 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+