Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೇಸಿಂಗ್ ನಲ್ಲಿ ಶತಕ: ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಕಿಂಗ್ ಸ್ಟನ್ (ವೆಸ್ಟ್ ಇಂಡೀಸ್), ಜುಲೈ 7: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಭಾರತೀಯ ತಂಡವು ಎದುರಾಳಿ ತಂಡದ ಮೊತ್ತವನ್ನು ಬೆನ್ನಟ್ಟುವ ಪ್ರಯತ್ನದ ವೇಳೆ ಅತಿ ಹೆಚ್ಚು ಬಾರಿ ಶತಕ ಸಿಡಿಸಿದ ವಿಶ್ವ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರುವಾರ ರಾತ್ರಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಜೇಯ 111 ರನ್ ಸಿಡಿಸಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದು ಕೊಹ್ಲಿಯವರ ವೃತ್ತಿಜೀವನದ 28ನೇ ಏಕದಿನ ಶತಕ. ಅಲ್ಲದೆ, ಚೇಸಿಂಗ್ ವೇಳೆಯಲ್ಲಿ ಸಿಡಿಸಿದ 18ನೇ ಏಕದಿನ ಶತಕ. ಸಚಿನ್ ತೆಂಡೂಲ್ಕರ್ ಅವರು ಚೇಸಿಂಗ್ ವೇಳೆ ಸಚಿನ್ ಅವರು 17 ಶತಕ ಸಿಡಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ, ಭಾರತ 8 ವಿಕೆಟ್ ಗಳ ಜಯ ಗಳಿಸಿತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ಗೆ 206 (ಶಾಯ್ ಹೋಪ್ 51, ಕೈಲ್ ಹೋಪ್ 46; ಮೊಹಮ್ಮದ್ ಶಮಿ 48ಕ್ಕೆ 4, ಉಮೇಶ್ ಯಾದವ್ 53ಕ್ಕೆ 2); ಭಾರತ 36.5 ಓವರ್ ಗಳಿಗೆ 206 (ವಿರಾಟ್ ಕೊಹ್ಲಿ ಅಜೇಯ 111, ದಿನೇಶ್ ಕಾರ್ತಿಕ್ 50; ಅಲ್ಜಾರಿ ಜೋಸೆಫ್ 39ಕ್ಕೆ 1, ದೇವೇಂದ್ರ ಬಿಶೂ 42ಕ್ಕೆ 1). ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.

'Chase Master' Virat Kohli breaks yet another Sachin Tendulkar record


ಚೇಸಿಂಗ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಇತರ ಕ್ರೀಡಾಳುಗಳು:

ವಿರಾಟ್ ಕೊಹ್ಲಿ* - 18 (102 ಇನಿಂಗ್ಸ್)

ಸಚಿನ್ ತೆಂಡೂಲ್ಕರ್ - 17 (232 ಇನಿಂಗ್ಸ್)

ತಿಲಕರತ್ನೆ ದಿಲ್ಶಾನ್ - 11 (116 ಇನಿಂಗ್ಸ್)

ಕ್ರಿಸ್ ಗೇಲ್ - 11* (139 ಇನಿಂಗ್ಸ್)

ಯಶಸ್ವಿ ಚೇಸಿಂಗ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರು:

ವಿರಾಟ್ ಕೊಹ್ಲಿ - 16*

ಸಚಿನ್ ತೆಂಡೂಲ್ಕರ್ - 14

ಸಯೀದ್ ಅನ್ವರ್/ ತಿಲಕರತ್ನೆ ದಿಲ್ಶಾನ್/ ಸನತ್ ಜಯಸೂರ್ಯ - 9

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರು:

ಸಚಿನ್ ತೆಂಡೂಲ್ಕರ್ - 49 (452 ಇನಿಂಗ್ಸ್)

ರಿಕಿ ಪಾಂಟಿಂಗ್ - 30 (365 ಇನಿಂಗ್ಸ್)

ಸನತ್ ಜಯಸೂರ್ಯ - 28 (433 ಇನಿಂಗ್ಸ್)

ಕುಮಾರ ಸಂಗಕ್ಕಾರ - 25 (380 ಇನಿಂಗ್ಸ್)

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+