Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 CSK : ಸಿಎಸ್‌ಕೆ ವಿರುದ್ಧ ಮತ್ತೊಂದು ಗಂಭೀರ ಆರೋಪ; ಬ್ಯಾನ್ ಆಗುತ್ತಾ ಚೆನ್ನೈ ತಂಡ?

ಭಾನುವಾರ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಸಿಎಸ್‌ಕೆ ತಮ್ಮ ಐಪಿಎಲ್ 2025ರ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು. ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಅರ್ಧಶತಕಗಳನ್ನು ಗಳಿಸಿದರೆ, ನೂರ್ ಅಹ್ಮದ್ ಮತ್ತು ಖಲೀಲ್ ಅಹ್ಮದ್ ಜೋಡಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದ್ದ ಪಿಚ್ ಲಾಭವನ್ನು ನೂರ್ ಅಹ್ಮದ್ ಪಡೆದುಕೊಂಡು 4 ವಿಕೆಟ್‌ಗಳನ್ನು ಪಡೆದರು. ಮತ್ತೊಂದೆಡೆ ಎಡಗೈ ವೇಗಿ ಖಲೀಲ್ ಅಹ್ಮದ್ ಕೂಡ ಸಿಎಸ್‌ಕೆ ಪರ 3 ವಿಕೆಟ್ ಪಡೆಯುವ ಮೂಲಕ ಸುದ್ದಿಯಾದರು.

ಈ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗಂಭೀರ್ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಆರೋಪದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಆರೋಪ ಸಾಬೀತಾದರೆ ಸಿಎಸ್‌ಕೆ ಬ್ಯಾನ್ ಆಗಲಿದೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.

Chennai Super Kings team accused of ball tampering

ಬಾಲ್ ಟೆಂಪರಿಂಗ್

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಬಾಲ್ ಟೆಂಪರಿಂಗ್ ಆರೋಪ ಕೇಳಿ ಬಂದಿದೆ. ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಖಲೀಲ್ ಅಹ್ಮದ್ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಖಲೀಲ್ ತನ್ನ ಜೇಬಿನಿಂದ ಏನೋ ತೆಗೆದುಕೊಂಡು ಅದನ್ನು ಕ್ಯಾಪ್ಟನ್ ರುತುರಾಜ್‌ ಅವರಿಗೆ ನೀಡಿದ್ದಾರೆ. ವಿಡಿಯೋ ನೋಡಿದ ನಂತರ, ಅಭಿಮಾನಿಗಳು ಇಬ್ಬರೂ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಐಪಿಎಲ್ ಅಧಿಕಾರಿಗಳು ಸಿಎಸ್‌ಕೆ ತಂಡಕ್ಕೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಅಲ್ಲದೆ, ಐಪಿಎಲ್‌ನಿಂದ ಸಿಎಸ್‌ಕೆ ತಂಡವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಫಿಕಿಂಗ್ಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಸಿಎಸ್‌ಕೆ ತಂಡವನ್ನು 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಸಿಎಸ್‌ಕೆ ತಂಡ ಬ್ಯಾನ್ ಆಗುತ್ತಾ? ಎಂಬುದು ಕುತೂಹಲ ಮೂಡಿಸಿದೆ.

ಪಂದ್ಯದಲ್ಲಿ ಏನಾಯಿತು?

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್ ಗಳಿಸಿತು. ಎಂಐ ಪರ ತಿಲಕ್ ವರ್ಮಾ 31, ಸೂರ್ಯಕುಮಾರ್ ಯಾದವ್ 29 ಮತ್ತು ದೀಪಕ್ ಚಹಾರ್ 28 ರನ್ ಗಳಿಸಿದರು. ಚೆನ್ನೈ ಪರ ನೂರ್ ಅಹ್ಮದ್ 4 ವಿಕೆಟ್ ಮತ್ತು ಖಲೀಲ್ ಅಹ್ಮದ್ 3 ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಚೆನ್ನೈ ತಂಡ 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ರಚಿನ್ ರವೀಂದ್ರ ಅಜೇಯ 65 ರನ್ ಕಲೆ ಹಾಕಿದರು. ನಾಯಕ ರುತುರಾಜ್ ಗಾಯಕ್ವಾಡ್ 53 ರನ್ ಗಳಿಸಿದರು. ಚೆನ್ನೈ ತಂಡವು ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದ್ದು, ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 29 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ.

Story first published: Monday, March 24, 2025, 20:15 [IST]
Other articles published on Mar 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+