ಕರಾಚಿ, ಆಗಸ್ಟ್ 21 : ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಚೀನಾ ಮೂಲದ ಮಿಂಗ್ ಲೀ ಆಡಿದ ಬಳಿಕ ಮತ್ತೊಮ್ಮೆ ಚೀನಾದ ಕ್ರಿಕೆಟ್ ಲೋಕಕ್ಕೆ ಶುಭ ಸುದ್ದಿ ಸಿಕ್ಕಿದೆ. ಪಾಕಿಸ್ತಾನದ ಸೂಪರ್ ಲೀಗ್ ಕ್ರಿಕೆಟ್ ನಲ್ಲಿ ಆಡಲು ಇಬ್ಬರು ಚೀನಿಯರು ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಇತಿಹಾಸ ಬರೆದ ಚೀನಾದ ಕ್ರಿಕೆಟರ್
ಭಯೋತ್ಪಾದನಾ ದಾಳಿಯ ಭೀತಿಯ ನಡುವೆ ಪಾಕಿಸ್ತಾನದಲ್ಲಿ ಆಡಲು ಚೀನಾದ ಕ್ರಿಕೆಟರ್ಸ್ ಮುಂದಾಗಿದ್ದಾರೆ. ಇಬ್ಬರು ಚೀನಿ ಕ್ರಿಕೆಟರ್ ಗಳು ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಆಡಲು ಸಜ್ಜಾಗಿದ್ದಾರೆ. ಚೀನಾದಲ್ಲಿ ಕ್ರಿಕೆಟ್ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು, ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ.

ಮುಂದಿನ ವರ್ಷ ನಡೆಯಲಿರುವ ಪಿಎಸ್ಎಲ್ ನಲ್ಲಿ ಪೇಷಾವರ್ ಝಲ್ಮಿ ತಂಡದ ಪರ ಇಬ್ಬರು ಆಟಗಾರರು ಆಡಲಿದ್ದಾರೆ ಎಂದು ಪಾಕಿಸ್ತಾನಿ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧಿಕಾರಿಗಳು ಹೇಳಿದ್ದಾರೆ.
ಪುರುಷ ಹಾಗೂ ಮಹಿಳೆಯರ ತಂಡವನ್ನು ಹೊಂದಿರುವ ಚೀನಾ, ಈಗಾಗಲೇ ಕ್ರಿಕೆಟ್ ಬಗ್ಗೆ ಆಸಕ್ತಿ ತೋರಿದ್ದು, ಕೆಲವು ಅಂತಾರಾಷ್ಟ್ರೀಯ ಟೂರ್ನಮೆಂಟ್ ಗಳಲ್ಲಿ ಆಡಿದ ಅನುಭವ ಹೊಂದಿದೆ.
ಚೀನಾದ ಜತೆ ಬಾಂಧವ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಚೀನಾದಲ್ಲಿ ತಟಸ್ಥ ಮೈದಾನವನ್ನು ಬಳಸಲು ಪಾಕಿಸ್ತಾನ ಮುಂದಾಗಿದೆ. ಇಲ್ಲಿ ತನಕ ಯುಎಇಯ ಮೈದಾನಗಳಲ್ಲಿ ಪಾಕಿಸ್ತಾನ ಪಂದ್ಯಗಳನ್ನಾಡುತ್ತಿದೆ. ಶ್ರೀಲಂಕಾ ಮಾತ್ರ ಪಾಕಿಸ್ತಾನಕ್ಕೆ ಹೋಗಿ ಪಂದ್ಯವಾಡುವ ಧೈರ್ಯ ಮಾಡಿದ್ದು. ಟಿ20 ಪಂದ್ಯ ನಿಗದಿಯಾಗಿರುವ ಸುದ್ದಿ ಬಂದಿದೆ.