For Quick Alerts
ALLOW NOTIFICATIONS  
For Daily Alerts
 

CWG 2022: ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನೂ ಆಡಿರದ ತಂಡದ ವಿರುದ್ಧ ಸೋತ ಪಾಕಿಸ್ತಾನ!

Commonwealth Games 2022: Barbados women beat Pakistan women in their first ever international clash
Commonwealth 2022 ಮೊದಲ ದಿನ ಭಾರತದ ಪ್ರದರ್ಶನ ಹೇಗಿತ್ತು | *Sports | OneIndia Kannada

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಪ್ರತಿಷ್ಠಿತ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಜುಲೈ 28ರಂದು ಅದ್ಧೂರಿಯಾಗಿ ಉದ್ಘಾಟನೆಯಾದ ಕ್ರೀಡಾಕೂಟದ ಸ್ಪರ್ಧೆ ಹಾಗೂ ಪಂದ್ಯಗಳು ನಿನ್ನೆಯಿಂದ ( ಜುಲೈ 29 ) ಆರಂಭಗೊಂಡಿವೆ. ಕ್ರಿಕೆಟ್ ಕೂಡಾ ಸೇರ್ಪಡೆಯಾಗಿರುವುದು ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದ ವಿಶೇಷತೆಯಾಗಿದೆ. ಹೌದು, ಈ ಬಾರಿ ಕಾಮನ್ ವೆಲ್ತ್ ಕ್ರೀಡಾಕೂಟದ ಆಟಗಳಲ್ಲಿ ಮಹಿಳಾ ಕ್ರಿಕೆಟ್ ಕೂಡ ಒಂದಾಗಿದ್ದು, ಕ್ರೀಡಾಕೂಟದ ಮೊದಲ ದಿನವೇ 2 ಪಂದ್ಯಗಳು ಜರುಗಿದವು.

ಕ್ರಿಕೆಟ್ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ವನಿತೆಯರ ತಂಡ ಹಾಗೂ ಬಾರ್ಬಡೋಸ್ ವನಿತೆಯರ ತಂಡಗಳು ಕಣಕ್ಕಿಳಿದವು. ಭಾರತೀಯ ವನಿತೆಯರ ತಂಡ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ತೀವ್ರ ಪೈಪೋಟಿಯನ್ನು ನಡೆಸಿ ರೋಚಕ ಹಣಾಹಣಿಯಲ್ಲಿ 3 ವಿಕೆಟ್‍ಗಳ ಸೋಲನ್ನು ಅನುಭವಿಸಿದರೆ, ಅತ್ತ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದನ್ನು ಆಡಲು ಕಣಕ್ಕಿಳಿದ ಕ್ರಿಕೆಟ್ ಶಿಶು ಬಾರ್ಬಡೋಸ್ ವನಿತೆಯರ ತಂಡದ ವಿರುದ್ಧ ಹೀನಾಯವಾಗಿ ಸೋತು ತೀವ್ರ ಮುಖಭಂಗಕ್ಕೊಳಗಾಗಿದೆ.

15 ರನ್‌ಗಳ ಜಯ ಸಾಧಿಸಿದ ಬಾರ್ಬಡೋಸ್ ವನಿತೆಯರು

15 ರನ್‌ಗಳ ಜಯ ಸಾಧಿಸಿದ ಬಾರ್ಬಡೋಸ್ ವನಿತೆಯರು

ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಬಾರ್ಬಡೋಸ್ ವನಿತೆಯರ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ವನಿತೆಯರು ಫೀಲ್ಡಿಂಗ್ ಆಯ್ದುಕೊಂಡು ಬಾರ್ಬಡೋಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ವನಿತೆಯರ ತಂಡ ನಾಯಕಿ ಹೇಲಿ ಮ್ಯಾಥ್ಯೂಸ್ ಮತ್ತು ಕಿಸಿಯಾ ನೈಟ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎದುರಾಳಿ ಪಾಕಿಸ್ತಾನಕ್ಕೆ 145 ರನ್‌ಗಳ ಗುರಿಯನ್ನು ನೀಡಿತು. ಅಂತರರಾಷ್ಟ್ರೀಯ ಕ್ರಿಕೆಟ್ ಅನುಭವವೇ ಇಲ್ಲದ ಬಾರ್ಬಡೋಸ್ ನೀಡಿದ ಈ ಗುರಿಯನ್ನು ಅನುಭವಿ ಪಾಕಿಸ್ತಾನ ಸುಲಭವಾಗಿ ಬೆನ್ನತ್ತಲಿದೆ ಎಂಬ ಊಹೆಗಳಿದ್ದವು. ಆದರೆ ಪಾಕಿಸ್ತಾನ ತಂಡ ಬಾರ್ಬಡೋಸ್ ವನಿತೆಯರ ಬೌಲಿಂಗ್ ಮುಂದೆ ಮಂಕಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮೂಲಕ ಬಾರ್ಬಡೋಸ್ ವನಿತೆಯರ ತಂಡ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿಯೇ 15 ರನ್‌ಗಳ ಜಯ ಸಾಧಿಸಿ ಭರ್ಜರಿ ಆರಂಭವನ್ನು ಪಡೆದುಕೊಂಡಿತು.

ಟೀಕೆಗಳಿಗೆ ಒಳಗಾದ ಪಾಕಿಸ್ತಾನ ತಂಡ

ಟೀಕೆಗಳಿಗೆ ಒಳಗಾದ ಪಾಕಿಸ್ತಾನ ತಂಡ

1997ರಿಂದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್, 1998ರಿಂದ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಹಾಗೂ 2009ರಿಂದ ಅಂತರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಆಡಿ ಅಗಾಧವಾದ ಅನುಭವವನ್ನು ಹೊಂದಿರುವ ಹಾಗೂ ವಿಶ್ವದ ಅನೇಕ ಬಲಿಷ್ಠ ತಂಡಗಳನ್ನು ಎದುರಿಸಿರುವ ಪಾಕಿಸ್ತಾನ ವನಿತೆಯರ ತಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರುವ ಅನುಭವವಿರದ ಬಾರ್ಬಡೋಸ್ ವನಿತೆಯರ ತಂಡದ ವಿರುದ್ಧ ಸೋತಿರುವುದು ಸದ್ಯ ದೊಡ್ಡ ಮಟ್ಟದ ಟೀಕೆಗಳಿಗೆ ಕಾರಣವಾಗಿದೆ. ಅದೂ ಅಲ್ಲದೇ ಕಾಮನ್‍ವೆಲ್ತ್ ರೀತಿಯ ಅತ್ಯುನ್ನತ ಕ್ರೀಡಾ ವೇದಿಕೆಯಲ್ಲಿ ಪಾಕಿಸ್ತಾನ ಈ ಸೋಲನ್ನು ಕಂಡದ್ದು ತುಂಬಾ ದೊಡ್ಡ ಮಟ್ಟದ ಮುಖಭಂಗವೇ ಸರಿ.

ಪಾಕಿಸ್ತಾನ ವನಿತೆಯರ ತಂಡದ ಅಂಕಿ ಅಂಶಗಳು

ಪಾಕಿಸ್ತಾನ ವನಿತೆಯರ ತಂಡದ ಅಂಕಿ ಅಂಶಗಳು

ಪಾಕಿಸ್ತಾನ ವನಿತೆಯರ ತಂಡ ಇಲ್ಲಿಯವರೆಗೂ ಒಟ್ಟು 188 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು 54 ಪಂದ್ಯಗಳಲ್ಲಿ ಜಯ ಸಾಧಿಸಿ 130 ಪಂದ್ಯಗಳಲ್ಲಿ ಸೋತಿದೆ, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರೆ, ಉಳಿದ 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಮುಕ್ತಾಯಗೊಂಡಿವೆ. ಇನ್ನು ಒಟ್ಟಾರೆ 130 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಪಾಕಿಸ್ತಾನ ವನಿತೆಯರ ತಂಡ 52 ಪಂದ್ಯಗಳಲ್ಲಿ ಜಯ ಸಾಧಿಸಿ 71 ಪಂದ್ಯಗಳಲ್ಲಿ ಸೋತಿದೆ, 3 ಪಂದ್ಯಗಳು ಟೈ ಆಗಿದ್ದರೆ, ಉಳಿದ 4 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿವೆ.

Story first published: Tuesday, August 2, 2022, 12:20 [IST]
Other articles published on Aug 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+