CWG 2022: ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ ವನಿತೆಯರು

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ 2022 ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಸೇರ್ಪಡೆಗೊಂಡಿದೆ. ಭಾರತ ವನಿತೆಯರ ತಂಡ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಭಾರತ ವನಿತೆಯರು ಮತ್ತು ಪಾಕಿಸ್ತಾನ ವನಿತೆಯರ ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯ ಇಂದು ( ಜುಲೈ 31 ) ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.
ಉಪ ನಾಯಕಿ ಸ್ಮೃತಿ ಮಂಧಾನ (63) ಅವರ 15ನೇ ಟಿ20 ಅರ್ಧ ಶತಕದ ನೆರವಿನಿಂದ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ವನಿತೆಯರ ತಂಡ 100 ರನ್‌ಗಳ ಟಾರ್ಗೆಟ್ ಅನ್ನು 11.4 ಓವರ್‌ಗಳಲ್ಲಿ 102 ರನ್ ಗಳಿಸಿ 8 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ವನಿತೆಯರ ತಂಡ 18 ಓವರ್‌ಗಳಲ್ಲಿ 99 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಇತ್ತಂಡಗಳ ನಡುವಿನ ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ ಕಾರಣದಿಂದಾಗಿ 2 ಓವರ್ ಕಡಿತಗೊಳಿಸಿ 18 ಓವರ್‌ಗಳ ಪಂದ್ಯವಾಗಿತ್ತು.
ಸ್ನೇಹ್ ರಾಣಾ (15ಕ್ಕೆ 2 ವಿಕೆಟ್) ಒಂದು ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಪಾಕಿಸ್ತಾನದ ಇನ್ನಿಂಗ್ಸ್‌ಗೆ ಅಡ್ಡಿಪಡಿಸಿದರು. ಇನ್ನು ರಾಧಾ ಯಾದವ್ (18ಕ್ಕೆ 2 ವಿಕೆಟ್) ಅತ್ಯುತ್ತಮ ಪ್ರದರ್ಶನದಿಂದ ಪಾಕಿಸ್ತಾನ ಕಡಿಮೆ ಮೊತ್ತಕ್ಕೆ ನಿಯಂತ್ರಣಗೊಂಡಿತು.
ಮತ್ತೊಂದೆಡೆ ರೇಣುಕಾ ಸಿಂಗ್, ಮೇಘನಾ ಸಿಂಗ್ ಮತ್ತು ಶಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದರು. ಇನ್ನು ಪಾಕಿಸ್ತಾನ ಪರ ಮುನೀಬಾ ಅಲಿ 30 ಎಸೆತಗಳಲ್ಲಿ 32 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ 3 ವಿಕೆಟ್‌ಗಳ ಅಂತರದಲ್ಲಿ ಸೋಲನ್ನು ಕಂಡಿದ್ದ ಭಾರತೀಯ ವನಿತೆಯರ ತಂಡ ಇದೀಗ ತಮ್ಮ ದ್ವಿತೀಯ ಪಂದ್ಯದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವನಿತೆಯರ ತಂಡದ ವಿರುದ್ಧ ಗೆದ್ದಿದ್ದು, ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications