CWG 2022: ಕ್ರಿಕೆಟ್‍ನಲ್ಲಿ ಭಾರತ, ಪಾಕ್ ಮುಖಾಮುಖಿ ಯಾವಾಗ? ಹೆಚ್ಚು ಗೆದ್ದಿರುವ ತಂಡ ಯಾವುದು?

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿನ ವಿಶೇಷತೆಗಳಲ್ಲಿ ಕ್ರಿಕೆಟ್ ಆಟ ಕೂಡ ಸೇರ್ಪಡೆಗೊಂಡಿರುವುದು ಸಹ ಒಂದು. ಹೌದು, ಇದೇ ಮೊದಲ ಬಾರಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟವೂ ಒಂದು ಭಾಗವಾಗಿದೆ. ಮಹಿಳಾ ಕ್ರಿಕೆಟ್ ಈಗಾಗಲೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಆರಂಭಗೊಂಡಿದೆ. ಕ್ರೀಡಾಕೂಟ ಜುಲೈ 28ರಂದು ಅದ್ಧೂರಿಯಾಗಿ ಉದ್ಘಾಟನೆಯಾದರೆ, 29ರ ಶುಕ್ರವಾರದಿಂದ ವಿವಿಧ ಸ್ಪರ್ಧೆಗಳ ಜತೆ ಕ್ರಿಕೆಟ್ ಪಂದ್ಯಗಳು ಕೂಡ ಆರಂಭವಾಗಿವೆ.
ಮಹಿಳಾ ಕ್ರಿಕೆಟ್ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳು ಮುಖಾಮುಖಿಯಾದವು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕ್ರಿಕೆಟ್ ಸ್ವರೂಪವಾದ ಟಿ ಟ್ವೆಂಟಿ ಮಾದರಿಯಲ್ಲಿ ಪಂದ್ಯಗಳು ಆಯೋಜನೆಯಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡದ ವಿರುದ್ಧ ಆಸ್ಟ್ರೇಲಿಯಾ ವನಿತೆಯರ ತಂಡ 3 ವಿಕೆಟ್‍ಗಳ ರೋಚಕ ಗೆಲುವನ್ನು ಕಂಡರೆ, ಅದೇ ದಿನದಂದು ನಡೆದ ಮತ್ತೊಂದು ಪಂದ್ಯದಲ್ಲಿ ಅನುಭವಿ ಪಾಕಿಸ್ತಾನ ವನಿತೆಯರ ತಂಡದ ವಿರುದ್ಧ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ ಬಾರ್ಬಡೋಸ್ ವನಿತೆಯರ ತಂಡ 15 ರನ್‌ಗಳ ಅಂತರದಲ್ಲಿ ಗೆದ್ದು ಐತಿಹಾಸಿಕ ಮೈಲಿಗಲ್ಲನ್ನು ನೆಟ್ಟಿತು.
ಹೀಗೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿನ ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರುವ ಭಾರತೀಯ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಬದ್ಧ ವೈರಿಗಳ ಕಾದಾಟ ಎಂದೇ ಗುರುತಿಸಿಕೊಂಡಿರುವ ಈ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. ಈ ಬಹುನಿರೀಕ್ಷಿತ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ ಹಾಗೂ ಇತ್ತಂಡಗಳ ನಡುವಿನ ಮುಖಾಮುಖಿ ಪಂದ್ಯದಲ್ಲಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿ ಬಲಿಷ್ಠವಾಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಪಂದ್ಯ ಯಾವಾಗ ಮತ್ತು ಎಲ್ಲಿ?
ಭಾರತ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳ ನಡುವಿನ ಪಂದ್ಯ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದ ಐದನೇ ಕ್ರಿಕೆಟ್ ಪಂದ್ಯವಾಗಿದ್ದು, ಈ ಪಂದ್ಯ ನಾಳೆ ( ಜುಲೈ 31, ಭಾನುವಾರ) ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

ಇತ್ತಂಡಗಳ ನಡುವಿನ ಟಿ ಟ್ವೆಂಟಿ ಮುಖಾಮುಖಿ
ಭಾರತ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 11 ಅಂತರರಾಷ್ಟ್ರೀಯ ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ ವನಿತೆಯರ ತಂಡ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಉಳಿದೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಕಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳಲ್ಲಿ ಭಾರತ ವನಿತೆಯರ ತಂಡ ಪಾಕಿಸ್ತಾನ ವನಿತೆಯರ ತಂಡದ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿದೆ.

ಸಂಭಾವ್ಯ ಆಡುವ ಬಳಗಗಳು
ಈ ಪಂದ್ಯದಲ್ಲಿ ಕಣಕ್ಕಿಳಿಯುಬಹುದಾದ ಎರಡೂ ತಂಡಗಳ ಆಡುವ ಬಳಗ ಹೀಗಿರಲಿದೆ
ಭಾರತ ಸಂಭಾವ್ಯ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ರಾಧಾ ಯಾದವ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ಪಾಕಿಸ್ತಾನ ಸಂಭಾವ್ಯ ಆಡುವ ಬಳಗ: ಇರಾಮ್ ಜಾವೇದ್, ಮುನಿಬ್ ಅಲಿ, ಒಮೈಮಾ ಸುಹೇಲ್, ಬಿಸಾಮ್ಹ್ ಮಾರೂಫ್, ನದಾ ದಾರ್, ಅಯಾ ರೀಸ್, ಆಯಿಶಾ ನಯೆಮ್, ಫಾತಿಮಾ ಸುನ್ನಾ, ತೌಬಾ ಹಸನ್, ಡಯಾನಾ ಪೇಜ್, ಇಮಾಮ್ ಅಮೀನ್,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications