
ಭಾರತ ಆಡುವ ಬಳಗ
ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್ ಮತ್ತು ರೇಣುಕಾ ಸಿಂಗ್

ಪಾಕಿಸ್ತಾನ ಆಡುವ ಬಳಗ
ಇರಾಮ್ ಜಾವಿದ್, ಮುನಿಬಾ ಅಲಿ (ವಿಕೆಟ್ ಕೀಪರ್), ಒಮೈಮಾ ಸುಹೇಲ್, ಬಿಸಾಮ್ಹ್ ಮಾರೂಫ್ ( ನಾಯಕಿ ), ಅಯಾ ರೀಸ್, ಆಯಿಶಾ ನಸೀಮ್, ಕ್ರಿಯೇಚರ್ಸ್ ಆಫ್ ಎಕ್ಸಲೆನ್ಸ್, ಫಾತಿಮಾ ಸುನ್ನಾ, ತೌಬಾ ಹಸನ್, ಡಯಾನಾ ಪೇಜ್ ಮತ್ತು ಅನಮ್ ಅಮೀನ್

ಮುಖಾಮುಖಿ
ಭಾರತ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 11 ಅಂತರರಾಷ್ಟ್ರೀಯ ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ ವನಿತೆಯರ ತಂಡ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಉಳಿದೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಕಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳಲ್ಲಿ ಭಾರತ ವನಿತೆಯರ ತಂಡ ಪಾಕಿಸ್ತಾನ ವನಿತೆಯರ ತಂಡದ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿದೆ.
ಕಾಮನ್‌ವೆಲ್ತ್‌ನ ಫಲಿತಾಂಶ
ಇನ್ನು ಟೀಮ್ ಇಂಡಿಯಾ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧ ಸೆಣಸಾಡಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ವನಿತೆಯರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತ್ತು. ಅತ್ತ 19 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು.
ಪಾಕಿಸ್ತಾನ ವನಿತೆಯರ ತಂಡ ಟೂರ್ನಿಯ ಎರಡನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಬಾರ್ಬಡೋಸ್ ವನಿತೆಯರ ತಂಡದ ವಿರುದ್ಧ ಸೆಣಸಾಟ ನಡೆಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಬಾರ್ಬಡೋಸ್ ವನಿತೆಯರ ತಂಡ ನಾಯಕಿ ಹೇಲಿ ಮ್ಯಾಥ್ಯೂಸ್ ಮತ್ತು ಕಿಸಿಯಾ ನೈಟ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎದುರಾಳಿ ಪಾಕಿಸ್ತಾನಕ್ಕೆ 145 ರನ್‌ಗಳ ಗುರಿಯನ್ನು ನೀಡಿತು. ಅಂತರರಾಷ್ಟ್ರೀಯ ಕ್ರಿಕೆಟ್ ಅನುಭವವೇ ಇಲ್ಲದ ಬಾರ್ಬಡೋಸ್ ನೀಡಿದ ಈ ಗುರಿಯನ್ನು ಅನುಭವಿ ಪಾಕಿಸ್ತಾನ ಸುಲಭವಾಗಿ ಬೆನ್ನತ್ತಲಿದೆ ಎಂಬ ಊಹೆಗಳಿದ್ದವು. ಆದರೆ ಪಾಕಿಸ್ತಾನ ತಂಡ ಬಾರ್ಬಡೋಸ್ ವನಿತೆಯರ ಬೌಲಿಂಗ್ ಮುಂದೆ ಮಂಕಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮೂಲಕ ಬಾರ್ಬಡೋಸ್ ವನಿತೆಯರ ತಂಡ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿಯೇ 15 ರನ್‌ಗಳ ಜಯ ಸಾಧಿಸಿ ಭರ್ಜರಿ ಆರಂಭವನ್ನು ಪಡೆದುಕೊಂಡಿತು.


Click it and Unblock the Notifications
