Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್‌ವೆಲ್ತ್ ಗೇಮ್ಸ್ 2022: ಹೆಚ್ಚು ಆಕರ್ಷಣೆ ಪಡೆದ ಇಂಡೋ-ಪಾಕ್ ಮಹಿಳಾ ಕ್ರಿಕೆಟ್ ಹಣಾಹಣಿ

Commonwealth Games 2022: The Much-attracted Indo-Pak Womens Cricket Clash

ಯಾವುದೇ ಕ್ರೀಡೆಯಾಗಿರಲಿ, ಯಾವುದೇ ದೇಶದಲ್ಲಿರಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ ಎಂದರೆ ಸಾಕು ಈ ಎರಡು ದೇಶದ ಜನರಲ್ಲದೆ ವಿಶ್ವದ ಹಲವು ದೇಶಗಳು ಕಣ್ತೆರೆದು ಕಾಯುತ್ತವೆ. ಭಾರತ- ಪಾಕ್ ಸೆಣಸಾಟ ಅಷ್ಟೊಂದು ಮಹತ್ವ ಪಡೆದುಕೊಂಡಿದೆ. ಅದೇ ರೀತಿ ಕಾಮನ್‌ವೆಲ್ತ್ ಗೇಮ್ಸ್ 2022ನಲ್ಲಿ ಕೂಡ ಸಾಂಪ್ರದಾಯಿಕ ಎದುರಾಳಿಗಳ ಮಹಿಳಾ ಕ್ರಿಕೆಟ್ ಪಂದ್ಯಕ್ಕೆ ವಿಶ್ವವೇ ಕಾದು ಕುಳಿತಿದೆ.

ಜುಲೈ 28ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ 1.2 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸಂಘಟಕರು ಹೇಳಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಕ್ರಿಕೆಟ್ ಪಂದ್ಯವು ಸ್ಥಳೀಯ ಸಾರ್ವಜನಿಕರ ಆಸಕ್ತಿಯನ್ನು 'ನಿಜವಾಗಿಯೂ ಸೆಳೆದಿದೆ' ಎಂದು ಹೇಳಿದ್ದಾರೆ.\

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಪದಾರ್ಪಣೆ ಮಾಡುತ್ತಿದೆ ಮತ್ತು ಭಾರತ ಮತ್ತು ಪಾಕಿಸ್ತಾನವು ಜುಲೈ 31ರಂದು ಎಡ್ಜ್‌ಬಾಸ್ಟನ್‌ನಲ್ಲಿ ಮುಖಾಮುಖಿಯಾಗಲಿದೆ. ಈ ನಗರವು ಗಣನೀಯ ಸಂಖ್ಯೆಯ ಭಾರತೀಯ ಮತ್ತು ಪಾಕಿಸ್ತಾನ ಮೂಲದ ಜನರು ನೆಲೆಸಿದ್ದಾರೆ.

ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್ ಮಾರಾಟ

ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್ ಮಾರಾಟ

ಪಿಟಿಐ ಜೊತೆ ಮಾತನಾಡಿದ ಬರ್ಮಿಂಗ್‌ಹ್ಯಾಮ್‌ ಗೇಮ್ಸ್ ಸಿಇಒ ಇಯಾನ್ ರೀಡ್, "ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ, ಆದರೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ," ಎಂದು ಹೇಳಿದ್ದಾರೆ.

"ನಾನು ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದೇನೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ, ಆದ್ದರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಜವಾಗಿಯೂ ಕ್ರೀಡಾಸಕ್ತರ ಆಸಕ್ತಿಯನ್ನು ಹೆಚ್ಚಿಸಿದೆ. ಇದು ಒಂದು ಅಪ್ರತಿಮ ಸ್ಥಳವಾಗಿದ್ದು, ನಿಮ್ಮ ಪುರುಷರ ತಂಡವು ಇತ್ತೀಚೆಗೆ ಕಳೆದ ಕೆಲವು ವಾರಗಳಲ್ಲಿ ಇಲ್ಲಿ ಆಡಿದೆ. ಹಾಗಾಗಿ ಅದು ಖಂಡಿತವಾಗಿಯೂ ಆಕರ್ಷಣೆಯಾಗುತ್ತದೆ. ಕಾಮನ್‌ವೆಲ್ತ್ ಗೇಮ್ಸ್‌ನ ಪ್ರಮುಖ ಪಂದ್ಯಗಳಲ್ಲಿ ಒಂದಾಗಿದೆ," ಎಂದು ಸಿಇಒ ಇಯಾನ್ ರೀಡ್ ಹೇಳಿದರು.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಇರುತ್ತವೆ

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಇರುತ್ತವೆ

"ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇರುತ್ತವೆ ಎಂಬ ನಿರೀಕ್ಷೆಯೊಂದಿಗೆ ಸೆಮಿಫೈನಲ್ ಮತ್ತು ಫೈನಲ್ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಭಾರತ ಮತ್ತು ಪಾಕಿಸ್ತಾನವು ಸಾಮರ್ಥ್ಯಕ್ಕೆ ಹತ್ತಿರದಲ್ಲಿದೆ. ಈವೆಂಟ್‌ಗೆ ಹೆಚ್ಚು ಹತ್ತಿರವಾದಂತೆ ಟಿಕೆಟ್‌ಗಳ ಮಾರಾಟದಲ್ಲಿ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ನಾನು ನಿರೀಕ್ಷಿಸುತ್ತೇನೆ, ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಕಡಿಮೆ ಸಮಯದಲ್ಲೇ ಮಾರಾಟವಾಗಿವೆ".

ಇನ್ನು 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ, ಇದು 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಂತರ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟವಾಗಿದೆ.

Jhulan Goswamiಯ ಬೆಂಕಿ ಬೌಲಿಂಗ್ ಗೆ KL Rahul ಬ್ಯಾಟ್ ಬೀಸಿದ್ದು ಫುಲ್ ವೈರಲ್ | *Cricket | OneIndia Kannada
2012ರ ನಂತರ ಬ್ರಿಟನ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟ

2012ರ ನಂತರ ಬ್ರಿಟನ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟ

"ನಾವು ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಈಗಾಗಲೇ 1.2 ಮಿಲಿಯನ್ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ನಾವು ಗೇಮ್ಸ್‌ಗೆ ಹತ್ತಿರವಾಗುತ್ತಿದ್ದಂತೆ ಆ ಸಂಖ್ಯೆ ಹೆಚ್ಚಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಲಂಡನ್ 2012ರಿಂದ ಇದುವರೆಗೆ ಬ್ರಿಟನ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟವಾಗಿದೆ," ಎಂದರು.

"ನಾವು ಈವೆಂಟ್‌ನಲ್ಲಿ ಕೆಲಸ ಮಾಡುವ ಸುಮಾರು 45,000 ಸ್ವಯಂಸೇವಕರು ಮತ್ತು ಸಂಬಳ ಸಹಿತ ಸಿಬ್ಬಂದಿಯನ್ನು ಹೊಂದಿರುತ್ತೇವೆ. ಇದು ಪ್ರದೇಶ ಮತ್ತು ನಗರಕ್ಕೆ ಒಂದು ದೊಡ್ಡ ಕಾರ್ಯಕ್ರಮವಾಗಿದೆ," ಎಂದು ಇಯಾನ್ ರೀಡ್ ತಿಳಿಸಿದರು. ಎಲ್ಲಾ 72 ಕಾಮನ್‌ವೆಲ್ತ್ ಸದಸ್ಯರು ಬಹು ಕ್ರೀಡಾಕೂಟದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.

Story first published: Wednesday, July 20, 2022, 12:42 [IST]
Other articles published on Jul 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+