ಚೀನಿಯರ ಆಹಾರ ಕ್ರಮ ಜಗತ್ತನ್ನೇ ಭೀತಿಗೆ ತಳ್ಳಿದೆ ಎಂದು ಅಖ್ತರ್ ಆಕ್ರೋಶ

ಕೊರೊನಾ ವೈರಸ್ ವಿಶ್ವವನ್ನೇ ನಲುಗಿಸಿದೆ. ಜಗತ್ತಿನ ಮುಕ್ಕಾಲು ಭಾಗಕ್ಕೂ ಹೆಚ್ಚು ಪ್ರದೇಶ ಕೊರೊನಾ ಆತಂಕದಲ್ಲಿದೆ. ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಸಾವಿನ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿರುವುದು ಆತಂಕವೂ ಹೆಚ್ಚಾಗುತ್ತಿದೆ.
ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್ ಚೀನಾ ದೇಶದ ಜನರ ಆಹಾರ ಪದ್ದತಿಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಗತ್ತು ಆತಂಕಕ್ಕೆ ಒಳಗಾಗಲು ಚೀನೀಯರೇ ಕಾರಣ ಎಂದಿದ್ದಾರೆ ಶೋಯೆಬ್ ಅಖ್ತರ್
ಚೀನೀಯರ ಆಹಾರ ಕ್ರಮದ ಬಗ್ಗೆ ಶೋಯೆಬ್ ಅಖ್ತರ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಾವಲಿಯಂತಾ ಜೀವಿಗಳನ್ನು ಆಹಾರವನ್ನಾಗಿಸಿ ಅವುಗಳ ರಕ್ತವನ್ನು ಕುಡಿಯುವುದು ಮೂತ್ರವನ್ನು ಸೇವಿಸುವುದರ ಮೂಲ ವೈರಸ್‌ಗಳನ್ನು ಹರಡಲು ಯಾಕೆ ಕಾರಣವಾಗುತ್ತೀರಿ ಎಂದು ನನಗೆ ಅರ್ಥವಾಗುತ್ತಿಲ್ಲ, ನಾನು ಚೀನೀಯರ ಬಗ್ಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ ಶೋಯೆಬ್ ಅಖ್ತರ್.
ಚೀನೀಯರು ಬಾವಲಿ, ಬೆಕ್ಕು ನಾಯಿಯಂತಾ ಪ್ರಾಣಿಗಳನ್ನು ಆಹಾರವಾಗಿ ಸೇವಿಸುತ್ತಾರೆ. ಇದು ನನಗೆ ಕೋಪವನ್ನು ತರಿಸುತ್ತದೆ. ಇಡೀ ವಿಶ್ವವನ್ನು ಭೀತಿಯಲ್ಲಿ ದೂಡುವಂತೆ ಮಾಡಿದ್ದಾರೆ ಎಂದು ತಮ್ಮ ವಿಡಿಯೋದಲ್ಲಿ ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ.
ಇಡೀ ವಿಶ್ವ ಆತಂಕದಲ್ಲಿದೆ, ಪ್ರವಾಸೋದ್ಯಮ ಕುಸಿದಿದೆ, ವಿಶ್ವಾದ್ಯಂತ ಆರ್ಥಿಕತೆಯ ಮೇಲೆ ಸಾಕಷ್ಟು ದೊಡ್ಡ ಮಟ್ಟದ ಪರಿಣಾಮವನ್ನು ಕೊರೊನಾ ವೈರಸ್ ಬೀರಿದೆ ಎಂದಿದ್ದಾರೆ ಶೋಯೆಬ್ ಅಖ್ತರ್. ಈ ರೀತಿಯ ಆಹಾರ ಪದ್ದತಿ ಚೀನಾದ ಸಂಪ್ರದಾಯವಾಗಿರಬಹುದು. ಆದರೆ ಈಗ ಅದು ಎಲ್ಲರಿಗೂ ಅನನುಕೂಲವಾಗಿದೆ ಎಂದಿದ್ದಾರೆ ಶೋಯೆಬ್ ಅಖ್ತರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications