For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಸರಣಿಗೆ ಸಜ್ಜಾಗಿದ್ದ ಭಾರತ ತಂಡಕ್ಕೆ ಆಘಾತ: 3 ಆಟಗಾರರ ಸಹಿತ 6 ಮಂದಿಗೆ ಕೊರೊನಾವೈರಸ್

Coronavirus scare in Indian Squad 8 players test positive include Shikhar Dhawan

ಭಾರತ ಹಾಗೂ ವೆಸ್ಟ್ ಇಂಡಿಸ್ ತಂಡಗಳು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿದೆ. ಹೀಗಾಗಿ ಭಾರತ ಹಾಗೂ ವಿಂಡೀಸ್‌ನ ಆಟಗಾರರು ಈಗಾಗಲೇ ಅಹದಾಬಾದ್‌ಗೆ ಆಗಮಿಸಿದ್ದಾರೆ. ಆದರೆ ಈ ಮಧ್ಯೆ ಭಾರತ ತಂಡಕ್ಕೆ ಕೊರೊನಾವೈರಸ್ ಆಘಾತ ನೀಡಿದೆ. ಭಾರತ ತಂಡದ 3 ಕ್ರಿಕೆಟಿಗರು ಸೇರಿದಂತೆ ಒಟ್ಟು 6 ಮಂದಿಗೆ ಕೊರೊನಾವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ. ಕೊರೊನಾವೈರಸ್ ದೃಢಪಟ್ಟ ಆಟಗಾರರ ಪೈಕಿ ಅನುಭವಿ ಆಟಗಾರ ಶಿಖರ್ ಧವನ್, ಯುವ ಕ್ರಿಕೆಟಿಗ ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಐಯ್ಯರ್ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಭಾರತ ತಂಡದ ಆಟಗಾರರು ಸೋಮವಾರ ಅಹಮದಾಬಾದ್‌ಗೆ ಆಗಮಿಸಿದ್ದರು. ಅಹದಾಬಾದ್‌ಗೆ ಬಂದಿಳಿದ ಬಳಿಕ ಎಲ್ಲಾ ಆಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಆಟಗಾರರು ಮೂರು ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೀಗ ಕೋವಿಡ್ ಪರೀಕ್ಷೆಯಲ್ಲಿ 6 ಮಂದಿಗೆ ಕೊರೊನಾವೈರಸ್‌ಗೆ ತುತ್ತಾಗಿರುವುದು ತಿಳಿದುಬಂದಿದೆ.

ಸದ್ಯ ಭಾರತ ಕ್ರಿಕೆಟ್ ತಂಡದ ವೈದ್ಯಕೀಯ ವಿಭಾಗ ತಂಡದ ಪರಿಸ್ಥಿಇಯ ಬಗ್ಗೆ ಸಂಪೂರ್ಣ ಅವಲೋಕನವನ್ನು ನಡೆಸುತ್ತಿದೆ. ಕೊರೊನಾವೈರಸ್‌ಗೆ ತುತ್ತಾಗಿರುವ ಆಟಗಾರರಿಗೆ ಬದಲಿ ಆಟಗಾರರನ್ನು ಬಿಸಿಸಿಐ ಶೀಘ್ರದಲಲ್ಇಯೇ ಪ್ರಕಟಿಸುವ ಸಾಧ್ಯತೆಯಿದೆ.

ವಿಶ್ವ ಕ್ರಿಕೆಟ್ ನಲ್ಲಿ Dhoniಯ ಹೆಲಿಕಾಪ್ಟರ್ ಶಾಟ್ ನ್ನು ಯಾರ್ಯಾರು ಹೊಡೀತಾರೆ ಗೊತ್ತಾ? | Oneindia Kannada

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ವೈಟ್‌ಬಾಲ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಿಗದಿಯಾಗಿದ್ದು ಫೆಬ್ರವರಿ 6ರಿಂದ ಅಹದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯಗಳು ನಡೆಯಲಿದೆ. ಅದಾದ ಬಳಿಕ ಟಿ20 ಸರಣಿ ನಿಗದಿಯಾಗಿದ್ದು ಫೆಬ್ರವರಿ 16-20ರ ಮದ್ಯೆ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ

Story first published: Thursday, February 3, 2022, 10:16 [IST]
Other articles published on Feb 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+