ಒಂದೇ ಇನ್ನಿಂಗ್ಸ್‌ನಲ್ಲಿ 400ಕ್ಕೂ ಹೆಚ್ಚು ರನ್ ಕಲೆಹಾಕಿದ ಸ್ಯಾಮ್: ಬ್ರಿಯಾನ್ ಲಾರಾ ದಾಖಲೆ ಪಟ್ಟಿಗೆ ಸೇರ್ಪಡೆ

ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ 2ನಲ್ಲಿ ಗ್ಲಾಮೊರ್ಗಾನ್‌ನ ಬ್ಯಾಟ್ಸ್‌ಮನ್ ಸ್ಯಾಮ್ ನಾರ್ತ್‌ಈಸ್ಟ್ ವಿಶ್ವದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಲೀಸೆಸ್ಟರ್‌ಶೈರ್‌ನ ವಿರುದ್ಧ ಪಂದ್ಯದಲ್ಲಿ ಸ್ಯಾಮ್ ಅಜೇಯ 410 ರನ್ ಕಲೆಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
32 ವರ್ಷದ ಸ್ಯಾಮ್ ಅಲೆಕ್ಸಾಂಡರ್ ನಾರ್ತ್‌ಈಸ್ಟ್ ಎಲ್ಲಾ ದಾಖಲೆಗಳನ್ನು ಮುರಿಯುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 410 ರನ್ ಕಲೆಹಾಕಿದ್ದಾರೆ. ಲೀಸೆಸ್ಟರ್n ಗ್ರೇಸ್ ರೋಡ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ 2 ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಮೊದಲ ಇನ್ನಿಂಗ್ಸ್ ಕಲೆಹಾಕಿದ್ದ 584ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಚೇಸ್ ಮಾಡಿದ ಗ್ಲಾಮೊರ್ಗಾನ್ ಪರ ಬ್ಯಾಟರ್ ಸ್ಯಾಮ್ ಈ ಬೃಹತ್ ಇನ್ನಿಂಗ್ಸ್ ಕಲೆಹಾಕಿದ್ದಾರೆ.
ಟಾಸ್ ಗೆದ್ದ ಲೀಸೆಸ್ಟರ್‌ಶೈರ್ ನಾಯಕ ಕ್ಯಾಲಮ್ ಪಾರ್ಕಿನ್ಸನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರು ನಾಯಕತ್ವದ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್ ಗಳಿಸಿತು. ದಕ್ಷಿಣ ಆಫ್ರಿಕಾದ ವಿಯಾನ್ ಮುಲ್ಡರ್ 156 ರನ್ ಗಳಿಸಿದ್ರೆ, ಬೆನ್ ಮೈಕ್ 91 ರನ್ ಗಳಿಸಿದರು.

795 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿದ ಗ್ಲಾಮೋರ್ಗನ್
ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಗ್ಲಾಮೋರ್ಗನ್ 3 ಶತಕಗಳೊಂದಿಗೆ 795 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. 3 ರಲ್ಲಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಯಾಮ್ ನಾರ್ತ್‌ಈಸ್ಟ್ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು ಮತ್ತು ಅವರು ಅಜೇಯ 410 ರನ್ ಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದರು. ಇವರನ್ನ ಹೊರತುಪಡಿಸಿ ಕಾಲಿನ್ ಇಂಗ್ರಾಮ್ 139 ರನ್ ಮತ್ತು ಕ್ರಿಸ್ ಕುಕ್ ಅಜೇಯ 191 ರನ್ ಕಲೆಹಾಕುವ ಮೂಲಕ ಶತಕ ಸಿಡಿಸಿದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಡಿಸೆಂಬರ್ 2022ರವರೆಗೆ ಟೀಂ ಇಂಡಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿಯ ಅಪ್‌ಡೇಟ್

ಬ್ರಿಯಾನ್ ಲಾರಾ ದಾಖಲೆ ಪಟ್ಟಿಗೆ ಸ್ಯಾಮ್ ಸೇರ್ಪಡೆ
ಸ್ಯಾಮ್ ನಾರ್ತ್ಈಸ್ಟ್ ಅಜೇಯ 410 ರನ್ ಕಲೆಹಾಕುವ ಮೂಲಕ ಅನೇಕ ದಾಖಲೆಗಳನ್ನ ತಮ್ಮದಾಗಿಸಿಕೊಂಡರು. 450 ಎಸೆತಗಳನ್ನ ಎದುರಿಸಿದ ಸ್ಯಾಮ್ 91.11ರ ಸ್ಟ್ರೈಕ್‌ರೇಟ್‌ನ್ಲಿ ಬ್ಯಾಟ್ ಬೀಸಿ ಅಜೇಯ 410ರನ್ ಕಲೆಹಾಕಿ ದಾಖಲೆ ಪಟ್ಟಿಗೆ ಸೇರಿದರು.ಇವರ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 45 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿದ್ದವು.
ಈ ವಿಶ್ವದಾಖಲೆಯ ಇನ್ನಿಂಗ್ಸ್ ಜೊತೆಗೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ 400 ರನ್ ಕಲೆಹಾಕಿದ್ದರ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟಿಗ ಎಂಬ ಸಾಧನೆಯನ್ನ ಸ್ಯಾಮ್ ಮಾಡಿದ್ದಾರೆ.
ಭಾರತದ 19 ವರ್ಷಗಳ ಕಾಯುವಿಕೆ ಕೊನೆಗೊಳಿಸಿದ ನೀರಜ್ ಚೋಪ್ರಾ; ನೆಟಿಜನ್ಸ್ ಪ್ರತಿಕ್ರಿಯೆ ಏನಿದೆ?

ಇನ್ನಿಂಗ್ಸ್ ಸೇರಿದಂತೆ 28 ರನ್‌ಗಳಿಂದ ಪಂದ್ಯ ಗೆದ್ದ ಗ್ಲಾಮೊರ್ಗಾನ್
ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 795ರನ್ ಕಲೆಹಾಕಿ ಡಿಕ್ಲೇರ್ ಮಾಡಿದ್ದ ಗ್ಲಾಮೊರ್ಗಾನ್ 211ರನ್‌ಗಳ ಮುನ್ನಡೆ ಸಾಧಿಸಿತ್ತು. ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಲೀಸೆಸ್ಟರ್‌ಶೈರ್ 183ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಸೋಲು ಅನುಭವಿಸಿತು. ಲೀಸೆಸ್ಟರ್‌ಶೈರ್ ಪರ ವಿಯಾನ್ ಮುಲ್ಡರ್ 59ರನ್‌ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು.
ಗ್ಲಾಮೊರ್ಗಾನ್ ಪರ ಮೈಕಲ್ ಹೊಗನ್ 4, ಮೈಕಲ್ ನೇಸರ್ 3, ಆ್ಯಂಡ್ರ್ಯೂ ಸಾಲ್ಟರ್ 2, ಜೇಮ್ಸ್ ಹ್ಯಾರಿಸ್ 1 ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನೊಂದಿಗೆ ಗ್ಲಾಮೊರ್ಗಾನ್ ಪಾಯಿಂಟ್ಸ್ ಟೇಬಲ್‌ನಲ್ಲಿ 160 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನ ಅಲಂಕರಿಸಿದೆ. ಇನ್ನು ಪಂದ್ಯ ಸೋತ ಟೂರ್ನಿಯಲ್ಲೂ ಒಂದೂ ಗೆಲುವು ಕಾಣದೆ 72 ಪಾಯಿಂಟ್ಸ್‌ನೊಂದಿಗೆ ಕೊನೆಯ ಸ್ಥಾನ ಅಲಂಕರಿಸಿದೆ. ನಾಟಿಂಗ್‌ಹ್ಯಾಮ್‌ಶೈರ್ ಕೌಂಟಿ ಚಾಂಪಿಯನ್‌ಶಿಪ್ ಡಿವಿಶನ್ 2ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications