ಸಾಲು ಸಾಲು ಕ್ರಿಕೆಟ್ ಸರಣಿಗಳನ್ನ ಪ್ರಕಟಿಸಿದ ಆಸ್ಟ್ರೇಲಿಯಾ: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಆಸ್ಟ್ರೇಲಿಯಾ ಕ್ರಿಕೆಟ್ 2022-23 ಸೀಸನ್‌ನಲ್ಲಿ ಅನೇಕ ಸರಣಿಗಳನ್ನ ಆಯೋಜಿಸಿದ್ದು, ಪುರುಷರು ಮತ್ತು ಮಹಿಳಾ ಕ್ರಿಕೆಟ್ ಸರಣಿಗಳನ್ನ ಪ್ರಕಟಿಸಿದೆ. ಅದರಲ್ಲೂ ಪ್ರಮುಖವಾಗಿ ಲಿಮಿಟೆಡ್ ಓವರ್ ಕ್ರಿಕೆಟ್ ಸರಣಿಗಳನ್ನ ಆಯೋಜಿಸಿದ್ದು, ಅದರ ವೇಳಾಪಟ್ಟಿಯನ್ನ ಪ್ರಕಟಿಸಿದೆ.
ಆರು ವಿಭಿನ್ನ ರಾಷ್ಟ್ರಗಳೊಂದಿಗೆ ಕ್ರಿಕೆಟ್ ಸರಣಿಗಳನ್ನ ಆಯೋಜಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಈ ಸರಣಿಗಳ ನಡುವೆ ಟಿ20 ವಿಶ್ವಕಪ್ ಅನ್ನು ಕೂಡ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಆತಿಥ್ಯ ವಹಿಸಲಿದೆ.

ಪ್ರಮುಖ ರಾಷ್ಟ್ರಗಳೊಂದಿಗೆ ಕ್ರಿಕೆಟ್ ಸರಣಿ
ಜಿಂಬಾಬ್ವೆ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಇದೇ ವೇಳೆಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಕೂಡ ಪಾಕಿಸ್ತಾನ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಭಾಗಿಯಾಗಲಿದೆ.
ಇದರಲ್ಲಿ ಮೊದಲ ತಂಡವಾಗಿ ಜಿಂಬಾಬ್ವೆ ಆಗಸ್ಟ್ ತಿಂಗಳಿನಲ್ಲಿ ಕಾಂಗರೂ ರಾಷ್ಟ್ರಕ್ಕೆ ಕಾಲಿಡದಿದೆ. ಇದರ ನಂತರದಲ್ಲಿ ನ್ಯೂಜಿಲೆಂಡ್ ತಂಡವು ಸೆಪ್ಟೆಂಬರ್‌ನಲ್ಲಿ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡವು ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾಗೆ ಆಗಮಿಸಿ ಸರಣಿ ಜೊತೆಗೆ ಟಿ20 ವಿಶ್ವಕಪ್‌ನಲ್ಲೂ ಭಾಗಿಯಾಗಲಿದೆ.

ಟಿ20 ವಿಶ್ವಕಪ್ ಬಳಿಕವೂ ಸತತ ಕ್ರಿಕೆಟ್ ಸರಣಿ
ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಟಿ20 ವಿಶ್ವಕಪ್ ಅನ್ನು ಘೋಷಣೆ ಮಾಡಲಾಗಿದ್ದು, ಇದಾದ ಬಳಿಕ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ. ನವೆಂಬರ್ 17ರಿಂದ ಆರಂಭಗೊಳ್ಳಲಿರುವ ಈ ಸರಣಿ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನವೆಂಬರ್ 30ರಿಂದ ಪ್ರಾರಂಭಗೊಳ್ಳಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.
IPL 2022: ಪ್ಲೇಆಫ್‌ನಲ್ಲಿ ಆರ್‌ಸಿಬಿ ಸೋಲಿಸಿದರೆ ಕಪ್ ಸಿಗುವುದಿಲ್ಲ; ಒಂದಲ್ಲ ಎರಡಲ್ಲ 5 ಬಾರಿ ಇದೇ ಕಥೆ!

ಕಾಂಗರೂಗಳಿಗೆ ಹರಿಣಗಳ ಪ್ರಬಲ ಚಾಲೆಂಜ್
ಡಿಸೆಂಬರ್ ಮತ್ತು ಜನವರಿ ತಿಂಗಳ ನಡುವೆ ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ ಈ ವೇಳೆ ಮೂರು ಪಂದ್ಯಗಳ ಟೆಸ್ಟ್ ಮತ್ತು ಏಕದಿನ ಸರಣಿಯು ಒಂದು ತಿಂಗಳ ಕಾಲ ನಡೆಯಲಿದೆ. ಈ ದೀರ್ಘ ಸರಣಿಯು ಡಿ. 17ಕ್ಕೆ ಆರಂಭಗೊಂಡು ಜನವರಿ 17ಕ್ಕೆ ಮುಕ್ತಾಯಗೊಳ್ಳಲಿದೆ.
ಆಸ್ಟ್ರೇಲಿಯಾ ಮಹಿಳಾ ತಂಡ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಮೂರು ಏಕದಿನ ಪಂದ್ಯಗಳ ಸರಣಿ ಮತ್ತು ಟಿ20 ಸರಣಿಯೊಂದಿಗೆ ಮುಕ್ತಾಯಗೊಳ್ಳಲಿದೆ.
5 ಐಪಿಎಲ್ ಟ್ರೋಫಿ ಗೆದ್ದ ನಂತರ ತನ್ನ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ

2022-23ರ ಅವಧಿಯಲ್ಲಿ ಆಸ್ಟ್ರೇಲಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿ
ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ
ಆಗಸ್ಟ್ 28: ರಿವರ್‌ವೇ ಸ್ಟೇಡಿಯಂ, ಟೌನ್ಸ್‌ವಿಲ್ಲೆ
ಆಗಸ್ಟ್ 31: ರಿವರ್‌ವೇ ಸ್ಟೇಡಿಯಂ, ಟೌನ್ಸ್‌ವಿಲ್ಲೆ
ಸೆಪ್ಟೆಂಬರ್ 3: ರಿವರ್‌ವೇ ಸ್ಟೇಡಿಯಂ, ಟೌನ್ಸ್‌ವಿಲ್ಲೆ
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ
ಸೆಪ್ಟೆಂಬರ್ 6: ಕ್ಯಾಜಲಿಸ್ ಸ್ಟೇಡಿಯಂ, ಕೈರ್ನ್ಸ್ (D/N)
ಸೆಪ್ಟೆಂಬರ್ 8: ಕ್ಯಾಜಲಿಸ್ ಸ್ಟೇಡಿಯಂ, ಕೈರ್ನ್ಸ್ (D/N)
ಸೆಪ್ಟೆಂಬರ್ 11: ಕ್ಯಾಜಲಿಸ್ ಸ್ಟೇಡಿಯಂ, ಕೈರ್ನ್ಸ್ (D/N)
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ
ಅಕ್ಟೋಬರ್ 5: ಮೆಟ್ರಿಕಾನ್ ಸ್ಟೇಡಿಯಂ, ಗೋಲ್ಡ್ ಕೋಸ್ಟ್
ಅಕ್ಟೋಬರ್ 7: ಮೆಟ್ರಿಕಾನ್ ಸ್ಟೇಡಿಯಂ, ಗೋಲ್ಡ್ ಕೋಸ್ಟ್
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ
ಅಕ್ಟೋಬರ್ 9: ದಿ ಗಬ್ಬಾ, ಬ್ರಿಸ್ಬೇನ್
ಅಕ್ಟೋಬರ್ 12: ಮನುಕಾ ಓವಲ್, ಕ್ಯಾನ್‌ಬೆರಾ
ಅಕ್ಟೋಬರ್ 14: ಮನುಕಾ ಓವಲ್, ಕ್ಯಾನ್‌ಬೆರಾ
ಪುರುಷರ ಐಸಿಸಿ ಟಿ20 ವಿಶ್ವಕಪ್
ಅಕ್ಟೋಬರ್ 16 - ನವೆಂಬರ್ 13
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ
ನವೆಂಬರ್ 17: ಅಡಿಲೇಡ್ ಓವಲ್, ಅಡಿಲೇಡ್ (D/N)
ನವೆಂಬರ್ 19: ಎಸ್‌ಸಿಜಿ, ಸಿಡ್ನಿ (D/N)
ನವೆಂಬರ್ 22: ಎಂಸಿಜಿ, ಮೆಲ್ಬೋರ್ನ್ (D/N)
ವೆಸ್ಟ್ ಇಂಡೀಸ್ ವಿರುದ್ಧ ಪುರುಷರ ಟೆಸ್ಟ್ ಸರಣಿ
ನವೆಂಬರ್ 30 - ಡಿಸೆಂಬರ್ 4: ಪರ್ತ್ ಸ್ಟೇಡಿಯಂ, ಪರ್ತ್
ಡಿಸೆಂಬರ್ 8 - ಡಿಸೆಂಬರ್ 12: ಅಡಿಲೇಡ್ ಓವಲ್, ಅಡಿಲೇಡ್ (D/N)
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ
ಡಿಸೆಂಬರ್ 17 - ಡಿಸೆಂಬರ್ 21: ದಿ ಗಬ್ಬಾ, ಬ್ರಿಸ್ಬೇನ್
ಡಿಸೆಂಬರ್ 26 - ಡಿಸೆಂಬರ್ 30: ಎಂಸಿಜಿ, ಮೆಲ್ಬೋರ್ನ್
ಜನವರಿ 4 - ಜನವರಿ 8: ಎಸ್‌ಸಿಜಿ, ಸಿಡ್ನಿ
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ
* ದಿನಾಂಕಗಳು ದೃಢೀಕರಣಕ್ಕೆ ಒಳಪಟ್ಟಿರುತ್ತವೆ
ಜನವರಿ 12: ಬ್ಲಂಡ್‌ಸ್ಟೋನ್ ಅರೆನಾ, ಹೋಬಾರ್ಟ್
ಜನವರಿ 14: ಎಸ್‌ಸಿಜಿ, ಸಿಡ್ನಿ
ಜನವರಿ 17: ಪರ್ತ್ ಸ್ಟೇಡಿಯಂ, ಪರ್ತ್
ಪಾಕಿಸ್ತಾನ ಮಹಿಳೆಯರ ವಿರುದ್ಧ ಆಸ್ಟ್ರೇಲಿಯಾ ಮಹಿಳಾ ಏಕದಿನ ಸರಣಿ
ಜನವರಿ 16: ಅಲನ್ ಬಾರ್ಡರ್ ಫೀಲ್ಡ್, ಬ್ರಿಸ್ಬೇನ್
ಜನವರಿ 18: ಅಲನ್ ಬಾರ್ಡರ್ ಫೀಲ್ಡ್, ಬ್ರಿಸ್ಬೇನ್
ಜನವರಿ 21: ನಾರ್ತ್ ಸಿಡ್ನಿ ಓವಲ್, ಸಿಡ್ನಿ
ಪಾಕಿಸ್ತಾನ ಮಹಿಳೆಯರ ವಿರುದ್ಧ ಆಸ್ಟ್ರೇಲಿಯಾ ಮಹಿಳಾ ಟಿ20 ಸರಣಿ
ಜನವರಿ 24: ನಾರ್ತ್ ಸಿಡ್ನಿ ಓವಲ್, ಸಿಡ್ನಿ
ಜನವರಿ 27: ಮನುಕಾ ಓವಲ್, ಕ್ಯಾನ್‌ಬೆರಾ
ಜನವರಿ 29: ಮನುಕಾ ಓವಲ್, ಕ್ಯಾನ್‌ಬೆರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications