ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

5 ಐಪಿಎಲ್ ಟ್ರೋಫಿ ಗೆದ್ದ ನಂತರ ತನ್ನ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ

Hardik Pandya Reveals What His Next Goal Is After Winning 5 IPL Trophy

ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಅವರು ಈವರೆಗೂ ಆಡಿದ ಐದು ಐಪಿಎಲ್ ಫೈನಲ್‌ಗಳಲ್ಲಿ ಐದು ಬಾರಿಯೂ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದಾರೆ. ಇದು ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಸಾಧನೆ.

ಅವರು ತಮ್ಮ ತವರು ರಾಜ್ಯದ ಗುಜರಾತ್ ಟೈಟನ್ಸ್ ತಂಡವು ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡುವುದರೊಂದಿಗೆ, ಅದರ ಮೊದಲ ಋತುವಿನಲ್ಲೇ ಹಾರ್ದಿಕ್ ಪಾಂಡ್ಯ ನಾಯಕರಾಗಿ ಟ್ರೋಫಿ ತಂದುಕೊಟ್ಟಿದ್ದಾರೆ.

ಐಪಿಎಲ್ 2022 ಫೈನಲ್: ರಾಜಸ್ಥಾನ ರಾಯಲ್ಸ್ ಮಣಿಸಿ ಚಾಂಪಿಯನ್ ಆದ ಗುಜರಾತ್ ಟೈಟನ್ಸ್ಐಪಿಎಲ್ 2022 ಫೈನಲ್: ರಾಜಸ್ಥಾನ ರಾಯಲ್ಸ್ ಮಣಿಸಿ ಚಾಂಪಿಯನ್ ಆದ ಗುಜರಾತ್ ಟೈಟನ್ಸ್

ಅಲ್ಲದೇ ಫೈನಲ್‌ನಲ್ಲಿ ಎದುರಾಳಿ ತಂಡದ ಮೂರು ಬಿಗ್ ವಿಕೆಟ್‌ಗಳನ್ನು ಒಳಗೊಂಡಂತೆ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಇನ್ನು ಹಾರ್ದಿಕ್ ಪಾಂಡ್ಯ ಅವರ ಜೀವನದ ದೊಡ್ಡ ಗುರಿ ಏನೆಂಬುದನ್ನು ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ತಿಳಿಸಿದ್ದಾರೆ.

ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದು ಗುರಿ

ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದು ಗುರಿ

ಹಾರ್ದಿಕ್ ಪಾಂಡ್ಯ ಐಪಿಎಲ್ ಟ್ರೋಫಿ ಟ್ರೋಫಿಯನ್ನು ಸ್ವೀಕರಿಸಿದ ನಂತರ ಮತ್ತು ಅವರ ಇತರ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ಕ್ಷಣಗಳ ನಂತರ ಮಾತನಾಡಿದರು. ಗಾಯದ ತೊಂದರೆಗಳಿಂದ ಭಾರತೀಯ ಕ್ರಿಕೆಟ್ ಅವರ ಬೌಲಿಂಗ್ ಅನ್ನು ಕಳೆದುಕೊಂಡ ನಂತರ, ಇದೀಗ ಯಶಸ್ವಿ ಪುನರಾಗಮನ ಮಾಡಿದ್ದಾರೆ. ಭಾರತೀಯ ತಂಡದ ಪರವಾಗಿ ಹಾರ್ದಿಕ್ ಪಾಂಡ್ಯರ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳೇನು ಎಂದು ಕೇಳಲಾಯಿತು.

"ನನ್ನ ಗುರಿ ಸರಳವಾಗಿದೆ, ಏನೇ ಆಗಲಿ ಭಾರತಕ್ಕೆ ವಿಶ್ವಕಪ್ ಗೆಲ್ಲುವುದು ತನ್ನ ಮುಂದಿನ ಗುರಿ" ಎಂದು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. "ನನ್ನಲ್ಲಿರುವ ಎಲ್ಲವನ್ನೂ ನಾನು ಧಾರೆ ಎರೆಯುತ್ತೇನೆ. ತಂಡವನ್ನು ಮೊದಲ ಸ್ಥಾನದಲ್ಲಿ ಇರಿಸಲು ಯಾವಾಗಲೂ ಮುಂದೆ ನಿಲ್ಲುತ್ತೇನೆ," ಎಂದು ತಿಳಿಸಿದರು.

ಈ ರೀತಿಯ ಪ್ರೀತಿ ಮತ್ತು ಬೆಂಬಲ ಭಾರತ ತಂಡದಿಂದ ಮಾತ್ರ

ಈ ರೀತಿಯ ಪ್ರೀತಿ ಮತ್ತು ಬೆಂಬಲ ಭಾರತ ತಂಡದಿಂದ ಮಾತ್ರ

"ನಾನು ಎಷ್ಟೇ ಪಂದ್ಯಗಳನ್ನು ಆಡಿದ್ದರೂ ಭಾರತಕ್ಕಾಗಿ ಆಡುವುದು ಯಾವಾಗಲೂ ಒಂದು ರೀತಿಯ ಕನಸು. ದೇಶವನ್ನು ಪ್ರತಿನಿಧಿಸುವುದು ನನಗೆ ಯಾವಾಗಲೂ ಸಂತೋಷವಾಗಿರುತ್ತದೆ. ನನಗೆ ಸಿಕ್ಕಿರುವ ಈ ರೀತಿಯ ಪ್ರೀತಿ ಮತ್ತು ಬೆಂಬಲ ಭಾರತ ತಂಡದಿಂದ ಮಾತ್ರ. ದೀರ್ಘಾವಧಿ ಮತ್ತು ಅಲ್ಪಾವಧಿ ಯಾವುದೇ ದೃಷ್ಟಿಕೋನದಿಂದಲೂ ವಿಶ್ವಕಪ್ ಗೆಲ್ಲಲು ನಾನು ಬಯಸುತ್ತೇನೆ," ಎಂದು ಹೇಳಿದರು.

ಹಾರ್ದಿಕ್ ಪಾಂಡ್ಯ ಮೂರು ಬಾರಿ ವಿಶ್ವ ಪ್ರಶಸ್ತಿಯನ್ನು ಗೆಲ್ಲಲು ಸಮೀಪಕ್ಕೆ ಬಂದ ಭಾರತ ತಂಡದೊಂದಿಗಿದ್ದರು. ಆದರೆ ಮೂರೂ ಪಂದ್ಯಗಳು ಆಘಾತಕಾರಿಯಾಗಿ ಕೊನೆಗೊಂಡವು. 2016ರಲ್ಲಿ ಬಾಂಗ್ಲಾದೇಶದ ವಿರುದ್ಧ ಹಾರ್ದಿಕ್‌ರ ಅಂತಿಮ ಓವರ್ ಭಾರತವನ್ನು ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಕೊಂಡೊಯ್ದಿತ್ತು. ಆದರೆ ಸೆಮಿಫೈನಲ್‌ನಲ್ಲಿ ಭಾರತವು ವೆಸ್ಟ್ ಇಂಡೀಸ್‌ ಎದುರು ಸೋತಿತು.

ಐಪಿಎಲ್ 2022: ತನ್ನದೇ ತಪ್ಪಿನಿಂದ ಚಾಂಪಿಯನ್ ಪಟ್ಟ ಕಳೆದುಕೊಂಡ ಆರ್‌ಆರ್: ರಾಜಸ್ಥಾನ್ ಸೋಲಿಗೆ 4 ಕಾರಣಗಳು!

ಪ್ಲೇಆಫ್ ಹಂತಗಳಿಗೆ ಬಂದಾಗಲೆಲ್ಲಾ ಪ್ರಶಸ್ತಿ ಗೆದ್ದಿದ್ದಾರೆ

ಪ್ಲೇಆಫ್ ಹಂತಗಳಿಗೆ ಬಂದಾಗಲೆಲ್ಲಾ ಪ್ರಶಸ್ತಿ ಗೆದ್ದಿದ್ದಾರೆ

ಮುಂದಿನ ವರ್ಷ ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಹಾರ್ದಿಕ್ ತಮ್ಮ ಹಿಟ್ಟಿಂಗ್ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿದರು. ಆದರೆ ಅದು ತುಂಬಾ ಕಡಿಮೆ ಮತ್ತು ತಡವಾಗಿ ಮೂಡಿಬಂದಿತ್ತು. 2019ರ ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಹಾರ್ದಿಕ್ ಮತ್ತು ರಿಷಭ್ ಪಂತ್ ಮೂರು ಆರಂಭಿಕ ವಿಕೆಟ್‌ ಬಿದ್ದ ನಂತರ, ನ್ಯೂಜಿಲೆಂಡ್ ಅಂತಿಮವಾಗಿ ಭಾರತದ ಮೇಲೆ ಮೇಲುಗೈ ಸಾಧಿಸಿತು. ಭಾರತದ ವಿಶ್ವಕಪ್‌ ಪ್ರಶಸ್ತಿ ಕನಸು ಕಮರಿಹೋಯಿತು.

ಇನ್ನು ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಪ್ಲೇಆಫ್ ಹಂತಗಳಿಗೆ ಬಂದಾಗಲೆಲ್ಲಾ ಪ್ರಶಸ್ತಿ ಗೆದ್ದಿದ್ದಾರೆ. ನಾಲ್ಕು ಬಾರಿ ಮುಂಬೈ ಇಂಡಿಯನ್ಸ್ ಮತ್ತು ಈಗ ಗುಜರಾತ್ ಟೈಟನ್ಸ್‌ನೊಂದಿಗೆ. ಇದು ಸ್ವಲ್ಪ ಹೆಚ್ಚುವರಿ ವಿಶೇಷವೇ ಎಂಬ ಪ್ರಶ್ನೆಗೆ ಹಾರ್ದಿಕ್, ಸ್ವಲ್ಪ ಹೌದು ಎಂದಿದ್ದಾರೆ

ನಾನು ನಾಯಕನಾಗಿ ಐಪಿಎಲ್ ಗೆದ್ದಿರುವುದು ವಿಶೇಷ

ನಾನು ನಾಯಕನಾಗಿ ಐಪಿಎಲ್ ಗೆದ್ದಿರುವುದು ವಿಶೇಷ

'ನಿಸ್ಸಂಶಯವಾಗಿ ಇದು ಸ್ವಲ್ಪ ವಿಶೇಷವಾಗಿರುತ್ತದೆ ಏಕೆಂದರೆ ನಾನು ಅದನ್ನು ನಾಯಕನಾಗಿ ಗೆದ್ದಿದ್ದೇನೆ' ಎಂದು ಅವರು ಹೇಳಿದರು. "ಈ ಮೊದಲು ನಾನು ಗೆದ್ದ ನಾಲ್ಕು ಕೂಡ ಅಷ್ಟೇ ವಿಶೇಷವಾಗಿದೆ. ಐಪಿಎಲ್ ಗೆಲ್ಲುವುದು ಯಾವಾಗಲೂ ವಿಶೇಷವಾಗಿರುತ್ತದೆ. ನಾನು ಐದು ಐಪಿಎಲ್ ಫೈನಲ್‌ಗಳನ್ನು ಆಡಿದ್ದೇನೆ ಮತ್ತು ಐದು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ನಿಸ್ಸಂಶಯವಾಗಿ ಇದು ಪರಂಪರೆಯಾಗಿದೆ. ಏಕೆಂದರೆ ನಾವು ಹೊಸ ಫ್ರಾಂಚೈಸಿಯೊಂದಿಗೆ ಮೊದಲ ಬಾರಿಗೆ ಆಡುತ್ತಿದ್ದೇವೆ ಮತ್ತು ನಾವು ಮೊದಲ ಋತುವಿನಲ್ಲಿ ಚಾಂಪಿಯನ್ ಆಗಿದ್ದೇವೆ. ಆದರೆ ಇದಕ್ಕೂ ಮೊದಲು ನಾನು ಗೆದ್ದ ನಾಲ್ಕು ಟ್ರೋಫಿ ಅಷ್ಟೇ ವಿಶೇಷವಾಗಿತ್ತು''.

ಬಲವಾದ ಬೌಲಿಂಗ್ ಘಟಕವನ್ನು ಹೊಂದಿದ್ದರಿಂದ ಹಾರ್ದಿಕ್‌ಗೆ ಮತ್ತು ಕೋಚ್ ಆಶಿಶ್ ನೆಹ್ರಾಗೆ ಇದು ವೈಯಕ್ತಿಕ ಸಮರ್ಥನೆಯಾಗಿತ್ತು. ಅವರು ಆರು ಮುಂಚೂಣಿ ಬೌಲರ್‌ಗಳ ಆಯ್ಕೆಗಳೊಂದಿಗೆ ಪ್ರತಿ ಪಂದ್ಯ ಆಡುತ್ತಿದ್ದೆವು. ನೀವು ಹಾರ್ದಿಕ್ ಬೌಲರ್ ಎಂದು ಪರಿಗಣಿಸಿದರೆ, ರಾಹುಲ್ ತೆವಾಟಿಯಾ ಏಳನೇ ಬ್ಯಾಕ್-ಅಪ್ ಬೌಲರ್. ಇದು ಬಹಳ ಹಿಂದಿನಿಂದಲೂ ಅವರ (ನೆಹ್ರಾ) ತತ್ವವಾಗಿತ್ತು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ನಾವಿಬ್ಬರೂ (ನೆಹ್ರಾ ಮತ್ತು ಹಾರ್ದಿಕ್) ಬೌಲರ್‌ಗಳ ಕಡೆಗೆ ವಾಲುತ್ತೇವೆ

ನಾವಿಬ್ಬರೂ (ನೆಹ್ರಾ ಮತ್ತು ಹಾರ್ದಿಕ್) ಬೌಲರ್‌ಗಳ ಕಡೆಗೆ ವಾಲುತ್ತೇವೆ

"ನಿರ್ದಿಷ್ಟವಾಗಿ ನಾವಿಬ್ಬರೂ (ನೆಹ್ರಾ ಮತ್ತು ಹಾರ್ದಿಕ್) ಬೌಲರ್‌ಗಳ ಕಡೆಗೆ ವಾಲುತ್ತೇವೆ' ಎಂದು ಹಾರ್ದಿಕ್ ಹೇಳಿದ್ದು, "ಜನರು ಟಿ20 ಅನ್ನು ಬ್ಯಾಟ್ಸ್‌ಮನ್‌ಗಳ ಆಟ ಎಂದು ಹೇಳುತ್ತಾರೆ. ಆದರೆ ಬೌಲರ್‌ಗಳು ನಿಮ್ಮ ಪಂದ್ಯಗಳನ್ನು ಗೆಲ್ಲಿಸುತ್ತಾರೆ ಎಂದು ನಾನು ಯಾವಾಗಲೂ ಸಮರ್ಥಿಸಿಕೊಳ್ಳುತ್ತೇನೆ. ಏಕೆಂದರೆ ಬ್ಯಾಟರ್‌ಗಳು ಉತ್ತಮ ಸ್ಕೋರ್ ಮಾಡದಿದ್ದರೆ, ನಿಮ್ಮ ಬಳಿ ಬೌಲಿಂಗ್ ಲೈನ್-ಅಪ್ ಚೆನ್ನಾಗಿದ್ದರೆ, ಬೌಲರ್‌ಗಳು ಪಂದ್ಯದ ಗತಿಯನ್ನು ಬದಲಿಸಬಹುದು ಎಂದು ತಿಳಿಸಿದರು.

"ನಾವು ಯಾವಾಗಲೂ 10 ರನ್‌ಗಳನ್ನು ಕಡಿಮೆ ನೀಡಿದ್ದೇವೆ. ಇತರರು 190 ರನ್‌ಗಳನ್ನು ಬಿಟ್ಟುಕೊಟ್ಟಾಗಲೂ ನಾವು 10 ಕಡಿಮೆ ಕೊಟ್ಟಿದ್ದೇವೆ. ಆ 10 ರನ್‌ಗಳು ನಿಮ್ಮ ಪಂದ್ಯಗಳನ್ನು ಗೆಲ್ಲುವುದು ಅಥವಾ ಕಳೆದುಕೊಳ್ಳುವುದು ಪ್ರಮುಖವಾಗಬಹುದು. ನನಗೆ ಮತ್ತು ಆಶು ಪಾ (ನೆಹ್ರಾ), ನಾವು ಟೂರ್ನಿ ಪ್ರಾರಂಭಿಸುವಾಗ, ನಾವು ಬಲಿಷ್ಠ ಮತ್ತು ಅನುಭವಿ ಬೌಲಿಂಗ್ ಘಟಕವನ್ನು ರಚಿಸಲು ಬಯಸಿದ್ದೆವು," ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

Story first published: Monday, May 30, 2022, 13:12 [IST]
Other articles published on May 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X