ಶತಕ ದಾಖಲಿಸಲು ಡೆವಿಲಿಯರ್ಸ್ ಗೆ 31 ಬಾಲ್ ಸಾಕು!

ಜೊಹಾನ್ಸ್ ಬರ್ಗ್, ಜ, 18: ಏಕದಿನ ಕ್ರಿಕೆಟ್ ನಲ್ಲಿ ಅತಿವೇಗದ ಶತಕ ಸಾಧನೆ ದಾಖಲೆ ಭಾನುವಾರ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡೆವಿಲಿಯರ್ಸ್ ಪಾಲಾಗಿದೆ. ಅಲ್ಲದೇ ಅತಿ ವೇಗದ ಅರ್ಧ ಶತಕ ಸಾಧನೆಯನ್ನು ತಮ್ಮ ಹೆಸರಿಗೆ ಎಬಿ ಬರೆಸಿಕೊಂಡಿದ್ದಾರೆ.

cricket

ಕೇವಲ 31 ಚೆಂಡುಗಳಲ್ಲಿ ಶತಕ ಗಳಿಸಿದ ಎಬಿ ವೆಸ್ಟ್ ಇಂಡೀಸ್ ಬೌಲರ್ ಗಳನ್ನು ಚೆಂಡಾಡಿದರು. ನ್ಯೂಜಿಲೆಂಡ್ ನ ಕೋರಿ ಆಂಡ್ರಸನ್ ಕಳೆದ ವರ್ಷ 36 ಚೆಂಡುಗಳಲ್ಲಿ ಶತಕ ಸಾಧನೆ ಮಾಡಿದ್ದರು. ಎಬಿ ಇನಿಂಗ್ಸ್ ನಲ್ಲಿ 16 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿಗಳಿದ್ದವು.

ಈ ಪಂದ್ಯದಲ್ಲಿ ಕೇವಲ 44 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್ ಬರೋಬ್ಬರಿ 149 ರನ್ ಸಿಡಿಸಿದರು. ನಿಗದಿತ 50 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 439ರನ್‌ಗಳನ್ನು ಸೇರಿಸಿತು.

ಏಕದಿನ ಕ್ರಿಕೆಟ್ ನ ಅತಿ ವೇಗದ ಶತಕ ಸರದಾರರು
ಎಬಿ ಡೆವಿಲಿಯರ್ಸ್- 31 ಚೆಂಡು
ಕೋರಿ ಆಂಡ್ರಸನ್- 36 ಚೆಂಡು
ಶಾಹಿದ್ ಆಫ್ರಿದಿ- 37 ಚೆಂಡು
ಮಾರ್ಕ್ ಬೌಚರ್ - 44 ಚೆಂಡು
ಬ್ರಿಯಾನ್ ಲಾರಾ- 45 ಚೆಂಡು

Story first published: Sunday, January 18, 2015, 17:47 [IST]
Other articles published on Jan 18, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ