ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಾನ್ ಬ್ರಾಡ್ಮನ್ 67 ವರ್ಷದ ದಾಖಲೆ ಮುರಿದ ಸ್ಮಿತ್

By Mahesh

ಸಿಡ್ನಿ, ಜ.9: ಟೀಂ ಇಂಡಿಯಾ ನಾಯಕದ ವಿರಾಟ್ ರೂಪ ಕಂಡ ಸಿಡ್ನಿ ಕ್ರಿಕೆಟ್ ಪ್ರೇಮಿಗಳು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಪವರ್ ಕಂಡಿದ್ದಾರೆ. ಟೀಂ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯಾದ ನಾಯಕ ಸ್ಮಿತ್ ಅರ್ಧ ಶತಕ ಬಾರಿಸುವ ಮೂಲಕ 67 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನ(ಎಸ್ ಸಿಜಿ)ದಲ್ಲಿ 4ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಸ್ಮಿತ್ ಅರ್ಧಶತಕದ ಗಡಿ ದಾಟುತ್ತಿದ್ದಂತೆ ಡಾನ್ ಬ್ರಾಡ್ಮನ್ ದಾಖಲೆ ಹಿಂದೆ ಸರಿಯಿತು. ]

ಬಲಗೈ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಈಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.

1947-48ರಲ್ಲಿ ಡಾನ್ ಬ್ರಾಡ್ಮನ್ ಅವರು 6 ಇನ್ನಿಂಗ್ಸ್ ನಲ್ಲಿ 715ರನ್ ಚೆಚ್ಚಿದ್ದರು. ಈಗ ಸ್ಮಿತ್ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 71 ರನ್ ಗಳಿಸುವ ಮೂಲಕ ಸರಣಿಯಲ್ಲಿ 128.16 ಸರಾಸರಿಯಂತೆ 769 ರನ್ ಕಲೆ ಹಾಕಿ ಹೊಸ ದಾಖಲೆ ಬರೆದಿದ್ದಾರೆ. ನಾಲ್ಕು ಟೆಸ್ಟ್ ಗಳ ಸರಣಿಯಲ್ಲಿ ಇದು ಹೊಸ ಸಾಧನೆಯಾಗಿದೆ.

Steve Smith breaks Don Bradman's 67-year record

ಆದರೆ, ಐದು ಟೆಸ್ಟ್ ಸರಣಿಯಲ್ಲಿ ಬ್ರಾಡ್ಮನ್ ದಾಖಲೆ ಇನ್ನೂ ಮುರಿಯದೇ ಹಾಗೇ ಉಳಿದಿದೆ. ಇಂಗ್ಲೆಂಡ್ ವಿರುದ್ಧದ 1930rರ ಐದು ಟೆಸ್ಟ್ ಸರಣಿಯಲ್ಲಿ 7 ಇನ್ನಿಂಗ್ಸ್ ನಲ್ಲಿ 974ರನ್ ಬಾರಿಸಿದ್ದರು. [ಬ್ರಾಡ್ಮನ್, ಕಾಲಿಸ್ ದಾಖಲೆ ಸಮ ಮಾಡಿದ ಸ್ಮಿತ್]

25 ವರ್ಷ ವಯಸ್ಸಿನ ಸ್ಟೀವ್ ಸ್ಮಿತ್ ಅವರು ವಿರಾಟ್ ಕೊಹ್ಲಿಯಂತೆ ಬದಲಿ ನಾಯಕರಾಗಿ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡವರು. ಮೈಕಲ್ ಕ್ಲಾರ್ಕ್ ಅನುಪಸ್ಥಿತಿಯಲ್ಲಿ ಸ್ಮಿತ್ ಅವರು 4 ಶತಕ, 2 ಅರ್ಧ ಶತಕ ಸಿಡಿಸಿದ್ದಾರೆ. ಈ ಸರಣಿಯಲ್ಲಿ ಔಟಾಗದೆ 162, ಔಟಾಗದೆ 52, 133,28,192,14,117,71ರನ್ ಗಳಿಸಿದ್ದಾರೆ. [ವಿಶ್ವದಾಖಲೆ ಜೊತೆಗೆ ದ್ರಾವಿಡ್ ದಾಖಲೆ ಕೆಡವಿದ ಕೊಹ್ಲಿ]

ಟಾಪ್ 5: ನಾಲ್ಕು ಟೆಸ್ಟ್ ಸರಣಿ(ಭಾರತ vs ಆಸ್ಟ್ರೇಲಿಯಾ)[ಸರಣಿಯ ಫಲಿತಾಂಶ ನೋಡಲು ಇಸವಿ ಮೇಲೆ ಕ್ಲಿಕ್ ಮಾಡಿ]
* ಸ್ಟೀವ್ ಸ್ಮಿತ್- 8 ಇನ್ನಿಂಗ್ಸ್ 769ರನ್ ()
* ಡಾನ್ ಬ್ರಾಡ್ಮನ್ -6 ಇನ್ನಿಂಗ್ಸ್ 715 ರನ್ ()
* ರಿಕಿ ಪಾಂಟಿಂಗ್- 8 ಇನ್ನಿಂಗ್ಸ್ 706ರನ್ ()
* ವಿರಾಟ್ ಕೊಹ್ಲಿ- 7 ಇನ್ನಿಂಗ್ಸ್ 646 ರನ್ (2014-15)-2ನೇ ಇನ್ನಿಂಗ್ಸ್ ಬ್ಯಾಟಿಂಗ್ ಬಾಕಿ ಇದೆ.
* ಮೈಕಲ್ ಕ್ಲಾರ್ಕ್- 6 ಇನ್ನಿಂಗ್ಸ್ 626 ರನ್ ()

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X