ಕೊನೆ ವಿಶ್ವಕಪ್ ಆಡಲಿರುವ ಟಾಪ್ 10 ಸ್ಟಾರ್ ಕ್ರಿಕೆಟರ್ಸ್
ಟೆಸ್ಟ್ ಕ್ರಿಕೆಟ್ ನಿಂದ ಅತುರಾತುರವಾಗಿ ನಿವೃತ್ತಿ ಹೊಂದಿದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಏಕದಿನ ಕ್ರಿಕೆಟ್ ನಲ್ಲಾದರೂ ವಿಜಯೋತ್ಸವದ ಸಂಭ್ರಮದ ನಡುವೆ ರಿಟೈರ್ ಆಗಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ. ಅದೇ ರೀತಿ ಆಸೆಯನ್ನು ಇನ್ನೂ ಕೆಲವು ತಂಡಗಳ ಸ್ಟಾರ್ ಕ್ರಿಕೆಟರ್ಸ್ ಬಗ್ಗೆ ಕೂಡಾ ಇಟ್ಟುಕೊಳ್ಳಲಾಗಿದೆ. ಕನಿಷ್ಠ 10 ಕ್ರಿಕೆಟರ್ಸ್ ಗೆ ಈ ವಿಶ್ವಕಪ್ 2015 ಕೊನೆ ಟೂರ್ನಿಯಾಗುವ ಸಾಧ್ಯತೆಗಳಿವೆ.
ಈ ವಿಶ್ವಕಪ್ ನಂತರ ಧೋನಿ ಅವರು ಒಂದು ವೇಳೆ ಏಕದಿನ ಕ್ರಿಕೆಟ್, ಟಿ20 ಟೂರ್ನಿಗಳಲ್ಲಿ ಆಡಿದರೂ ಮುಂದಿನ ವಿಶ್ವಕಪ್ ನಲ್ಲಿ ತಂಡದ ನಾಯಕನಾಗಿ ಅಥವಾ ಆಟಗಾರನಾಗಿ ಆಡಲು ಕಷ್ಟಸಾಧ್ಯ.
ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ
33 ವರ್ಷ ವಯಸ್ಸಿನ ಧೋನಿ ಈಗಲೇ ನಿವೃತ್ತಿಯ ದಿನಗಳನ್ನು ಎಣಿಸುವಂತೆ ಕಾಣಿಸುತ್ತಿದ್ದಾರೆ. ಇದೇ ಪರಿಸ್ಥಿತಿಯಲ್ಲಿ ಕುಮಾರ ಸಂಗಕ್ಕಾರ, ಮಿಸ್ಬಾ ಉಲ್ ಹಕ್, ಶಹೀದ್ ಅಫ್ರಿದಿ ಕೂಡಾ ಇದ್ದಾರೆ. [ಧೋನಿ ಅಭಿಮಾನಿಗಳಿಗೆ ಈ ಸುದ್ದಿ ರುಚಿಸುವುದಿಲ್ಲ!]
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ.14 ರಿಂದ ಮಾ.29ರ ತನಕ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯಲಿದೆ. ಸ್ಟಾರ್ ಆಟಗಾರರು ಅಥವಾ ಹಿರಿಯ ಆಟಗಾರರು ಈ ಬಾರಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ನಿವೃತ್ತಿ ಘೋಷಿಸುವ ಉತ್ಸಾಹದಲ್ಲಿದ್ದಾರೆ.
ಪಾಕಿಸ್ತಾನದ ಶಹೀದ್ ಅಫ್ರಿದಿ ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರು ಈಗಾಗಲೇ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ಆಡುವುದಿಲ್ಲ ಎಂದಿದ್ದಾರೆ. ಅಫ್ರಿದಿ ಇನ್ಮುಂದೆ ಟಿ20 ಗೇಮ್ ನಲ್ಲಿ ಕಾಣಿಸಿಕೊಳ್ಳುತ್ತಾರಂತೆ.
ಸಂಗಕ್ಕಾರ ಕೂಡಾ ಮುಂದಿನ ವಿಶ್ವಕಪ್ ವೇಳೆಗೆ 41 ವರ್ಷವಾಗಲಿದೆ, ಹೀಗಾಗಿ ಇದೇ ನನ್ನ ಕೊನೆ ವಿಶ್ವಕಪ್ ಎಂದು ಕಳೆದ ಆಗಸ್ಟ್ ನಲ್ಲೇ ಘೋಷಿಸಿದ್ದರು. ವಿಶ್ವಕಪ್ ನಂತರ ನಿವೃತ್ತಿ ಹೊಸ್ತಿಲಲ್ಲಿರುವ ಟಾಪ್ 10 ಆಟಗಾರರು ಯಾರು? ಮುಂದೆ ಓದಿ...

ಎಂಎಸ್ ಧೋನಿ. ಭಾರತ
* ಫೆಬ್ರವರಿ 5ರಂತೆ ಎಂಎಸ್ ಧೋನಿ ವಯಸ್ಸು 33 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್, ಪರ್ಥ್, ಆಸ್ಟ್ರೇಲಿಯಾ,
* ಧೋನಿ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಶಹೀದ್ ಅಫ್ರಿದಿ, ಪಾಕಿಸ್ತಾನ
* ಫೆಬ್ರವರಿ 5, 2015ರಂತೆ ಶಹೀದ್ ಅಫ್ರಿದಿ ವಯಸ್ಸು 34 ವರ್ಷ.
* * ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ಮ್ಯಾಕ್‌ಲೀನ್ ಪಾರ್ಕ್, ನೇಪಿಯರ್, ನ್ಯೂಜಿಲೆಂಡ್
* ಶಹೀದ್ ಅಫ್ರಿದಿ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕುಮಾರ ಸಂಗಕ್ಕಾರ, ಶ್ರೀಲಂಕಾ
* ಫೆಬ್ರವರಿ 5, 2015ರಂತೆ ಕುಮಾರ ಸಂಗಕ್ಕಾರ ವಯಸ್ಸು 37 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ವೆಸ್ಟ್‌ಪ್ಯಾಕ್ ಸ್ಟೇಡಿಯಂ, ವೆಲ್ಲಿಂಗ್ಟನ್, ನ್ಯೂಜಿಲಂಡ್
* ಕುಮಾರ ಸಂಗಕ್ಕಾರ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮಹೇಲ ಜಯವರ್ದನೆ, ಶ್ರೀಲಂಕಾ
* ಫೆಬ್ರವರಿ 5, 2015ರಂತೆ ಮಹೇಲ ಜಯವರ್ದನೆ ವಯಸ್ಸು 37 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ವೆಸ್ಟ್‌ಪ್ಯಾಕ್ ಸ್ಟೇಡಿಯಂ, ವೆಲ್ಲಿಂಗ್ಟನ್, ನ್ಯೂಜಿಲಂಡ್
* ಮಹೇಲ ಜಯವರ್ದನೆ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮಿಸ್ಬಾ ಉಲ್ ಹಕ್, ಪಾಕಿಸ್ತಾನ
* ಫೆಬ್ರವರಿ 5, 2015ರಂತೆ ಮಿಸ್ಬಾ ಉಲ್ ಹಕ್ ವಯಸ್ಸು 40 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ಮ್ಯಾಕ್‌ಲೀನ್ ಪಾರ್ಕ್, ನೇಪಿಯರ್, ನ್ಯೂಜಿಲೆಂಡ್
* ಮಿಸ್ಬಾ ಉಲ್ ಹಕ್ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮೈಕಲ್ ಕ್ಲಾರ್ಕ್, ಆಸ್ಟ್ರೇಲಿಯಾ
* ಫೆಬ್ರವರಿ 5, 2015ರಂತೆ ಮೈಕಲ್ ಕ್ಲಾರ್ಕ್ ವಯಸ್ಸು 33 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ :ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್, ಪರ್ಥ್, ಆಸ್ಟ್ರೇಲಿಯಾ,
* ಮೈಕಲ್ ಕ್ಲಾರ್ಕ್ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ರೆಂಡನ್ ಮೆಕಲಮ್, ನ್ಯೂಜಿಲೆಂಡ್
* ಫೆಬ್ರವರಿ 5, 2015ರಂತೆ ಬ್ರೆಂಡನ್ ಮೆಕಲಮ್ ವಯಸ್ಸು 33 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ಮ್ಯಾಕ್‌ಲೀನ್ ಪಾರ್ಕ್, ನೇಪಿಯರ್, ನ್ಯೂಜಿಲೆಂಡ್
* ಬ್ರೆಂಡನ್ ಮೆಕಲಮ್ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಡೇನಿಯಲ್ ವೆಟ್ಟೋರಿ, ನ್ಯೂಜಿಲೆಂಡ್
* ಫೆಬ್ರವರಿ 5, 2015ರಂತೆ ಡೇನಿಯಲ್ ವೆಟ್ಟೋರಿ ವಯಸ್ಸು 35 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ಮ್ಯಾಕ್‌ಲೀನ್ ಪಾರ್ಕ್, ನೇಪಿಯರ್, ನ್ಯೂಜಿಲೆಂಡ್
* ಡೇನಿಯಲ್ ವೆಟ್ಟೋರಿ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಡೇಲ್ ಸ್ಟೇನ್, ದಕ್ಷಿಣ ಆಫ್ರಿಕಾ
* ಫೆಬ್ರವರಿ 5, 2015ರಂತೆ ಡೇಲ್ ಸ್ಟೇನ್ ವಯಸ್ಸು 31ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ಬಫೆಲೋ ಪಾರ್ಕ್, ಈಸ್ಟ್ ಲಂಡನ್, ದಕ್ಷಿಣ ಆಫ್ರಿಕಾ
* ಡೇಲ್ ಸ್ಟೇನ್ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ರಿಸ್ ಗೇಲ್, ವೆಸ್ಟ್ ಇಂಡೀಸ್
* ಫೆಬ್ರವರಿ 5, 2015ರಂತೆ ಕ್ರಿಸ್ ಗೇಲ್ ವಯಸ್ಸು 35 ವರ್ಷ.
* ಈ ಸಮಯಕ್ಕೆ ಇವರಾಡಿರುವ ಕೊನೆ ಪಂದ್ಯ : ಸೆಂಚುರಿಯನ್ ಪಾರ್ಕ್, ದಕ್ಷಿಣ ಆಫ್ರಿಕಾ
* ಕ್ರಿಸ್ ಗೇಲ್ ವೃತ್ತಿ ಅಂಕಿ ಅಂಶ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications