AK 47- ಹೆಮ್ಮೆಯ ಕನ್ನಡಿಗ ಕುಂಬ್ಳೆಗೆ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು, ಅಕ್ಟೋಬರ್ 17: ಟೀಂ ಇಂಡಿಯಾದ ಮಾಜಿ ಬೌಲರ್, ಮಾಜಿ ನಾಯಕ, ಮಾಜಿ ಕೋಚ್ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಅಕ್ಟೋಬರ್ 17(ಮಂಗಳವಾರ)ರಂದು 47ನೇ ಹುಟ್ಟುಹಬ್ಬದ ಸಂಭ್ರಮ.
ಕರ್ನಾಟಕದ ಅನಿಲ್ ಕುಂಬ್ಳೆ ಅವರು ಭಾರತ ಪರ ಲೆಗ್ ಸ್ಪಿನ್ನರ್ ಆಗಿ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ಅತ್ಯಧಿಕ ವಿಕೆಟ್ ಪಡೆದಿರುವ ಬೌಲರ್ ಆಗಿದ್ದಾರೆ.
ಕಿಚ್ಚ ಸುದೀಪ್ ನಟನೆ ನನಗಿಷ್ಟ ಎಂದ ಅನಿಲ್ ಕುಂಬ್ಳೆ!
ಒಟ್ಟಾರೆ 956 ಅಂತಾರಾಷ್ಟ್ರೀಯ ವಿಕೆಟ್ ಗಳನ್ನು ಗಳಿಸಿ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ನಿಂತಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಆಸ್ಟ್ರೇಲಿಯಾದ ಶೇನ್ ವಾರ್ನ್ ನಂತರ ಸ್ಪಿನ್ ಲೋಕದ ಧ್ರುವತಾರೆಯಾಗಿ ಅನಿಲ್ ಕುಂಬ್ಳೆ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ಅನಿಲ್ ಕುಂಬ್ಳೆಯನ್ನು ನರೇಂದ್ರ ಮೋದಿ ಹೊಗಳಿದ್ದೇಕೆ?
ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಲ್ ಕುಂಬ್ಳೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ದಾರಿ, ಐಸಿಸಿ ಕ್ರಿಕೆಟ್ ಕಮಿಟಿ ಕ್ರಿಕೆಟ್ ಸಮಿತಿಯ ಚೇರ್ಮನ್, ಟೀಂ ಇಂಡಿಯಾ ಕೋಚ್ ಆಗಿ ಸಮರ್ಥರಾಗಿ ಕಾರ್ಯ ನಿರ್ವಹಿಸಿದ್ದನ್ನು ಮರೆಯುವಂತಿಲ್ಲ.
ಕುಂಬ್ಳೆಗೆ 'ಜಂಬೋ' ಎಂಬ ಅಡ್ಡಹೆಸರು ನೀಡಿದ್ದು ಯಾರು?
ಕುಂಬ್ಳೆ ಅವರಿಗೆ ಅಭಿಮಾನಿಗಳು, ಕ್ರಿಕೆಟಿಗರು,ಗಣ್ಯರು ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

18 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣ
ಅಕ್ಟೋಬರ್ 17, 1970 ರಂದು ಜನಿಸಿದ ಕುಂಬ್ಳೆ, ಎಪ್ರಿಲ್ 25, 1990ರಂದು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಕುಂಬ್ಳೆ ಪಾದಾರ್ಪಣೆ ಮಾಡಿದರು. ಕ್ರಿಕೆಟ್ ಪಾದಾರ್ಪಣೆ ಮಾಡಿದ ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಸುಮಾರು 18 ವರ್ಷಗಳ ತಮ್ಮ ಕ್ರಿಕೆಟ್ ಜೀವನದಲ್ಲಿ ಟೀಂ ಇಂಡಿಯಾಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ

ಹತ್ತು ಹಲವು ಪ್ರಶಸ್ತಿಗಳ ಸರದಾರ
1996ರಲ್ಲಿ ವಿಸ್ಡನ್ ವರ್ಷದ ಶ್ರೇಷ್ಠ ಕ್ರಿಕೆಟ್ಟಿಗ ಎಂಬ ಗೌರವ ಪಡೆದುದರ ಜೊತೆಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕುಂಬ್ಳೆ ಪಡೆದಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವವನ್ನೂ ಸ್ವೀಕರಿಸಿದ್ದಾರೆ.
ಸಚಿನ್ ರಿಂದ ಶುಭಹಾರೈಕೆ
ಟೀಂ ಇಂಡಿಯಾ ಹಾಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಕುಂಬ್ಳೆ ಜತೆಗಿದ್ದ ಸಚಿನ್ ಅವರು ಕುಂಬ್ಳೆಯನ್ನು ಒಂದು ಪೀಳಿಗೆಯ ಸ್ಫೂರ್ತಿ ಚಿಲುಮೆ ಎಂದು ಹಾಡಿ ಹೊಗಳಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಸೆಹ್ವಾಗ್ ರಿಂದ ವಿಭಿನ್ನ ರೀತಿ ಟ್ವೀಟ್
ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ವಿಭಿನ್ನವಾಗಿ ಟ್ವೀಟ್ ಮಾಡಿ, ಜೈ ಜೈ ಶಿವ ಶಂಭೋ, ಹ್ಯಾಪಿ ಬರ್ಥ್ ಡೇ ಜಂಬೋ ಎಂದು ವಿಶ್ ಮಾಡಿದ್ದಾರೆ.
ಮ್ಯಾಚ್ ವಿನ್ನರ್ ಅನಿಲ್
ಟೀಂ ಇಂಡಿಯಾದ ಶ್ರೇಷ್ಠ ಮ್ಯಾಚ್ ವಿನ್ನರ್ ಅನಿಲ್ ಕುಂಬ್ಳೆಗೆ ಜನ್ಮದಿನದ ಶುಭ ಹಾರೈಕೆಗಳು ಎಂದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್
ಲೆಗ್ ಸ್ಪಿನ್ ದಿಗ್ಗಜ
ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಶುಭ ಹಾರೈಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications