Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MS Dhoni Gift: ಅಫ್ಘಾನಿಸ್ತಾನದ ಈ ಆಟಗಾರನಿಗೆ ವಿಶೇಷ ಉಡುಗೊರೆ ನೀಡಿದ ಎಂಎಸ್ ಧೋನಿ

ಮೇ 28ರಂದು ಮುಕ್ತಾಯಗೊಂಡ 16ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಅವರಿಗೆ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ. ಮಂಗಳವಾರ, ಜೂನ್ 20ರಂದು ಎಂಎಸ್ ಧೋನಿಯಿಂದ ಹಸ್ತಾಕ್ಷರ ಸಹಿತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಜೆರ್ಸಿಯನ್ನು ರಹಮಾನುಲ್ಲಾ ಗುರ್ಬಾಜ್ ಸ್ವೀಕರಿಸಿದ್ದಾರೆ.

CSK Captain MS Dhoni Gave A Special Gift To Afghanistans Rahmanullah Gurbaz

2023ತ ಐಪಿಎಲ್ ಪಂದ್ಯಾವಳಿಗೂ ಮುನ್ನ ಎಂಎಸ್ ಧೋನಿಯೊಂದಿಗೆ ಅಥವಾ ವಿರುದ್ಧವಾಗಿ ಆಡಲು ಬಯಸುವುದಾಗಿ ಅಫ್ಘಾನಿಸ್ತಾನ ಆಟಗಾರ ರಹಮಾನುಲ್ಲಾ ಗುರ್ಬಾಜ್ ಹೇಳಿಕೊಂಡಿದ್ದರು. ಎಂಎಸ್ ಧೋನಿ ಜೆರ್ಸಿ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಧನ್ಯವಾದ ತಿಳಿಸಿದ್ದಾರೆ.

"ಭಾರತದಿಂದ ಉಡುಗೊರೆಯನ್ನು ಕಳುಹಿಸಿದ್ದಕ್ಕಾಗಿ ಎಂಎಸ್ ಧೋನಿ ಸರ್‌ಗೆ ಧನ್ಯವಾದಗಳು," ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಶೀರ್ಷಿಕೆಯಲ್ಲಿ ರಹಮಾನುಲ್ಲಾ ಗುರ್ಬಾಜ್ ಬರೆದುಕೊಂಡಿದ್ದಾರೆ.

ಈ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೇಡ್ ಮಾಡುವ ಮೊದಲು ಎಡಗೈ ಬ್ಯಾಟರ್ ಐಪಿಎಲ್ 2022ರಲ್ಲಿ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದರು. ಒಟ್ಟು 11 ಪಂದ್ಯಗಳಲ್ಲಿ (10 ಆರಂಭಿಕರಾಗಿ ಮತ್ತು ಒಮ್ಮೆ 4ನೇ ಕ್ರಮಾಂಕದಲ್ಲಿ) 20.64ರ ಸರಾಸರಿಯಲ್ಲಿ ಮತ್ತು 133.53ರ ಸ್ಟ್ರೈಕ್‌ರೇಟ್‌ನಲ್ಲಿ 227 ರನ್ ಗಳಿಸಿದ್ದರು.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೈವಿಂಗ್ ಕ್ಯಾಚ್‌ನೊಂದಿಗೆ ರಹಮಾನುಲ್ಲಾ ಗುರ್ಬಾಜ್ ವಿಕೆಟ್ ಕೀಪರ್ ಆಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಎಂಎಸ್ ಧೋನಿಯೊಂದಿಗೆ ಹೋಲಿಕೆ ಮಾಡಲಾಗಿತ್ತು.

ಭಾರತ ತಂಡದ ಮಾಜಿ ನಾಯಕ ಹಾಗೂ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಆಗಾಗ ತನ್ನನ್ನು ಆರಾಧಿಸುವ ಮತ್ತು ವೈಯಕ್ತಿಕವಾಗಿ ಕೇಳುವ ಆಟಗಾರರಿಗೆ ಸಹಿ ಮಾಡಿದ ಕಿಟ್‌ಗಳನ್ನು ಕಳುಹಿಸುತ್ತಾರೆ. ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ 2022ರಲ್ಲಿ ಪಡೆದುಕೊಂಡಿದ್ದರು.

ಈ ಕನಸು ನನಸಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದ ರಹಮಾನುಲ್ಲಾ ಗುರ್ಬಾಜ್
2023ರ ಐಪಿಎಲ್ ಪಂದ್ಯಾವಳಿ ಪ್ರಾರಂಭವಾಗುವ ಮೊದಲು ರಹಮಾನುಲ್ಲಾ ಗುರ್ಬಾಜ್ ಅವರು ಎಬಿ ಡಿವಿಲಿಯರ್ಸ್ ಮತ್ತು ಎಂಎಸ್ ಧೋನಿ ಅವರೊಂದಿಗೆ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಆದರೆ, ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಈಗಾಗಲೇ ನಿವೃತ್ತಿ ಹೊಂದಿದ್ದರಿಂದ, ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರೊಂದಿಗೆ ಕನಸನ್ನು ನನಸಾಗಿಸಲು ಆಶಿಸಿದ್ದರು.

"ನನ್ನ ಜೀವನದಲ್ಲಿ ನಾನು ಇಬ್ಬರು ಆಟಗಾರರೊಂದಿಗೆ ಆಡಬೇಕೆಂದುಕೊಂಡಿದ್ದೇನೆ. ಆದರೆ ದುರದೃಷ್ಟವಶಾತ್, ನಾನು ಎಬಿಡಿಯೊಂದಿಗೆ ಆಡಲಾಗಲಿಲ್ಲ," ಎಂದು ಗುರ್ಬಾಜ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದರು.

"ಎಬಿ ಡಿವಿಲಿಯರ್ಸ್ ಅವರಿಂದ ನಾನು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇನೆ. ಅವರು ನನ್ನ ಆರಾಧ್ಯ ದೈವ. ನನ್ನ ಬಾಲ್ಯದಿಂದಲೂ ನಾನು ಅವನನ್ನು ತುಂಬಾ ಹಿಂಬಾಲಿಸಿದ್ದೇನೆ,'' ಎಂದಿದ್ದರು.

"ಎಬಿಡಿ ಈಗ ನಿವೃತ್ತರಾಗಿದ್ದಾರೆ. ಆದರೆ ಈ ವರ್ಷ ಎಂಎಸ್ ಧೋನಿ ಅವರೊಂದಿಗೆ ಮತ್ತು ವಿರುದ್ಧ ಒಂದೇ ಪಂದ್ಯದಲ್ಲಿ ಆಡುವುದು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಈ ಕನಸು ನನಸಾಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿಕೊಂಡಿದ್ದರು.

2023ರ ಐಪಿಎಲ್ ಪಂದ್ಯಾವಳಿಯಲ್ಲಿ 21 ವರ್ಷದ ಅಫ್ಘಾನ್ ಆಟಗಾರ ರಹಮಾನುಲ್ಲಾ ಗುರ್ಬಾಜ್ ಸಿಎಸ್‌ಕೆ ವಿರುದ್ಧ ಒಂದು ಪಂದ್ಯವನ್ನು ಆಡಿದರು, ಆದರೆ 4 ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಗಳಿಸಿದರು.

Story first published: Tuesday, June 20, 2023, 21:52 [IST]
Other articles published on Jun 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+