GT vs CSK: ಅಲುಗಾಡುತ್ತಿದೆ ಟೈಟಾನ್ಸ್ ಅಗ್ರ ಸ್ಥಾನ : RCB, ಪಂಜಾಬ್ ಫುಲ್ ಖುಷ್
ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ನ 67ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿತು. ಟೈಟಾನ್ಸ್ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಸೋತಿದ್ದು, ಪಂಜಾಬ್ ಹಾಗೂ ಆರ್‌ಸಿಬಿ ಮುಖದಲ್ಲಿ ಮಂದಹಾಸ ಮೂಡಿಸಿದೆ. ಗುಜರಾತ್ ಟೈಟಾನ್ಸ್ 18 ಅಂಕಗಳೊಂದಿಗೆ ಸದ್ಯ ಅಂಕ ಪಟ್ಟಿಯಲ್ಲಿದೆ. ಆದರೆ ಮುಂಬೈ, ಪಂಜಾಬ್ ಹಾಗೂ ಆರ್‌ಸಿಬಿ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಲಿದ್ದು ರೋಚಕತೆ ಹುಟ್ಟಿಸಿದೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರಿಸಿದರು. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 230 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 17.5 ಓವರ್‌ಗಳಲ್ಲಿ 9 ರನ್ ಕಲೆ ಹಾಕಿ ಸೋಲು ಕಂಡಿತು. ಈ ಮೂಲಕ ಗುಜರಾತ್ ಟೈಟಾನ್ಸ್ ಅಗ್ರ ಸ್ಥಾನ ಅಲುಗಾಡುತ್ತಿದೆ.

ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದ ಗುಜರಾತ್ ಟೈಟಾನ್ಸ್ ಲೀಗ್ ಹಂತದ ಕೊನೆಯ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಅಗ್ರಸ್ಥಾನ ಅಲುಗಾಡುತ್ತಿದೆ. ಲೀಗ್ ಹಂತದಲ್ಲಿ ಜಯ ಸಾಧಿಸುವಲ್ಲಿ ಎಡವಿದ್ದ ಚೆನ್ನೈ ಕೊನೆಯಲ್ಲಿ ಮಿಂಚಿದೆ. ಚೆನ್ನೈ ಗೆಲುವು ನಿಶ್ಚಿತವಾಗಿ ಪಂಜಾಬ್, ಆರ್‌ಸಿಬಿ, ಮುಂಬೈ ತಂಡಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಟೈಟಾನ್ಸ್ ಪವರ್ ಕಟ್
ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಪ್ವರ್ ಹೌಸ್ ಆಗಿದ್ದ ಶುಭಮನ್ ಗಿಲ್ (13), ಜೋಸ್ ಬಟ್ಲರ್ (5), ಶೆರ್ಫೇನ್ ರುದರ್ಫೋರ್ಡ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಗುಜರಾತ್ ಟೈಟಾನ್ಸ್ ಸವಾಲಿನ ಗುರಿಯನ್ನು ಬೆನ್ನಟಿದಾಗ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ನೀಡುವಲ್ಲಿ ವಿಫಲರಾದರು. ಮೊದಲ ಆರು ಓವರ್‌ಗಳಲ್ಲಿ 35 ರನ್ ಸಿಡಿಸಿ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ಸಾಯಿ ಸುದರ್ಶನ್ 28 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 41 ರನ್ ಸಿಡಿಸಿತು. ನಾಲ್ಕನೇ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ಶಾರುಖ್ ಖಾನ್ ಜೋಡಿ 34 ಎಸೆತಗಳಲ್ಲಿ 55 ರನ್ ಸೇರಿಸಿತು.
ಗುಜರಾತ್ ತಂಡದ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಟೈಟಾನ್ಸ್ 83 ರನ್‌ಗಳ ಸೋಲು ಕಂಡಿತು. ಈ ಮೂಲಕ ಟೈಟಾನ್ಸ್ 18 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಸದ್ಯ ಕಾಯ್ದುಕೊಂಡಿದೆ. ಆದರೆ ಈ ಸ್ಥಾನಕ್ಕೆ ಅಪಾಯ ಕಾದಿದೆ. ಚೆನ್ನೈ ತಂಡದ ಪರ ಅಂಶುಲ್ ಕಂಬೋಜ್ ಹಾಗೂ ನೂರ್ ಅಹ್ಮದ್ ತಲಾ ಮೂರು ವಿಕೆಟ್ ಕಬಳಿಸಿದರು.

ಕಾನ್ವೆ, ಬ್ರೆವಿಸ್ ಅರ್ಧಶತಕ
ಚೆನ್ನೈ ಸೂಪರ್ ಕಿಂಗ್ಸ್ ಆಯುಷ್ ಮಾತ್ರೆ 34 ರನ್ ಬಾರಿಸಿ ಔಟ್ ಆದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಉರ್ವಿಲ್ ಪಟೇಲ್ 37, ಶಿವಂ ದುಬೆ 17 ರನ್ ಬಾರಿಸಿದರು. ಆದರೆ ಆರಂಭಿಕ ಡ್ವೇನ್ ಕಾನ್ವೆ 35 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ 23 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿ ಚೆನ್ನೈ ರನ್ ಮೊತ್ತಕ್ಕೆ ಚುರುಕು ಮುಟ್ಟಿಸಿದರು. ಪರಿಣಾಮ ಚೆನ್ನೈ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಸಫಲವಾಯಿತು. ಟೈಟಾನ್ಸ್ ತಂಡದ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications