CSK vs PBKS: ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ, ಪ್ಲೇಯಿಂಗ್ 11

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪರಿಣಾಮ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಬೇಕಿದೆ.
ಚೆನ್ನೈ ಮೊದಲೆರಡು ಪಂದ್ಯಗಳನ್ನ ಸೋತಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಮೊದಲೆರಡು ಪಂದ್ಯ ಸೋಲನ್ನ ಕಂಡಿರುವ ಸಿಎಸ್‌ಕೆ ಈ ಪಂದ್ಯದಲ್ಲೇ ಗೆಲ್ಲಲೇಬೇಕೆಂದು ಪಣತೊಟ್ಟಿದೆ.
ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಲಾ ಒಂದು ಗೆಲುವು ಹಾಗೂ ಸೋಲಿನ ರುಚಿ ನೋಡಿದೆ. ಆರ್‌ಸಿಬಿ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಪಂಜಾಬ್, ಕೆಕೆಆರ್ ವಿರುದ್ಧ ಮುಗ್ಗರಿಸಿತು. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡು ಕೇವಲ 137 ರನ್‌ಗಳಿಗೆ ಆಲೌಟ್ ಆಗಿದೆ. ಅದೂ ಕೂಡ 10 ಎಸೆತಗಳು ಬಾಕಿ ಇರುವಂತೆಯೇ ಆಲೌಟ್ ಆಗಿತು. ಈ ಸುಲಭ ಗುರಿಯನ್ನ ಕೆಕೆಆರ್ ಕೇವಲ 14.2 ಓವರ್‌ಗಳಲ್ಲಿ ಮುಗಿಸಿತು. ಈ ಪಂದ್ಯದಲ್ಲಿ ಆಂಡ್ರ್ಯೂ ರಸ್ಸೆಲ್ 31 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿದ್ದರು.
ಐಪಿಎಲ್ 11ನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಸಿಎಸ್‌ಕೆ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ತುಷಾರ್ ದೇಶಪಾಂಡೆ ಬದಲು ಕ್ರಿಸ್ ಜೋರ್ಡಾನ್‌ಗೆ ಮಣೆ ಹಾಕಲಾಗಿದೆ.
ಇನ್ನು ಮಯಾಂಕ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಎರಡು ಬದಲಾವಣೆ ಆಗಿದ್ದು, ಹರ್ಪೀತ್ ಬ್ರಾರ್ ಬದಲು ವೈಭವ್ ಅರೋರಾ, ರಾಜ್ ಭಾವಾ ಬದಲು ಜಿತೇಶ್ ಶರ್ಮಾಗೆ ಅವಕಾಶ ನೀಡಲಾಗಿದೆ. ವೈಭವಕ್ ಅರೋರಾ ಎರಡು ಬದಿಯಲ್ಲಿ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದು, ಜಿತೇಶ್ ವಿಕೆಟ್ ಕೀಪಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಹ ಮಾಡಬಲ್ಲರು.

ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಡ್ವೈನ್ ಪ್ರಿಟೋರಿಯಸ್, ಮುಖೇಶ್ ಚೌಧರಿ
ಪಂಜಾಬ್ ಕಿಂಗ್ಸ್
ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ(ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಜಿತೇಶ್ ಶರ್ಮಾ, ಓಡಿಯನ್ ಸ್ಮಿತ್, ಅರ್ಷ್‌ದೀಪ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications