Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2022ರ ಬೃಹತ್ ಸಿಕ್ಸರ್ ಸಿಡಿಸಿದ ಲಿಯಾಮ್ ಲಿವಿಂಗ್‌ಸ್ಟೋನ್

Liam livingstone

ಲಿಯಾಮ್ ಲಿವಿಂಗ್‌ಸ್ಟೋನ್‌ ವಿಧ್ವಂಸಕ ಬ್ಯಾಟಿಂಗ್‌ನಿಂದಾಗಿ ಪಂಜಾಬ್‌ ಕಿಂಗ್ಸ್‌ 180 ರನ್ ಕಲೆಹಾಕಿದ್ದು, ಸಿಎಸ್‌ಕೆಗೆ 181 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಲಿವಿಂಗ್‌ಸ್ಟೋನ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 60 ರನ್ ಸಿಡಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಮುಖೇಶ್ ಚೌಧರಿ ಅವರ ಮೊದಲ ಓವರ್‌ನ ಮೊದಲ ಎಸೆತವನ್ನು ನಾಯಕ ಮಯಾಂಕ್ ಅಗರ್ವಾಲ್ ಬೌಲ್ಡ್ ಮಾಡಿದರು. ಆ ನಂತರ ಕ್ರೀಸ್‌ಗೆ ಬಂದ ರಾಜಪಕ್ಸೆ (9) ಜೋರ್ಡಾನ್ ಎಸೆದ ಎರಡನೇ ಓವರ್‌ನಲ್ಲಿ ಬೃಹತ್ ಸಿಕ್ಸರ್ ಬಾರಿಸಿದರು. ಆದರೆ ಆ ಮುಂದಿನ ಎಸೆತದಲ್ಲಿ ಧೋನಿ ಮಾರ್ಕ್ ಕೀಪಿಂಗ್ ಜೊತೆ ರನೌಟ್ ಆಗಿ ಮರಳಿದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಲಿವಿಂಗ್‌ಸ್ಟೋನ್‌ ಆಗಮಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಲಿವಿಂಗ್‌ಸ್ಟೋನ್ ಮೊದಲ ಎಸೆತದಿಂದಲೇ ಅಬ್ಬರಿಸೋಕೆ ಶುರು ಮಾಡಿದನು. ಮುಖೇಶ್ ಚೌಧರಿಯ ಐದನೇ ಓವರ್‌ನಲ್ಲಿ 26 ರನ್ ಕಲೆಹಾಕಿದ್ರು. ಇದೇ ಓವರ್‌ನಲ್ಲಿ ಲಿವಿಂಗ್‌ಸ್ಟೋನ್‌ ಸೀಸನ್‌ನಲ್ಲಿಯೇ ಅತಿ ದೂರ (108m) ಸಿಕ್ಸರ್ ಸಿಡಿಸಿ ಮಿಂಚಿದ್ರು.

Liam livingstone
IPL ಇತಿಹಾಸದಲ್ಲೇ CSK ಗೆ ಭಾರಿ ಮುಖಭಂಗ: ಕನ್ನಡಿಗನ ಮುಂದೆ ಮಂಡಿಯೂರಿದ ಚೆನ್ನೈ | Oneindia Kannada

ಇದೇ ಸೀಸನ್‌ನಲ್ಲಿ ಲಿವಿಂಗ್‌ಸ್ಟೋನ್ 105 ಮೀಟರ್ ಸಿಕ್ಸರ್‌ ಸಿಡಿಸಿದ್ದು ದಾಖಲೆಯಾಗಿದ್ದು, ಇದೀಗ ತನ್ನದೇ ದಾಖಲೆಯನ್ನ ಲಿವಿಂಗ್‌ಸ್ಟೋನ್ ಮುರಿದುಹಾಕಿದ್ದಾರೆ.

ಧವನ್ ಮತ್ತು ಲಿವಿಂಗ್‌ಸ್ಟೋನ್ ವಿಕೆಟ್ ಪತನದ ಬಳಿಕ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಧಾರವಾಗಲಿಲ್ಲ. ಜಿತೇಶ್ ಶರ್ಮಾ 26 ರನ್‌ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಅಂತಿಮವಾಗಿ ಪಂಜಾಬ್‌ ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿದೆ.

Story first published: Monday, April 4, 2022, 9:36 [IST]
Other articles published on Apr 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+