ರಾಯುಡು ಶತಕ: ಹೈದರಾಬಾದ್ ವಿರುದ್ಧ ಚೆನ್ನೈ 8 ವಿಕೆಟ್ ಜಯ

ಪುಣೆ, ಮೇ 13: ಶೇನ್ ವಾಟ್ಸನ್ (57) ಮತ್ತು ಅಂಬಾಟಿ ರಾಯುಡು (100) ರನ್ ನೆರವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಹೈದರಾಬಾದ್ ನೀಡಿದ್ದ 180 ರನ್ ಗುರಿ ಬೆನ್ನಟ್ಟಿದ ಚೆನ್ನೈ 19 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಸನ್ ರೈಸರ್ಸ್ ಗೆ ಸೋಲಿನ ಕಹಿಯುಣಿಸಿತು.
ಶಿಖರ್ ಧವನ್ 79 (49), ಕೇನ್ ವಿಲಿಯಮ್ಸನ್ 51 (39), ದೀಪಕ್ ಹೂಡ ಅಜೇಯ 21 (11) ರನ್ ನೆರವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 180 ರನ್ ಗುರಿ ನೀಡಿತ್ತು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಚೆನ್ನೈ ಗೆಲುವಿಗೆ ಕಾರಣದ ಅಂಬಾಟಿ ರಾಯುಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಅಲೆಕ್ಸ್ ಹೇಲ್ಸ್ 2 (9), ಮನೀಶ್ ಪಾಂಡೆ 5 (6) ಮತ್ತು ಶಕೀಬ್ ಅಲ್ ಹಸನ್ ಅಜೇಯ 8 (6) ರನ್ ಗಳಿಕೆ ತಂಡಕ್ಕೆ ಬೆಂಬಲವಾಗದೆ ಸನ್ ರೈಸರ್ಸ್ ಕೊಂಚ ರನ್ ಕೊರತೆ ಎದುರಿಸುವಂತಾಯಿತು. ಯಾಕೆಂದರೆ ಬಲಿಷ್ಠ ಚೆನ್ನೈಗೆ 180 ರನ್ ಗುರಿ ಒಂದರ್ಥದಲ್ಲಿ ಕಡಿಮೆಯಾದಂತೆಯೇ.
ಚೆನ್ನೈ ಪರ ಶಾರ್ದೂಲ್ ಠಾಕೂರ್ ಮುಂಚಿದರು. ಠಾಕೂರ್ 4 ಓವರ್ ಗಳಲ್ಲಿ 32 ರನ್ ಗೆ 2 ವಿಕೆಟ್ ಕಬಳಿಸಿದರು. ಒಟ್ಟಿನಲ್ಲಿ ಧವನ್, ವಿಲಿಯಮ್ಸನ್ ಸ್ಟ್ಯಾಂಡ್ ಕೊಟ್ಟಷ್ಟು ಉಳಿದ ಆಟಗಾರರು ಕ್ರೀಸ್ ನಲ್ಲಿ ಉಳಿಯದಿದ್ದುದು ಸನ್ ರೈಸರ್ ಗೆ ದುಬಾರಿಯಾಗಿ ಪರಣಮಿಸಿತು.
ಚೇಸಿಂಗ್ ಗಿಳಿದ ಚೆನ್ನೈ ಪರ ಆರಂಭಿಕರಾದ ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯುಡು ಅವರೇ ಚೆನ್ನೈ ತಂಡದ ಗೆಲುವನ್ನು ಭಾಗಶಃ ಬರೆದರು. 35 ಎಸೆತ ಎದುರಿಸಿದ ವಾಟ್ಸನ್ 57 ರನ್ ಮತ್ತು 62 ಎಸೆತ ಎದುರಿಸಿದ ರಾಯುಡು ಅಜೇಯ 100 ರನ್ ಪೇರಿಸಿ ಚೆನ್ನೈ ತಂಡವನ್ನು ಗೆಲುವಿನ ದಡಕ್ಕೆ ತಂದಿಟ್ಟರು.
ಅನಂತರ ಬ್ಯಾಟ್ ಎತ್ತಿಕೊಂಡ ರೈನಾ 2 ರನ್ ಗೆ ಔಟಾದರಾದರೂ ಕ್ರೀಸ್ ಗೆ ಅಂಟಿಕೊಂಡ ರಾಯುಡು ಮತ್ತು ನಾಯಕ ಧೋನಿ (ಅಜೇಯ 20/14) ಚೆನ್ನೈ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications