
ಪುಣೆ, ಮೇ 13: ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಅದರ ಬೆನ್ನಲ್ಲೇ ಇರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗಿವೆ.
ಈಗಾಗಲೇ ಪಂದ್ಯದ ಟಾಸ್ ಮುಗಿದಿದೆ. ಟಾಸ್ ಗೆದ್ದಿರುವ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿದೆ.
ಈ ಐಪಿಎಲ್ ಆವೃತ್ತಿಯ 46ನೇ ಈ ಪಂದ್ಯ ಇಂದು ಮಹಾರಾಷ್ಟ್ರ ಅಸೋಸಿಯೇಶನ್ ಪುಣೆಯಲ್ಲಿ ನಡೆಯುತ್ತಿದ್ದು ಕದ ಕುತೂಹಲ ಕೆರಳಿಸಿದೆ. ಸನ್ ರೈಸರ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಚೆನ್ನೈ ಹಿಂದಿನ ಪಂದ್ಯದಲ್ಲೂ ಸೋತಿರುವುದರಿಂದ ಇಂದಿನ ಗೆಲುವು ಚೆನ್ನೈಗೆ ಅನಿವಾರ್ಯವಾಗಿದೆ.
ಹಿಂದಿನ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 9 ರನ್ ಭರ್ಜರಿ ಗೆಲುವು ದಾಖಲಿಸಿತ್ತು. ಚೆನ್ನೈ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಸೋಲನುಭವಿಸಿತ್ತು.
ಒಟ್ಟು 11 ಪಂದ್ಯಗಳನ್ನು ಆಡಿರುವ ಸನ್ ರೈಸರ್ಸ್ 9 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 18 ಅಂಕಗಳನ್ನು ಸಂಪಾದಿಸಿದ್ದರೆ, 11 ಪಂದ್ಯಗಳನ್ನಾಡಿರುವ ಚೆನ್ನೈ 7 ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ಕಲೆ ಹಾಕಿದೆ.
ಒಟ್ಟಿನಲ್ಲಿ ಎರಡೂ ಬಲಾಡ್ಯ ತಂಡಗಳೆಂದೇ ಗುರುತಿಸಿಕೊಂಡಿರುವ ಚೆನ್ನೈ-ಹೈದರಾಬಾದ್ ಕಾದಾಟದಲ್ಲಿ ಗೆಲುವು ಯಾರ ತೆಕ್ಕೆಗೆ ಬೀಳಲಿದೆ ಕಾದು ನೋಡಬೇಕಿದೆ.