ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಆರು ವಿಕೆಟ್‌ಗಳ ಜಯಭೇರಿ ಬಾರಿಸಿದೆ. ಈಗಾಗಲೇ ಪ್ಲೇ ಆಫ್ ವಂಚಿತಗೊಂಡಿರುವ ಮೂರು ಬಾರಿಯ ಚಾಂಪಿಯನ್ ಸಿಎಸ್‌ಕೆ ಐಪಿಎಲ್‌ನಲ್ಲಿ 2020ರಲ್ಲಿ ತನ್ನ ಐದನೇ ಗೆಲುವು ದಾಖಲಿಸಿತು.
ಕೆಕೆಆರ್ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಓಪನರ್ ರುತುರಾಜ್ ಗಾಯಕ್ವಾಡ್ 72, ಅಂಬಟಿ ರಾಯುಡು 38, ಕೊನೆಯಲ್ಲಿ ರವೀಂದ್ರ ಜಡೇಜಾ ಸ್ಪೋಟಕ 31ರನ್‌ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್‌ಗಳ ಗೆಲುವು ಸಾಧಿಸಿತು.
ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೇವಲ 11 ಎಸೆತಗಳಲ್ಲಿ 31 ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ಓಪನರ್ ನಿತಿಶ್ ರಾಣಾ 87 ರನ್ ಸಿಡಿಸಿದ್ರೆ, ಶುಭ್ಮನ್ ಗಿಲ್ 26, ಮಾರ್ಗನ್ 15, ಕೊನೆಯಲ್ಲಿ ಕಾರ್ತಿಕ್ 10 ಎಸೆತಗಳಲ್ಲಿ 21ರನ್‌ಗಳಿಸುವ ಮೂಲಕ ಕೆಕೆಆರ್ ಐದು ವಿಕೆಟ್ ನಷ್ಟಕ್ಕೆ 172ರನ್ ಕಲೆಹಾಕಿತು.
ಚೆನ್ನೈ ಸೂಪರ್ ಕಿಂಗ್ಸ್ ಈ ಗೆಲುವಿನ ಮೂಲಕ ಕೊನೆಗೂ ತನ್ನ ಹಳೆಯ ಖದರ್‌ಗೆ ಮರಳುವ ಸೂಚನೆ ಕೊಟ್ಟಿದೆ. ಆದರೆ ಕೆಕೆಆರ್ ಈ ಪಂದ್ಯ ಸೋತು ತನ್ನ ಪ್ಲೇ ಆಫ್ ಅನ್ನು ಬಹುತೇಕ ಕಳೆದುಕೊಳ್ಳುವ ಚಿಂತೆಗೆ ಒಳಗಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications