
ಐಪಿಎಲ್ 13ನೇ ಆವೃತ್ತಿಯ 29ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಚೆನ್ನೈ ಸೂಪರ್‌ಕಿಂಗ್ಸ್ ಗೆಲುವಿನ ನಗೆ ಬೀರಿದೆ. 168 ರನ್‌ಗಳ ಗುರಿಯನ್ನು ನೀಡಿದ್ದ ಸಿಎಸ್‌ಕೆ ಹೈದ್ರಾಬಾದ್ ತಂಡವನ್ನು 147 ರನ್‌ಗಳಿಗೆ ಕಟ್ಟಿ ಹಾಕುವ ಮೂಲಕ 20 ರನ್‌ಗಳ ಗೆಲುವು ದಾಖಲಿಸಿತು.
ಚೆನ್ನೈ ನೀಡಿದ 168ರನ್‌ಗಳ ಗುರಿಯನ್ನ ಬೆನತ್ತಿದ ಸನ್‌ರೈಸರ್ಸ್ ಆರಂಭಿಕ ಆಘಾತ ಎದುರಿಸಿತು. ಎಸ್‌ಆರ್‌ಹೆಚ್ ನಾಯಕ ಡೇವಿಡ್ ವಾರ್ನರ್ 9ರನ್‌ಗಳಿಸಿ ಸ್ಯಾಮ್ ಕರನ್‌ಗೆ ವಿಕೆಟ್ ಒಪ್ಪಿಸಿದ್ರು. ಮನೀಶ್ ಪಾಂಡೆ 4ರನ್‌ಗಳಿಸಿದ್ದಾಗ ರನ್‌ಔಟ್‌ಗೆ ಬಲಿಯಾದ್ರು. ಜಾನಿ ಬೈಸ್ಟ್ರೋವ್ ಆಟವು 23ರನ್‌ಗೆ ಮುಕ್ತಾಯಗೊಂಡಿತು.
ಹೀಗೆ ವಿಕೆಟ್ ಉರುಳಿದರೂ ತಾಳ್ಮೆಯಿಂದಲೇ ರನ್ ಕಲೆಹಾಕುತ್ತಾ ಹೋದ ಕೇನ್ ವಿಲಿಯಮ್ಸನ್ ಅರ್ಧಶತಕ ದಾಖಲಿಸುವ ಮೂಲಕ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ರು. ಆದ್ರೆ ರನ್‌ರೇಟ್ ಹೆಚ್ಚಿದ್ದ ಕಾರಣ ಸಿಕ್ಸರ್ ಸಿಡಿಸಲು ಹೋಗಿ 57ರನ್‌ಗೆ ಬಲಿಯಾದ್ರು. ಇದಕ್ಕೂ ಮೊದಲು ಪ್ರಿಯಾಮ್ ಗರ್ಗ್ 16, ಆಲ್‌ರೌಂಡರ್ ವಿಜಯ್ ಶಂಕರ್ 12ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಇನ್ನು ರಶೀದ್ ಖಾನ್ ಆಟವೂ 14ರನ್‌ಗೆ ಕೊನೆಗೊಂಡಿತು. ಅಂತಿಮವಾಗಿ ಡೇವಿಡ್ ವಾರ್ನರ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿತು.

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಈ ಐಪಿಎಲ್ ಸೀಸನ್‌ನಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಆಯ್ದುಕೊಂಡ ಧೋನಿ ಆಶ್ಚರ್ಯಕರ ರೀತಿಯಲ್ಲಿ ಬೌಲರ್ ಸ್ಯಾಮ್ ಕರನ್‌ರನ್ನು ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಕಳುಹಿಸಿದರು. ಪರಿಣಾಮ ಫಾಫ್ ಡುಪ್ಲೆಸಿಸ್ ಜೊತೆಗೆ ಸ್ಯಾಮ್ ಕರನ್ ಇನ್ನಿಂಗ್ಸ್ ಆರಂಭಿಸಿದರು.
ಈ ಹೊಸ ಓಪನಿಂಗ್ ಜೋಡಿಗೆ ಆರಂಭದಲ್ಲೇ ವಿಘ್ನ ಎದುರಾಯಿತು. ಫಾಫ್ ಡುಪ್ಲೆಸಿಸ್ ಶೂನ್ಯಕ್ಕೆ ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಜಾನಿ ಬೈಸ್ಟ್ರೋವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. ಸ್ಯಾಮ್ ಕರನ್ ಆರಂಭದಲ್ಲಿ ನಿಧಾನವಾಗಿ ಆಡಿದ್ರು, ನಂತರದಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ನೊಂದಿಗೆ 31 ರನ್‌ಗಳಿಸಿ ಸಂದೀಪ್ ಇನ್ ಸ್ವಿಂಗ್‌ಗೆ ಬಲಿಯಾದ್ರು.
ಮೂರನೇ ವಿಕೆಟ್‌ಗೆ ಅಂಬಟಿ ರಾಯುಡು-ಶೇನ್ ವ್ಯಾಟ್ಸನ್ ಉತ್ತಮವಾಗೇ ಆಡುವಾಗ ಸನ್‌ರೈಸರ್ಸ್ ಹೈದ್ರಾಬಾದ್ ಬೌಲರ್‌ಗಳ ಪುಲ್ಟಾಸ್ ಬಾಲ್‌ಗೆ ವಿಕೆಟ್ ಒಪ್ಪಿಸಿದ್ರು. ಮೊದಲಿಗೆ ಅಂಬಟಿ ರಾಯುಡು 41ರನ್‌ಗೆ ಔಟಾದ್ರೆ, ಬೆನ್ನಲ್ಲೇ ಶೇನ್ ವ್ಯಾಟ್ಸನ್ 42ರನ್‌ಗೆ ವಿಕೆಟ್ ಒಪ್ಪಿಸಿದ್ರು.
ಸಿಎಸ್‌ಕೆ ನಾಯ ಧೋನಿ ಒಂದು ಅಮೋಘ ಸಿಕ್ಸರ್ ಸಿಡಿಸಿ 21ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಕೊನೆಯಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ 10 ಎಸೆತಗಳಲ್ಲಿ 25ರನ್ ಸಿಡಿಸಿದ ಪರಿಣಾಮ ಸಿಎಸ್‌ಕೆ 6 ವಿಕೆಟ್ ನಷ್ಟಕ್ಕೆ 167ರನ್ ಕಲೆಹಾಕಿತು.
ಆದರೆ ಈ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಸನ್‌ರೈಸರ್ಸ್ ಹೈದ್ರಾಬಾದ್ 147 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಪರಿಣಾಮ ಸಿಎಸ್‌ಕೆ 20 ರನ್‌ಗಳಿಂದ ಗೆದ್ದು ಪ್ಲೇ ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.