
ಒಟ್ಟು 16 ಪಂದ್ಯಗಳು ನಡೆಯಲಿವೆ
ಈ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ನಡೆಯಲಿದೆ. ಎಲ್ಲಾ ಪಂದ್ಯಗಳು ಟಿ20 ಮಾದರಿಯಲ್ಲಿ ನಡೆಯಲಿವೆ. ಎಲ್ಲಾ ಪಂದ್ಯಗಳಿಗೆ ಎಡ್ಜ್‌ಬಾಸ್ಟನ್ ಆತಿಥ್ಯ ವಹಿಸಲಿದೆ. ಈ ಕೂಟದಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು, ಒಟ್ಟಾರೆ 16 ಪಂದ್ಯಗಳು ನಡೆಯಲಿವೆ.
ಎ ಗುಂಪು ಪಾಕಿಸ್ತಾನ, ಆಸ್ಟ್ರೇಲಿಯಾ, ಭಾರತ ಮತ್ತು ಬಾರ್ಬಡೋಸ್ ಅನ್ನು ಒಳಗೊಂಡಿದೆ. ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಬಿ ಗುಂಪಿನಲ್ಲಿವೆ. ಎಲ್ಲಾ ತಂಡಗಳು ತಮ್ಮ ಗುಂಪಿನಲ್ಲಿ ಒಮ್ಮೆ ಪರಸ್ಪರ ಆಡುತ್ತವೆ. ಪ್ರತಿ ಗುಂಪಿನಿಂದ ಅಗ್ರ ಎರಡು ದೇಶಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಸೆಮೀಸ್‌ನಲ್ಲಿ ಸೋತ ಎರಡು ತಂಡಗಳು ಕಂಚಿನ ಪದಕದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಜುಲೈ 29 ರಂದು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯದೊಂದಿಗೆ ಮಹಿಳಾ ಕ್ರಿಕೆಟ್ ಸ್ಪರ್ಧೆಯು ಆರಂಭವಾಗಲಿದೆ.
ದೀಪಕ್ ಹೂಡಾ ಮ್ಯಾಚ್ ವಿನ್ನರ್ ಆಗಲು ಗೌತಮ್ ಗಂಭೀರ್ ಕಾರಣ: ವಿಜಯ್ ದಹಿಯಾ

ಎ ಮತ್ತು ಬಿ ಗುಂಪಿನಲ್ಲಿ ಸ್ಪರ್ಧೆ
ಗುಂಪು ಎ
1. ಆಸ್ಟ್ರೇಲಿಯಾ ವರ್ಸಸ್ ಭಾರತ, ಜುಲೈ 29 ರಂದು (ಸಂಜೆ 4.30ಕ್ಕೆ )
2. ಪಾಕಿಸ್ತಾನ ವರ್ಸಸ್ ಬಾರ್ಬಡೋಸ್ ಜುಲೈ 29 ರಂದು (ರಾತ್ರಿ 11.30ಕ್ಕೆ)
3. ಭಾರತ ವರ್ಸಸ್ ಪಾಕಿಸ್ತಾನ, ಜುಲೈ 31, ಮಧ್ಯಾಹ್ನ 12 ರಂದು (ಸಂಜೆ 4.30ಕ್ಕೆ )
4. ಬಾರ್ಬಡೋಸ್ ವರ್ಸಸ್ ಆಸ್ಟ್ರೇಲಿಯಾ ಜುಲೈ 31 ರಂದು (ರಾತ್ರಿ 11.30ಕ್ಕೆ)
5. ಆಸ್ಟ್ರೇಲಿಯಾ ವರ್ಸಸ್ ಪಾಕಿಸ್ತಾನ, ಆಗಸ್ಟ್ 3 (ಸಂಜೆ 4.30ಕ್ಕೆ )
6. ಭಾರತ ವರ್ಸಸ್ ಬಾರ್ಬಡೋಸ್, ಆಗಸ್ಟ್ 3 ರಂದು (ರಾತ್ರಿ 11.30ಕ್ಕೆ)
ಗ್ರೂಪ್ ಬಿ
1. ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, ಜುಲೈ 30 ರಂದು (ಸಂಜೆ 4.30ಕ್ಕೆ )
2. ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ, ಜುಲೈ 30 ರಂದು (ರಾತ್ರಿ 11.30ಕ್ಕೆ)
3. ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, ಆಗಸ್ಟ್ 2 ರಂದು (ಸಂಜೆ 4.30ಕ್ಕೆ )
4. ಶ್ರೀಲಂಕಾ vs ನ್ಯೂಜಿಲೆಂಡ್, ಆಗಸ್ಟ್ 2 ರಂದು (ರಾತ್ರಿ 11.30ಕ್ಕೆ)
5. ದಕ್ಷಿಣ ಆಫ್ರಿಕಾ vs ಶ್ರೀಲಂಕಾ, ಆಗಸ್ಟ್ 4 ರಂದು, (ಸಂಜೆ 4.30ಕ್ಕೆ )
6. ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್, ಆಗಸ್ಟ್ 4 ರಂದು (ರಾತ್ರಿ 11.30ಕ್ಕೆ)
ಅಂಪೈರ್‌ಗಳಿಗೂ 'ಎ' ಪ್ಲಸ್ ಕ್ಯಾಟಗರಿ ಪರಿಚಯಿಸಿದ ಬಿಸಿಸಿಐ; ದಿನದ ಸಂಭಾವನೆ ಎಷ್ಟು?

ಸೆಮಿಫೈನಲ್, ಕಂಚು ಮತ್ತು ಚಿನ್ನದ ಪದಕ್ಕಾಗಿ ನಡೆಯುವ ಪಂದ್ಯಗಳು
1ನೇ ಸೆಮಿಫೈನಲ್: ಆಗಸ್ಟ್ 6 ರಂದು ಸಂಜೆ 4.30ಕ್ಕೆ ನಡೆಯಲಿದೆ
2ನೇ ಸೆಮಿಫೈನಲ್: ಆಗಸ್ಟ್ 6, ರಾತ್ರಿ 11.30ಕ್ಕೆ ನಡೆಯಲಿದೆ
ಕಂಚಿನ ಪದಕದ ಪಂದ್ಯ: ಆಗಸ್ಟ್ 7 ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ
ಚಿನ್ನದ ಪದಕದ ಪಂದ್ಯ: ಆಗಸ್ಟ್ 7 ರಂದು ರಾತ್ರಿ 10.30ಕ್ಕೆ ನಡೆಯಲಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಸ್ಕ್ವಾಡ್
ಭಾರತ ಮಹಿಳೆಯರು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ತನಿಯಾ ಭಾಟಿಯಾ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸ್ನೇಹ ರಾಣಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರೇಣುಕಾ ಸಿಂಗ್ , ಪೂಜಾ ವಸ್ತ್ರಾಕರ್, ಶಫಾಲಿ ವರ್ಮಾ, ರಾಧಾ ಯಾದವ್

ಪಂದ್ಯಗಳನ್ನ ಎಲ್ಲಿ ವೀಕ್ಷಿಸಬಹುದು?
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಕಾಮನ್‌ವೆಲ್ತ್ ಗೇಮ್ಸ್‌ನ ಎಲ್ಲಾ ಕ್ರಿಕೆಟ್ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಇನ್ನು ಅಧಿಕೃತ ಆ್ಯಪ್ ಸೋನಿಲೈವ್ ಮೂಲಕ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡುತ್ತದೆ.


Click it and Unblock the Notifications
