James Anderson last match: ಲಾರ್ಡ್ಸ್‌ನಲ್ಲಿ ಜೇಮ್ಸ್ ಆಂಡರ್ಸನ್‌ಗೆ ಬೆಲ್ ಬಾರಿಸಿ ಸ್ವಾಗತ ಕೋರಿದ ಪುತ್ರಿಯರು; ವಿಡಿಯೋ ವೈರಲ್
ಜುಲೈ 11 ಬುಧವಾರ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಟೆಸ್ಟ್ ಟಿ2ನ್ನು ೩೧ಸ0 ಸರಣಿಯ ಮೊದಲ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಇದು ಇಂಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ವೇಗ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಕೊನೆಯ ಪಂದ್ಯವಾಗಿದೆ.
ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಾಶ್ವತವಾಗಿ ವಿದಾಯ ಹೇಳಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ಆ್ಯಂಡರ್ಸನ್ ಮೈದಾನಕ್ಕೆ ಬಂದಾಗ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಹಾಗೂ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಸ್ವಾಗತಿಸಿದರು.

ಈ ವೇಳೆ ವಿಶೇಷವಾದ ಘಟನೆಯೊಂದು ನಡೆದಿದೆ. ತಮ್ಮ ತಂದೆಯ ಕೊನೆ ಪಂದ್ಯವನ್ನು ವಿಕ್ಷೀಸಲು ಲಾರ್ಡ್ಸ್ ಮೈದಾನಕ್ಕೆ ಆಗಮಿಸಿದ ಜೇಮ್ಸ್ ಆಂಡರ್ಸನ್ ಪುತ್ರಿಯರು ಕೂಡ ಸಭಾಂಗಣದಲ್ಲಿ ಸುಮಾರು ಐದು ನಿಮಿಷಗಳ ಗಂಟೆಯನ್ನು ಬಾರಿಸುವ ಮೂಲಕ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದ 701ನೇ ವಿಕೆಟ್ ಪಡೆದರು.ವೆಸ್ಟ್ ಇಂಡೀಸ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿ 121 ರನ್‌ಗಳಿಗೆ ಆಲೌಟ್ ಆಯಿತು.
ಜೇಮ್ಸ್ ಆಂಡರ್ಸನ್ ತನ್ನ ಕೊನೆಯ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್ ಪಡೆದರು. 2 ರನ್ ಗಳಸಿದ ಜೇಡನ್ ಸೀಲ್ಸ್ ಅವರನ್ನು ಎಲ್‌ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ಈ ವಿಕೆಟ್‌ನೊಂದಿಗೆ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 701ನೇ ವಿಕೆಟ್ ಕಬಳಿಸಿ ಮಿಂಚಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಆಂಡರ್ಸನ್ 10.3 ಓವರ್‌ಗಳನ್ನು ಬೌಲಿಂಗ್ ಮಾಡಿದರು. 3 ಮೇಡನ್ ಓವರ್‌ಗಳೊಂದಿಗೆ 2.40 ರ ಆರ್ಥಿಕತೆಯಲ್ಲಿ 26 ರನ್‌ಗಳಿಗೆ 1 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ 41.4 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು.
ಚೊಚ್ಚಲ ಪಂದ್ಯವಾಡಿದ ಮೈದಾನದಲ್ಲೇ ವಿದಾಯ
ಜೇಮ್ಸ್ ಆಂಡರ್ಸನ್ 2003ರಲ್ಲಿ ಲಾರ್ಡ್ಸ್ ಮೈದಾನದಲ್ಲಿಯೇ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದು ವಿಶೇಷವಾಗಿತ್ತು . ಈ ಮೈದಾನದಲ್ಲಿ 701 ವಿಕೆಟ್‌ಗಳಲ್ಲಿ ಒಟ್ಟು 191 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೈದಾನದಲ್ಲೇ ಇದೀಗ ವಿದಾಯ ಹೇಳಲು ಹೊರಟಿದ್ದಾರೆ.
ಆಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 987 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ 700 ಟೆಸ್ಟ್ ವಿಕೆಟ್‌ಗಳು, 269 ಏಕದಿನ ಮತ್ತು 18 ಟಿ20 ವಿಕೆಟ್‌ಗಳು ಸೇರಿವೆ.
ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 1347 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶೇನ್ ವಾರ್ನ್ 1001 ಎರಡನೇ ಸ್ಥಾನದಲ್ಲಿ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications