Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸುತ್ತಿಗೆಯಿಂದ ಪಿಚ್‌ ರೆಡಿ ಮಾಡಿದ ಡೇವಿಡ್ ವಾರ್ನರ್: ಮನೆಸುತ್ತ ಸ್ವಲ್ಪ ಕೆಲಸಮಾಡಿ ಎಂದ ವಾರ್ನರ್ ಪತ್ನಿ

David warner

ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಪಂದ್ಯದ ಮಧ್ಯದಲ್ಲಿ ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್ ಸುತ್ತಿಗೆ ತೆಗೆದುಕೊಂಡು ಪಿಚ್‌ ರೆಡಿಮಾಡಿದ ಘಟನೆ ನಡೆಯಿತು.

ವಾರ್ನರ್ ಸುತ್ತಿಗೆ ಕೆಲಸವನ್ನ ತೆಗೆದುಕೊಂಡ ಸೋಶಿಯಲ್ ಮೀಡಿಯಾ ಬಳಕೆದಾರರು ಕಚ್ಚಾ ಬದಾಂ ಹಾಡಿಗೆ ಹೋಲಿಕೆ ಮಾಡಿ ವೈರಲ್ ಮಾಡಿದ್ದರು. ಈ ವೀಡಿಯೋಗೆ ಸಂಬಂಧಪಟ್ಟಂತೆ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಕೂಡ ಟ್ವೀಟ್ ಮಾಡಿದ್ದರು.

'' ಡೇವಿಡ್ ವಾರ್ನರ್ ಈ ರೀತಿಯ ಕೆಲಸವನ್ನ ನಮ್ಮ ಮನೆಯ ಸುತ್ತಲೂ ಮಾಡಲಿ ಎಂದು ಬಯಸುತ್ತೇನೆ'' ಎಂದು ವಾರ್ನರ್ ಪತ್ನಿ ಟ್ವೀಟ್ ಮಾಡಿದ್ದರು. ಇದೀಗ ಈ ವೀಡಿಯೊವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಟೆಸ್ಟ್ ಪಂದ್ಯದ ಕೊನೆಯ ದಿನ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಕುತೂಹಲಕಾರಿ ಹೋರಾಟ ನಡೆದಿದೆ. ಆದರೆ, ಆಸ್ಟ್ರೇಲಿಯದ ಬೌಲರ್‌ಗಳು ಬೌಲಿಂಗ್ ಮಾಡುತ್ತಿದ್ದಂತೆ ಪಿಚ್ ಸ್ವಲ್ಪ ಎಡವಟ್ಟಾಯಿತು. ಬೌಲ್ ಮಾಡಲು ಓಡಿ ಸ್ಟಂಪ್‌ ಬಳಿ ಕಾಲುಗಳನ್ನು ಇಡುವಾಗ ಪಿಚ್ ಸ್ವಲ್ಪ ವ್ಯತ್ಯಾಸವಾದಂತಿತ್ತು. ಇದರಿಂದ ಬೌಲರ್‌ಗಳಿಗೆ ಬೌಲಿಂಗ್ ಮಾಡಲು ಕಷ್ಟವಾಯಿತು.

ಅಂಪೈರ್‌ಗಳ ಅನುಮತಿಯೊಂದಿಗೆ, ವಾರ್ನರ್ ಗ್ರೌಂಡ್‌ಮ್ಯಾನ್‌ನಿಂದ ಸುತ್ತಿಗೆಯನ್ನ ಪಡೆದು ಪಿಚ್ ಅನ್ನು ನೆಲಸಮಗೊಳಿಸಲು ಮಣ್ಣಿನ ಮೇಲೆ ಬಡಿದರು. ಪಾಕಿಸ್ತಾನದ ಸ್ಕೋರ್ 380-4 ಆಗಿದ್ದಾಗ ಈ ಘಟನೆ ನಡೆದಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ವೀಡಿಯೊ ವೈರಲ್ ಆಗಿದೆ. ಇನ್ನೊಬ್ಬ ಥಾರ್ ಮ್ಯಾನ್ ಬರೆದಿದ್ದಾರೆ ಎಂದು ವಾರ್ನರ್ ಕೆಲಸವನ್ನ ಪಿಸಿಬಿ ಮೆಚ್ಚಿತು.

ಇದನ್ನು ನೋಡಿದ ವಾರ್ನರ್ ಪತ್ನಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಮನೆಯ ಸುತ್ತಲೂ ಆ ಸುತ್ತಿಗೆಯಿಂದ ಅದೇ ರೀತಿ ಕೆಲಸ ಮಾಡುವಂತೆ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯ ನಂತರ ವಾರ್ನರ್ ಶೀಘ್ರದಲ್ಲೇ ಐಪಿಎಲ್‌ನಲ್ಲಿ ಆಡಲಿದ್ದಾರೆ. ಐಪಿಎಲ್ ಮೇ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ.

Story first published: Thursday, March 17, 2022, 21:17 [IST]
Other articles published on Mar 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+