For Quick Alerts
ALLOW NOTIFICATIONS  
For Daily Alerts
 

DC vs RCB: ಒಂದೇ ಕಲ್ಲಿಗೆ ಎರಡು ಏಟು: ಫಿಲ್ ಸಾಲ್ಟ್ ಹೊಗಳುತ್ತಲೇ ಕೊಹ್ಲಿಯತ್ತ ಚಾಟಿ ಬೀಸಿದ ಆಕಾಶ್ ಚೋಪ್ರ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹೀನಾಯ ಸೋಕು ಅನುಭವಿಸಿದೆ. ಆರ್‌ಸಿಬಿ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ದಾಂಡಿಗರು ಆರ್‌ಸಿಬಿ ನೀಡಿದ ಗುರಿಯನ್ನು ಸುಲಭವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಅದರಲ್ಲೂ ಡಿಸಿ ಪರವಾಗಿ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಸಾಲ್ಟ್ 87 ರನ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ ಸುಲಭವಾಗಿ ಗೆಲುವು ಸಾಧಿಸಲು ಕಾರಣವಾದರು.

ಈ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ವಿಶೇಷವಾಗಿ ಪ್ರಶಂಸಿಸಿದ್ದಾರೆ. ಫಿಲ್ ಸಾಲ್ಟ್ ಅವರ ಈ ಪ್ರದರ್ಶನದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಮೆಚ್ಚುಗೆ ಸೂಚಿಸಿರುವ ಆಕಾಶ್ ಚೋಪ್ರ ಇದೇ ಸಂದರ್ಭದಲ್ಲಿ ಆರ್‌ಸಿಬಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಕಟು ಟೀಕೆ ಮಾಡಿದ್ದಾರೆ ಎಂಬ ವಿಶ್ಲೇಷಣೆ ಕೂಡ ನಡೆಯುತ್ತಿದೆ. ಹಾಗಾದರೆ ಆಕಾಶ್ ಚೋಪ್ರ ಹೇಳಿದ್ದೇನು? ಮುಂದೆ ಓದಿ..

DC vs RCB: Aakash Chopra praises Phil Salt, is he silently criticize Virat Kohli?

ಆಕಾಶ್ ಚೋಪ್ರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ "ಫಿಲ್ ಸಾಲ್ಟ್ ಗಾಯಕ್ಕೆ ಉಪ್ಪು ಸವರಿದ್ದಾರೆ. ಅವರ ಆಟ ಸಾಕಷ್ಟು ಆಕ್ರಮಣಕಾರಿಯಾಗಿತ್ತು. ಚೆಂಡಿಗೆ ನಿಷ್ಕರುಣೆಯಿಂದ ಬಾರಿಸಲಾಗುತ್ತಿದೆ ಎಂದು ದೆಹಲಿ ಪೊಲೀಸಲಿರಿಗೂ ಮಾಹಿತಿ ನೀಡಲಾಗಿತ್ತು. ಆರಂಬಿಕ ಆಟಗಾರ ಎಂದರೆ ಈ ರೀತಿ ಇರಬೇಕು. ಆತ ರನ್‌ ವೇಗವನ್ನು ನಿಧಾನಗೊಳಿಸಬಾರದು" ಎಂದಿದ್ದಾರೆ ಆಕಾಶ್ ಚೋಪ್ರ.

ಈ ಮಾತನ್ನು ಹೇಳುವ ಮೂಲಕ ಆಕಾಶ್ ಚೋಪ್ರ ಫಿಲ್ ಸಾಲ್ಟ್ ಪ್ರದರ್ಶನವನ್ನು ಹೊಗಳುತ್ತಲೇ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಟೀಕಿಸಿದ್ದಾರೆ ಎಂಬ ಅಭಿಪ್ರಾಯಗಳುಯ ವ್ಯಕ್ತವಾಗುತ್ತಿದೆ. ಇಲ್ಲಿ ಆಕಾಶ್ ಚೋಪ್ರ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸದೇ ಇದ್ದರು ಕೂಡ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಡಿದ ಬ್ಯಾಟಿಂಗ್ ಪ್ರದರ್ಶನ ನಿಧಾನಗತಿಯಲ್ಲಿದ್ದ ಕಾರಣ ಆರ್‌ಸಿಬಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ. ಇದೇ ಕಾರಣಕ್ಕೆ ಕೊಹ್ಲಿಯನ್ನು ಸೂಚ್ಯವಾಗಿ ಆಕಾಶ್ ಚೋಪ್ರ ಟೀಕಿಸಿದರೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ.

ಆಕ್ರಮಣಕಾರಿಯಾಗಿರಲಿಲ್ಲ ಕೊಹ್ಲಿ ಆಟ

ಅಂದಹಾಗೆ ಡೆಲ್ಲಿ ಕ್ಯಾಪಿಟಲ್ಸ ವಿರುದ್ಧ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಅದ್ಭುತ ಆರಂಭವನ್ನು ಪಡೆಯಿತು. ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿಯಿಂದ ಮತ್ತೊಮ್ಮೆ ಅದ್ಭುತ ಪ್ರದರ್ಶನ ಬಂದಿತು. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರೀತಿ ನೋಡಿದಾಗ ಬ್ಯಾಟಿಂಗ್‌ಗೆ ಸವಾಲಿನ ಪಿಚ್ ರೀತಿ ಭಾಸವಾಗಿತ್ತು. ಈ ಪಂದ್ಯದಲ್ಲಿ ಕೊಹ್ಲಿ 55 ರನ್‌ಗಳಿಸಿದರಾದರೂ ಅದಕ್ಕಾಗಿ ಅವರು 46 ಎಸೆತಗಳನ್ನು ಬಳಸಿಕೊಂಡಿದ್ದರು. ಅಂದರೆ 119.57ರ ಸ್ಟ್ರೈಕ್‌ರೆಟ್‌ನಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದರು. ಆದರೆ ಇಡೀ ಪಂದ್ಯದಲ್ಲಿ ಉಳಿದ ಯಾವ ದಾಂಡಿಗ ಕೂಡ ಇಷ್ಟು ನಿಧಾನಗತಿಯ ಬ್ಯಾಟಿಂಗ್ ನಡೆಸಿರಲಿಲ್ಲ. ಹಾಗಾಗಿ ವೇಗವಾಗಿ ರನ್‌ಗಳಿಸಲು ಅವಕಾಶವಿದ್ದರೂ ಕೊಹ್ಲಿ ಬ್ಯಾಟಿಂಗ್‌ನ ಶೈಲಿಯ ಕಾರಣದಿಂದಾಗಿ ತಂಡಕ್ಕೆ ಹಿನ್ನಡೆಯಾಯಿತು ಎಂಬ ಮಾತುಗಳು ವ್ಯಕ್ತವಾಗುತ್ತಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 181 ರನ್‌ಗಳನ್ನು ಗಳಿಸಿತು. ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಮಹಿಪೊಆಲ್ ಲೋಮ್ರೋರ್ ಅರ್ಧ ಶತಕ ಬಾರಿಸಿದರೆ ಫಾಫ್ ಡು ಪ್ಲೆಸಿಸ್ 45 ರನ್ ಬಾರಿಸಿ ಅಬ್ಬರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಶೂನ್ಯ ಸುತ್ತಿ ಫೆವಿಲಿಯನ್ ಸೇರಿಕೊಂಡಿದ್ದರು.

ಆರ್‌ಸಿಬಿ ತಮಡ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಅದರಲ್ಲೂ ಫಿಲಿಪ್ ಸಾಲ್ಟ್ ಕೇವಲ 45 ಎಸೆತಗಳಲ್ಲಿ 87 ರನ್ ಬಾರಿಸಿ ಆರ್‌ಸಿಬಿ ತಂಡದ ಗೆಲವಿಇನ ಕನಸನ್ನು ಭಗ್ನಗೊಳಿಸಿದರು. ಅವರಿಗೆ ಆರಂಭದಲ್ಲಿ ಡೇವಿಡ್ ವಾರ್ನರ್ ಹಾಗೂ ರಿಲೀ ರೊಸ್ಸೋ ಅದ್ಭುತವಾಗಿ ಸಾಥ್ ನೀಡಿದರು. ಆರ್‌ಸಿಬಿ ನೀಡಿದ್ದ ಗುರಿಯನ್ನು ಡಿಸಿ ಕೇವಲ 16.4 ಓವರ್‌ಗಳಲ್ಲಿ ತಲುಪುವಲ್ಲಿ ಯಶಸ್ವಿಯಾಗಿದ್ದು ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದೆ.

Story first published: Sunday, May 7, 2023, 12:29 [IST]
Other articles published on May 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+