Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾ

Quinton de Kock 2019

ಹೊಸದಿಲ್ಲಿ, ಆಗಸ್ಟ್‌ 13: ಮುಂಬರುವ ಭಾರತ ವಿರುದ್ಧದ ಟಿ20 ಮತ್ತು ಟೆಸ್ಟ್‌ ಕ್ರಿಕೆಟ್‌ ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾ ತನ್ನ ತಂಡಗಳನ್ನು ಪ್ರಕಟ ಮಾಡಿದ್ದು, ಟಿ20 ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.

ಯುವ ಆಟಗಾರರಾದ ರಾಸಿ ವ್ಯಾನ್‌ ಡರ್‌ ಡುಸೆನ್‌ ಮತ್ತು ತೆಂಬಾ ಬವೂಮಾ ಅವರನ್ನು ಕ್ರಮವಾಗಿ ಟಿ20 ಮತ್ತು ಟೆಸ್ಟ್‌ ತಂಡದ ಉಪನಾಯಕರನ್ನಾಗಿ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಮಂಗಳವಾರ ನೇಮಕ ಮಾಡಿದ್ದು, ಇದೇ ವೇಳೆ ಏಡೆನ್‌ ಮಾರ್ಕ್ರಮ್‌ ಮತ್ತು ಲುಂಗಿ ಎನ್ಗಿಡಿ ಅವರನ್ನು ಟಿ20 ತಂಡಕ್ಕೆ ಪರಿಗಣಿಸಲಾಗಿಲ್ಲ.

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್‌ ಆಟಗಾರರಾದ ಎನ್ಗಿಡಿ ಮತ್ತು ಮಾರ್ಕ್ರಮ್‌ ಟಿ20 ಸರಣಿ ಬದಲಾಗಿ, ಟೆಸ್ಟ್‌ ಸರಣಿಗೆ ಪೂರ್ವ ಸಿದ್ಧತೆಯಾಗಿ ಭಾರತ 'ಎ' ವಿರುದ್ಧ ದಕ್ಷಿಣ ಆಫ್ರಿಕಾ 'ಎ' ತಂಡದ ಪರ ಆಡಲಿದ್ದಾರೆ. ಟಿ20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್‌ 15ರಂದು ಧರ್ಮಶಾಲಾದಲ್ಲಿ ನಡೆಯಲಿದ್ದು, ಟೆಸ್ಟ್‌ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ಅಕ್ಟೋಬರ್‌ 2ರಂದು ಆರಂಭವಾಗಲಿದೆ.

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾದ ಟೆಸ್ಟ್‌ ತಂಡ
ಫಾಫ್‌ ಡು'ಪ್ಲೆಸಿಸ್‌ (ನಾಯಕ), ತೆಂಬಾ ಬವೂಮಾ, ಥಿಯೂನಿಸ್‌ ಡೆ'ಬ್ರೂಯ್ನ್‌, ಕ್ವಿಂಟನ್‌ ಡಿ'ಕಾಕ್‌, ಡೀನ್‌ ಎಲ್ಗರ್‌, ಝುಬಾಯರ್‌ ಹಂಝಾ, ಕೇಶವ್‌ ಮಹಾರಾಜ್‌, ಏಡನ್‌ ಮಾರ್ಕ್ರಮ್‌, ಸೆನುರಾನ್‌ ಮುತ್ತುಸ್ವಾಮಿ, ಲುಂಗಿ ಎನ್ಗಿಡಿ, ಎನ್ರಿಚ್‌ ನೋರ್ಜೆ, ವೆರ್ನಾನ್‌ ಫಿಲ್ಯಾಂಡರ್‌, ಡೇನ್‌ ಪೀಡ್ತ್‌, ಕಗಿಸೊ ರಬಾಡ, ರುಡಿ ಸೆಕೆಂಡ್‌.

ಟಿ20 ತಂಡ
ಕ್ವಿಂಟನ್‌ ಡಿ'ಕಾಕ್‌ (ನಾಯಕ), ರಾಸಿ ವ್ಯಾನ್‌ ಡೆರ್‌ ಡುಸೆನ್‌, ತೆಂಬಾ ಬವೂಮಾ, ಜೂನಿಯರ್‌ ಡಾಲಾ, ಯೊರ್ನ್‌ ಫಾರ್ಟುನಿ, ಬ್ಯೂರಾನ್‌ ಹೆಂಡ್ರಿಕ್ಸ್‌, ರೀಝಾ ಹೆಂಡ್ರಿಕ್ಸ್‌, ಡೇವಿಡ್‌ ಮಿಲ್ಲರ್‌, ಎನ್ರಿಚ್‌ ನೋರ್ಜೆ, ಆಂಡಿಲ್‌ ಫೆಹ್ಲುಕ್ವಾಯೊ, ಡ್ವೇಯ್ನ್‌ ಪ್ರೆಟೋರಿಯಸ್‌, ಕಗಿಸೊ ರಬಾಡ, ತಬ್ರೇಝ್‌ ಶಾಮ್ಸಿ, ಜೆಜೆ ಸ್ಮಟ್ಸ್‌.

Story first published: Tuesday, August 13, 2019, 22:33 [IST]
Other articles published on Aug 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+