ಎಲ್ಲಿದ್ದಾಳೆ ಅವಳು.. ! ಬೌಂಡರಿ ಲೈನ್‌ನಲ್ಲಿ ಪ್ರೇಯಸಿಯ ಹುಡುಕಾಡಿದ ದೀಪಕ್ ಚಹಾರ್

ಜೈಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್‌ಗಳ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಎರಡು ಎಸೆತ ಬಾಕಿ ಇರುವಂತೆಯೇ ಪಂದ್ಯವನ್ನ ಗೆದ್ದು ಬೀಗಿತು.
ಈ ಪಂದ್ಯದಲ್ಲಿ ದೀಪಕ್ ಚಹಾರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ರು. ಅದ್ರಲ್ಲೂ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಬಳಿಕ ಮೊದಲ ಬಾರಿಗೆ ತಮ್ಮ ತವರು ಮೈದಾನದಲ್ಲಿ ಆಡುವ ಅವಕಾಶ ಲಭಿಸಿತ್ತು.
ಕೋವಿಡ್-19 ಸಾಂಕ್ರಾಮಿಕದ ಬಳಿಕ ಮೊದಲ ಬಾರಿಗೆ ಪೂರ್ಣ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಲೋಕಲ್ ಬಾಯ್ ದೀಪಕ್ ಚಹಾರ್ ಅಭಿಮಾನಿಗಳ ಬೆಂಬಲ ಕೂಡ ಜೋರಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡ್ರು, ಮಾರ್ಟಿನ್ ಗಪ್ಟಿಲ್ ಮತ್ತು ಚಾಪ್‌ಮನ್ ಅಬ್ಬರ ಜೋರಾಗಿತ್ತು.

ದೀಪಕ್ ಹೆಸರಿಡಿದು ಕೂಗಿದ ಸಹೋದರಿ ಮಾಲ್ತಿ ಚಹಾರ್
ಭಾರತದ ಫೀಲ್ಡಿಂಗ್ ಇನ್ನಿಂಗ್ಸ್‌ನ 8 ನೇ ಓವರ್‌ನಲ್ಲಿ, ದೀಪಕ್ ಚಹಾರ್ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ರು. ಈ ವೇಳೆ ದೀಪಕ್ ಸಹೋದರಿ ಮಾಲ್ತಿ ಚಹಾರ್ ತನ್ನ ಸಹೋದರನನ್ನ ಅಭಿಮಾನಿಯಂತೆ ಕೂಗಿ ಕರೆದ್ರು. ಆತ ನೋಡುವವರೆಗೂ ಪದೇ ಪದೇ ಆತನ ಹೆಸರನ್ನು ಕರೆಯುತ್ತಲೇ ಇದ್ದಳು.
ಹೀಗೆ ಪದೇ ಪದೇ ತನ್ನ ಹೆಸರನ್ನ ಕೂಗಿ ಕರೆಯುತ್ತಿದ್ದ ಸಹೋದರಿ ಕಡೆಗೆ ದೀಪಕ್ ಚಹಾರ್ ನೋಡಿದ್ರು. ಹಾಗೆಯೇ ತಂಗಿಗೆ ಹಾಯ್ ಎಂದಿದ್ದಾರೆ. ಇದೇ ವೇಳೆಯಲ್ಲಿ ಅವಳು ಎಲ್ಲಿದ್ದಾಳೆ? ಎಂದು ದೀಪಕ್ ಚಹಾರ್ ತನ್ನ ಭಾವೀ ಪತ್ನಿಯ ಬಗ್ಗೆ ಕೇಳಿದರು.
ತನ್ನ ಪ್ರೇಯಸಿಯನ್ನ ಹುಡುಕಾಡಿದ ದೀಪಕ್ ಚಹಾರ್
ಇದಕ್ಕೆ ಉತ್ತರಿಸಿದ ಅವರ ಸಹೋದರಿ ಮಾಲ್ತಿ, ಅವರು ಸ್ಟ್ಯಾಂಡ್‌ನಲ್ಲಿ ಮಹಡಿಯ ಮೇಲಿದ್ದಾರೆ ಎಂದು ಉತ್ತರಿಸಿದರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲವು ಅಭಿಮಾನಿಗಳು ಚಹಾರ್ ಪಂದ್ಯದಲ್ಲೂ ಗೆಳತಿಯರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅವರ ಕಾಲೆಳೆದರೆ, ಇನ್ನೂ ಕೆಲವರು ಅವರ ಪ್ರೀತಿಯನ್ನು ಕೊಂಡಾಡಿದ್ದಾರೆ.

ಐಪಿಎಲ್‌ನಲ್ಲಿ ಪ್ರೇಮ ನಿವೇದನೆ
ಐಪಿಎಲ್ ಸಮಯದಲ್ಲಿ ದೀಪರ್ ಚಹಾರ್ ಪಂದ್ಯದ ನಂತರ ಸ್ಟ್ಯಾಂಡ್‌ನಲ್ಲೇ ತನ್ನ ಗೆಳತಿ ಜಯ ಭಾರದ್ವಾಜ್‌ಗೆ ಎಲ್ಲರ ಮುಂದೆ ಪ್ರೇಮ ನಿವೇದನೆ ಮಾಡಿ ಸಾಕಷ್ಟು ಸುದ್ದಿಯಾಗಿದ್ರು. ಆಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ದೀಪಕ್ ಚಹಾರ್ ಟೀಂ ಇಂಡಿಯಾದಲ್ಲಿ ಜೊತೆಗೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ರು. ಇವರ ಪ್ರೇಮ ನಿವೇದನೆ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ದೀಪಕ್ ತನ್ನ ಗೆಳತಿ ಜಯಾ ಭಾರಧ್ವಜ್‌ರ ಹುಡುಕಾಟದ ವೀಡಿಯೋ ಕೂಡ ಸದ್ದು ಮಾಡಿದೆ.

ದೀಪಕ್ ಚಹಾರ್‌ಗೆ 'ಬ್ಯಾಡ್ ಡೇ'
ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯವು ದೀಪಕ್ ಚಹಾರ್‌ಗೆ ಉತ್ತಮವಾಗಿರ್ಲಿಲ್ಲ. ಟೀಂ ಇಂಡಿಯಾ ಪರ ಅಂದು ಅತ್ಯಂತ ದುಬಾರಿ ಬೌಲರ್ ಆಗಿ ಗುರುತಿಸಿಕೊಂಡ್ರು. ತವರು ಮೈದಾನದಲ್ಲಿ ಮಿಂಚಬೇಕು ಎಂದುಕೊಂಡಿದ್ದ ಚಹಾರ್ ಆಸೆಗೆ ಮಾರ್ಟಿನ್ ಗಪ್ಟಿಲ್ ಮತ್ತು ಚಾಪ್‌ಮನ್ ತಣ್ಣೀರೆರಚಿದ್ರು.
ದೀಪಕ್ ಚಹಾರ್ ನಾಲ್ಕು ಓವರ್‌ಗಳಲ್ಲಿ 42 ರನ್‌ಗಳನ್ನು ನೀಡಿದರು. ಆದರೆ, 70 ರನ್ ಗಳಿಸಿದ್ದ ಮಾರ್ಟಿನ್ ಗಪ್ಟಿಲ್ ಅವರ ಮಹತ್ವದ ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿರಂತಹ ಸ್ಟಾರ್ ಬೌಲರ್‌ಗಳಿಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಿರುವಾಗ, ದೀಪಕ್ ಚಹಾರ್‌ರಂತಹ ಯುವ ಆಟಗಾರರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
ಮೊದಲ ಟಿ20 ಪಂದ್ಯದಲ್ಲಿ 165 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 48, ಸೂರ್ಯಕುಮಾರ್ ಯಾದವ್ ಸ್ಫೋಟಕ 62 ರನ್‌ಗಳ ನೆರವಿನಿಂದಾಗಿ ಭಾರತವು ಗೆಲುವಿನ ನಗೆ ಬೀರಿತು. ಇದಕ್ಕೂ ಮೊದಲು ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ , ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದ್ರೆ, ದೀಪಕ್ ಚಹಾರ್ ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications