
ಚಹಾರ್ ದಾಳಿಗೆ ಟಾಪ್ 3 ಬ್ಯಾಟ್ಸ್‌ಮನ್‌ಗಳು ಔಟ್
ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ನಾಯಕನ ಆಯ್ಕೆಯನ್ನ ಬೌಲರ್‌ಗಳು ಬೆಂಬಲಿಸಿದ್ದಾರೆ. ಅದ್ರಲ್ಲೂ ದೀಪಕ್ ಚಹಾರ್ ಪ್ರಬಲ ದಾಳಿಗೆ ಜಿಂಬಾಬ್ವೆ ಟಾಪ್ ಆರ್ಡರ್ ಬ್ಯಾಟರ್‌ಗಳು ತತ್ತರಿಸಿದ್ದಾರೆ.
ಜಿಂಬಾಬ್ವೆ ಟಾಪ್ 3 ಬ್ಯಾಟ್ಸ್‌ಮನ್‌ಗಳಾದ ತಡಿವಾನಾಶೆ ಮರುಮನಿ (8), ಇನೋಸೆಂಟ್ ಕೈಯಾ(4), ವೆಸ್ಲಿ ಮಾಧೆವೆರೆರನ್ನ(5) ದೀಪಕ್ ಚಹಾರ್ ಸಿಂಗಲ್ ಡಿಜಿಟ್‌ಗೆ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೀಪಕ್ ಚಹಾರ್ ಸ್ವಿಂಗ್‌ಗೆ ಬ್ಯಾಟ್ ಬೀಸಲು ಹೆಣಗಾಡಿದ ಈ ಮೂವರು ಬ್ಯಾಟರ್‌ಗಳು 10 ಓವರ್‌ನೊಳಗೆ ಔಟಾಗಿ ನಿರಾಸೆ ಮೂಡಿಸಿದ್ರು.
ದೀಪಕ್ ಚಹಾರ್ ಒಟ್ಟು 7 ಓವರ್‌ನಲ್ಲಿ 27 ರನ್ ನೀಡುವ ಮೂಲಕ 3 ಪ್ರಮುಖ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ್ರು.
IND vs ZIM 1st ODI: 9ನೇ ವಿಕೆಟ್‌ಗೆ 70 ರನ್ ಜತೆಯಾಟ; ಭಾರತಕ್ಕೆ ಸಾಮಾನ್ಯ ಗುರಿ ನೀಡಿದ ಜಿಂಬಾಬ್ವೆ

ಐಪಿಎಲ್‌ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗಿದ್ದ ದೀಪಕ್ ಚಹಾರ್
ದೀಪಕ್ ಚಹಾರ್ ಐಪಿಎಲ್ 15ನೇ ಸೀಸನ್‌ನ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾರೀ ಮೊತ್ತಕ್ಕೆ ಹರಾಜಾಗಿದ್ದರು. ಆದ್ರೆ ಇದಕ್ಕೂ ಮೊದಲು ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ದೀಪಕ್ ಚಹಾರ್ ಮುಗ್ಗರಿಸಿದ್ರು.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದ ವೇಳೆ ಚಹಾರ್ ಗಾಯಗೊಂಡಿದ್ದರು. ಅಮೋಘ ಬೌಲಿಂಗ್ ಮಾಡುತ್ತಿದ್ದ ಚಹಾರ್ ಮೊದಲೆರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಏತನ್ಮಧ್ಯೆ, ಬೌಲಿಂಗ್ ರನ್ನಪ್ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದರು. ಇದಾದ ಬಳಿಕ ಮೈದಾನ ತೊರೆದಿದ್ದ ದೀಪಕ್ ಚಹಾರ್ ಭಾರೀ ಮೊತ್ತಕ್ಕೆ ಸಿಎಸ್‌ಕೆಗೆ ಹರಾಜಾಗಿದ್ರೂ ಸಹ ಇಡೀ ಐಪಿಎಲ್ ಸೀಸನ್ ಆಡದೇ ಹೊರಗುಳಿದ್ರು.
ಆದ್ರೆ ಇದೀಗ ಕಂಬ್ಯಾಕ್ ಪಂದ್ಯದಲ್ಲಿಯೇ ದೀಪಕ್ ಚಹಾರ್ ಮಿಂಚಿನ ಆಟವಾಡಿ ಅಭಿಮಾನಿಗಳನ್ನ ಸೆಳೆದಿದ್ದಾರೆ.
ಸಂಜು ಸ್ಯಾಮ್ಸನ್‌ರ ನೆಚ್ಚಿನ ಕ್ರೀಡಾಪಟು ಯಾರು?; ಬಹಿರಂಗಪಡಿಸಿದ ಟೀಂ ಇಂಡಿಯಾ ಸ್ಟಾರ್
ದೀಪಕ್ ಚಹಾರ್‌ಗೆ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಿ!
ದೀಪಕ್ ಚಹಾರ್ ಅದ್ಭುತ ಫರ್ಫಾಮೆನ್ಸ್ ಅನ್ನು ಗುಣಗಾನ ಮಾಡಿರುವ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಆತನಿಗೆ ಬೆಂಬಲಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಚಹಾರ್‌ಗೆ ಅವಕಾಶ ಒದಗಿಸಲೇಬೇಕು ಎಂದಿದ್ದಾರೆ. ಇನ್ನು ಕೆಲವರು ಏಷ್ಯಾಕಪ್‌ನಲ್ಲಿ ದೀಪಕ್ ಚಹಾರ್ ಏಕೆ ಸ್ಟ್ಯಾಂಡ್ ಬೈ ಆಟಗಾರನಾಗಿದ್ದಾರೆ ಎಂದು ತಿಳಿಯಿತೇ ಎಂದು ಆತನ ಪ್ರದರ್ಶನವನ್ನ ಹೊಗಳಿದ್ದಾರೆ.

189 ರನ್‌ಗಳಿಗೆ ಜಿಂಬಾಬ್ವೆ ಆಲೌಟ್
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್‌ಔಟ್ ಆಗಿ ಪ್ರವಾಸಿ ಟೀಮ್ ಇಂಡಿಯಾಗೆ 190 ರನ್‌ಗಳ ಗುರಿಯನ್ನು ನೀಡಿದೆ. ಜಿಂಬಾಬ್ವೆ ಪರ ಆರಂಭಿಕರಾಗಿ ಕಣಕ್ಕಿಳಿದ ಇನ್ನೋಸೆಂಟ್ ಕೈಯಾ 4 ರನ್ ಕಲೆ ಹಾಕಿದರೆ, ತಡಿವಾನಿಶೆ ಮರುಮನಿ 8 ರನ್ ಕಲೆಹಾಕಿದರು. ಇನ್ನುಳಿದಂತೆ ವೆಸ್ಲಿ ಮಧೆವೆರೆ 5 ರನ್, ಸೀನ್ ವಿಲಿಯಮ್ಸ್ ಕೇವಲ 1 ರನ್, ಸಿಕಂದರ್ ರಾಜಾ 12 ರನ್ , ನಾಯಕ ರೆಗಿಸ್ ಚಕಬ್ವ 35 ರನ್, ರಾನ್ ಬರ್ಲ್ 11 ರನ್, ಲೂಕ್ ಜೋಂಗ್ವೆ 13 ರನ್, ವಿಕ್ಟರ್ ನ್ಯುಚಿ 8 ರನ್, ರಿಚರ್ಡ್ ನ್ಗರವ 34 ರನ್ ಮತ್ತು ಬ್ರಾಡ್ ಇವಾನ್ಸ್ ಅಜೇಯ 33 ಕಲೆಹಾಕಿದರು.


Click it and Unblock the Notifications












