ದೀಪಕ್ ಚಹಾರ್ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ನಾಲ್ಕೈದು ವಾರ ಬೇಕು!

ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಮಂಡಿರಜ್ಜು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ನಾಲ್ಕೈದು ವಾರಗಳನ್ನು ತೆಗೆದುಕೊಳ್ಳುತ್ತದೆ. ದೀಪಕ್ ಚಹಾರ್ ಜೊತೆಗೆ, ಮತ್ತೊಬ್ಬ ಆಟಗಾರ ವಾಷಿಂಗ್ಟನ್ ಸುಂದರ್ ಕೂಡ ಕೈ ಗಾಯದಿಂದ ಬಹುತೇಕ ಚೇತರಿಸಿಕೊಂಡಿದ್ದಾರೆ. ಟಿ.ನಟರಾಜನ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮೂವರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಮತ್ತು ಅಭ್ಯಾಸ ನಡೆಸುತ್ತಿದ್ದಾರೆ.
ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೈ ಗಾಯ ಬಹುತೇಕ ವಾಸಿಯಾದ ನಂತರ ಪ್ರಮುಖ ಕೌಂಟಿ ತಂಡ ಲಂಕಾಶೈರ್ ಪರ ಆಡಲು ಇಂಗ್ಲೆಂಡ್ ಗೆ ತೆರಳಲಿದ್ದಾರೆ. ವಾಷಿಂಗ್ಟನ್ ಸುಂದರ್ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದ್ದು, ಲಂಕಾಶೈರ್ ಪರ ಆಡಲಿದ್ದಾರೆ. ಅವರು ತಂಡಕ್ಕೆ ಮರಳಲು ಇದು ಉತ್ತಮ ಅಭ್ಯಾಸವಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದ ವೇಳೆ ಚಹಾರ್ ಗಾಯಗೊಂಡಿದ್ದರು. ಅಮೋಘ ಬೌಲಿಂಗ್ ಮಾಡುತ್ತಿದ್ದ ಚಹಾರ್ ಮೊದಲೆರಡು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಏತನ್ಮಧ್ಯೆ, ಬೌಲಿಂಗ್ ರನ್ನಪ್ ಸಮಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದರು. ಆಗ ಕೂಡಲೇ ಚಹಾರ್ ನೋವಿನಿಂದ ನೆಲದ ಮೇಲೆ ಕುಳಿತಿದ್ದರು. ಫಿಸಿಯೋ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಚಾಹರ್ ಆ ಓವರ್ ಪೂರ್ಣಗೊಳಿಸಲು ಸಾಧ್ಯವಾಗದೆ ಅಂದು ಮೈದಾನ ತೊರೆದರು.
ಅಂದಿನಿಂದ ಗಾಯದಿಂದ ಚೇತರಿಕೆಗೆ ಸಾಕಷ್ಟು ಪ್ರಯತ್ನ ನಡೆಸಿರುವ ದೀಪಕ್ ಚಹಾರ್ ಚೇತರಿಕೆ ಇನ್ನೂ ನಾಲ್ಕೈದು ವಾರ ಆಗುತ್ತದೆ ಎಂದು ತಿಳಿದುಬಂದಿದ್ದು, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ನಿಜಕ್ಕೂ ಕಠಿಣವಾಗಿದೆ.
ಎನ್‌ಸಿಎಯಲ್ಲಿ ತರಬೇತಿಯ ಸಮಯದಲ್ಲಿ ದೀಪಕ್ ಉತ್ತಮ ಫಿಟ್‌ನಂತೆ ಕಾಣಿಸಿಕೊಂಡರು. "ನಾನು ಪ್ರಸ್ತುತ ಒಂದು ಬಾರಿಗೆ ನಾಲ್ಕರಿಂದ ಐದು ಓವರ್‌ಗಳನ್ನು ಬೌಲ್ ಮಾಡಲು ಸಮರ್ಥನಾಗಿದ್ದೇನೆ. ನಾನು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಲು ಇನ್ನೂ ನಾಲ್ಕೈದು ವಾರಗಳು ಬೇಕು'' ಎಂದು ದೀಪಕ್ ಚಹಾರ್ ಪಿಟಿಐ ನ್ಯೂಸ್ ಗೆ ತಿಳಿಸಿದ್ದಾರೆ.
ಅಲ್ಲದೆ, ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಆಡಲಿರುವ ಟಿ20 ಸರಣಿಯ ಸಮಯಕ್ಕೆ ಅವರು ಫಿಟ್ ಆಗದಿರಬಹುದು ಎಂದು ರಾಜಸ್ಥಾನದ ದೀಪಕ್ ಚಹಾರ್ ಅಭಿಪ್ರಾಯಪಟ್ಟಿದ್ದಾರೆ. ಜುಲೈ ಎರಡನೇ ವಾರದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ ಎಂದು ತಿಳಿದು ಬಂದಿದೆ.
''ಚೇತರಿಕೆಗೆ ಸಂಬಂಧಪಟ್ಟಂತೆ ಹಂತಹಂತವಾಗಿ ಕ್ರಮಕೈಗೊಳ್ಳಬೇಕಾಗುತ್ತದೆ. ನಾನು ಇಂಗ್ಲೆಂಡ್ ವಿರುದ್ಧ ಟಿ20ಗೆ ಹೊಂದಿಕೊಳ್ಳುವ ಸಾಧ್ಯತೆ ಇಲ್ಲ. ಒಮ್ಮೆ ನಾನು ಪಂದ್ಯಕ್ಕೆ ಫಿಟ್ ಆಗಿದ್ದೇನೆ. ನಾನು ಕ್ಲಬ್ ಕ್ರಿಕೆಟ್ ಆಡಬೇಕು. ನನ್ನ ಫಿಟ್ನೆಸ್ ಪರೀಕ್ಷಿಸಲು ನಾನು ಕೆಲವು ಪಂದ್ಯಗಳನ್ನು ಆಡಬೇಕಾಗಿದೆ, "ಎಂದು ಚಹಾರ್ ಹೇಳಿದರು.
ಎನ್‌ಸಿಎಯಲ್ಲಿ ಹೆಚ್ಚಿನ ಸಮಯ ಬ್ಯಾಟಿಂಗ್ ಮಾಡುವಾಗ ಅವರು ಈಗ ತುಂಬಾ ಫಿಟ್‌ನಂತೆ ಕಾಣುತ್ತಿದ್ದಾರೆ. ಮುಂದಿನ ತಿಂಗಳಿನಲ್ಲಿ ಬರುವ ವೆಸ್ಟ್ ಇಂಡೀಸ್‌ನೊಂದಿಗಿನ ಟಿ20 ಪ್ರವಾಸಕ್ಕೆ ನೀವು ರೆಡಿಯಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನೋಡೋಣ ಎಂದು ದೀಪಕ್ ಉತ್ತರಿಸಿದ್ರು. ಜುಲೈ 22 ರಿಂದ ಆಗಸ್ಟ್ 7 ರವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications