Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Deepti Sharma: ಪಾಕ್‌ ವಿರುದ್ಧ 5 ವಿಕೆಟ್‌ ಪಡೆದ ದೀಪ್ತಿ ಶರ್ಮಾ ನಿರ್ಮಿಸಿದ ದಾಖಲೆಗಳ ಪಟ್ಟಿ ಇಲ್ಲಿದೆ

ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ದೀಪ್ತಿ ಶರ್ಮಾ ಮಹಿಳಾ ಟಿ20 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ 64 ರನ್‌ಗಳಿಂದ ಪಾಕ್‌ ತಂಡವನ್ನು ಮಣಿಸುವಲ್ಲಿ ದೀಪ್ತಿ ಕಾಣಿಕೆ ಅಪಾರ. ಪಾಕ್‌ ವಿರುದ್ಧದ ಪಂದ್ಯದಲ್ಲಿ ದೀಪ್ತಿ ಶರ್ಮಾ 5 ವಿಕೆಟ್‌ ಪಡೆದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಅಲ್ಲದೆ ಇವರ ಚಿತ್ತ ಈಗ ಭಾರತದ ಮಾಜಿ ವೇಗಿ ಜೂಲನ್‌ ಗೋಸ್ವಾಮಿ ಅವರ ಮೇಲೆ ನೆಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ಪರ ದೀಪ್ತಿ ಶರ್ಮಾ ಸ್ಥಿರ ಪ್ರದರ್ಶನ ನೀಡಿ 12 ರನ್ ಬಾರಿಸಿದರು. ಅಲ್ಲದೆ ಬೌಲಿಂಗ್‌ನಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದ ದೀಪ್ತಿ ಅಬ್ಬರಿಸಿದರು. ಇವರು 17ನೇ ಓವರ್‌ನಲ್ಲಿ ಮೂರು ಅಮೂಲ್ಯ ವಿಕೆಟ್‌ ಪಡೆಯುವ ಮೂಲಕ ಸಾಧನೆ ಮಾಡಿದರು. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಐದು ವಿಕೆಟ್‌ ಪಡೆದು ಬೀಗಿದರು. ಈ ಸಾಧನೆಯ ಮೂಲಕ ದೀಪ್ತಿ ಶರ್ಮಾ ದೊಡ್ಡ ದಾಖಲೆ ಬರೆದಿದ್ದಾರೆ.

Deepti Sharma

ಪಾಕ್‌ ವಿರುದ್ಧದ ಪಂದ್ಯಕ್ಕೂ ಮುನ್ನ ದೀಪ್ತಿ ಶರ್ಮಾ ಅವರ ಬುಟ್ಟಿಯಲ್ಲಿ ಒಟ್ಟು 349 ಅಂತಾರಾಷ್ಟ್ರೀಯ ವಿಕೆಟ್‌ಗಳು ಇದ್ದವು. 350 ವಿಕೆಟ್‌ಗಳ ಮಾರ್ಕ್‌ ದಾಟಲು ಇವರಿಗೆ ಒಂದು ವಿಕೆಟ್‌ ಅವಶ್ಯಕತೆ ಇತ್ತು. ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಪಾಕ್‌ ಆರಂಭಿಕ ಆಟಗಾರ್ತಿ ಗುಲ್ ಫಿರೋಜಾ ಅವರಿಗೆ ಖೆಡ್ಡಾ ತೋಡಿದ ದೀಪ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ ಪಡೆದ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌


ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್

ಪಾಕ್‌ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ಬಳಿಕ ದೀಪ್ತಿ ಶರ್ಮಾ ಮತ್ತೊಂದು ದಾಖಲೆ ಬರೆದರು. ಇವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು 145 ಇನಿಂಗ್ಸ್‌ಗಳಲ್ಲಿ 166 ವಿಕೆಟ್‌ ಪಡೆದು ಬೀಗಿದ್ದಾರೆ. ಈ ಮೂಲಕ ಇವರು ಥಾಯ್ಲೆಂಡ್‌ನ ತಿಪಚ್ಚ ಪುಟ್ಟವಾಂಗ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ತಿಪಚ್ಚ ಪುಟ್ಟವಾಂಗ್ 105 ಟಿ20 ಪಂದ್ಯಗಳಲ್ಲಿ 165 ವಿಕೆಟ್‌ ಪಡೆದಿದ್ದರು.

ಮತ್ತೊಂದು ದಾಖಲೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ದೀಪ್ತಿ ಅತಿ ಹೆಚ್ಚು ವಿಕೆಟ್‌ ಪಡೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದೀಪ್ತಿ ಪಾಕಿಸ್ತಾನ ವಿರುದ್ಧ ಒಟ್ಟು 11 ವಿಕೆಟ್ ಪಡೆದಿದ್ದಾರೆ. ಈ ಹಿಂದೆ, ಈ ದಾಖಲೆಯನ್ನು ಭಾರತದ ಏಕ್ತಾ ಬಿಶ್ತ್ ಮತ್ತು ಪಾಕಿಸ್ತಾನದ ನಿದಾ ದಾರ್ ಹೊಂದಿದ್ದರು, ಇವರಿಬ್ಬರೂ ತಲಾ 10 ವಿಕೆಟ್‌ ಪಡೆದಿದ್ದರು.

ವಿಶ್ವಕಪ್‌ನಿಂದ ಹೊರಬಿದ್ದ ಸೋಮಾಲಿಯಾ ರೆಫರಿಗೆ ಪೂರ್ಣ ಸಂಬಳ ನೀಡಲು FIFA ನಿರ್ಧಾರ

ವಿಶ್ವಕಪ್‌ನಿಂದ ಹೊರಬಿದ್ದ ಸೋಮಾಲಿಯಾ ರೆಫರಿಗೆ ಪೂರ್ಣ ಸಂಬಳ ನೀಡಲು FIFA ನಿರ್ಧಾರ

ರೇಣುಕಾ ಸಿಂಗ್ ದಾಖಲೆ ಉಡೀಸ್‌

ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಕೇವಲ 10 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ, ದೀಪ್ತಿ ಶರ್ಮಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೌಲರ್‌ ಎನಿಸಿಕೊಂಡರು. ಈ ಮೊದಲು ಈ ದಾಖಲೆ ರೇಣುಕಾ ಸಿಂಗ್ ಅವರ ಹೆಸರನಲ್ಲಿತ್ತು. ಇವರು 2023 ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 15 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದ್ದರು.

Story first published: Monday, June 15, 2026, 7:00 [IST]
Other articles published on Jun 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+