Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಡೆಲ್ಲಿಗೆ ಗೆಲುವು, ಮುಂಬೈಗೆ ಸೋಲು

delhi daredevils elected to nowl against delhi dare devils

ಬೆಂಗಳೂರು, ಏಪ್ರಿಲ್ 14: ರನ್‌ಗಳ ಹೊಳೆ ಹರಿದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡವು 7 ವಿಕೆಟ್‌ಗಳಿಂದ ಜಯ ಸಾಧಿಸಿತು. ಕುತೂಹಲ ತುಂಬಿದ್ದ ಪಂದ್ಯ ಕೊನೆಯ ಎಸೆತದವರಿಗೆ ವಿಜಯಲಕ್ಷ್ಮಿ ಎರಡೂ ತಂಡಗಳ ನಡುವೆ ತೂಗುಯ್ಯಾಲೆ ಆಡುತ್ತಿತ್ತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ 09ನೇ ಪಂದ್ಯದಲ್ಲಿ ಮುಂಬೈ ತಂಡ ಮೊದಲು ಬ್ಯಾಟ್‌ ಮಾಡಿ 194 ರನ್ ಗಳಿಸಿತು, ಡೆಲ್ಲಿ ತಂಡವು ಈ ಮೊತ್ತವನ್ನು 7 ವಿಕೆಟ್ ಉಳಿಸಿಕೊಂಡು 19.5 ಎಸೆತದಲ್ಲಿ ಚೇಸ್ ಮಾಡಿ ಗೆಲುವಿನ ನಗೆ ಬೀರಿತು.

ಕೊನೆಯ ಓವರ್‌ನಲ್ಲಿ ಗೆಲ್ಲಲು 11 ರನ್ ಅವಶ್ಯಕತೆ ಇದ್ದಾಗ ಮೊದಲೆರಡು ಎಸೆತದಲ್ಲಿ ಒಂದು ಸಿಕ್ಸರ್ ಒಂದು ಬೌಂಡರಿ ಭಾರಿಸಿದ ರಾಯ್ ಆ ನಂತರ 3 ಎಸೆಗಳಲ್ಲಿ ಒಂದು ರನ್ ಗಳಿಸಲು ಪರದಾಡಿದರು. ಆದರೆ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಭಾರಿಸಿ ನಿಟ್ಟುಸಿರು ಬಿಟ್ಟರು.

ಮುಂಬೈ ತಂಡಕ್ಕೆ ಕನಸಿನ ಆರಂಭ ಒದಗಿಸಿಕೊಟ್ಟ ಆರಂಭಿಕ ಬ್ಯಾಟ್ಸ್ಮನ್‌ ಸೂರ್ಯಕುಮಾರ್ ಯಾದವ್ 32 ಎಸೆತದಲ್ಲಿ 52 ರನ್ ಭಾರಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಲಿವಿಸ್ ಸಹ ಭಿರುಸಿನ ಆಟವಾಡಿ 28 ಎಸೆತದಲ್ಲಿ 48 ರನ್ ಗಳಿಸಿದರು. ಇಶಾನ್ ಕಿಶನ್ ಅಬ್ಬರದ 44 ರನ್ ಗಳಿಸಿ ಮುಂಬೈ ತಂಡ 194 ರನ್ ಗಳಿಸಲು ನೆರವಾದರು.

ಡೆಲ್ಲಿ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಜಾಸನ್ ರಾಯ್ 53 ಎಸೆತಕ್ಕೆ 91 ರನ್ ಗಳಿಸಿ ಔಟಾಗದೇ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿಗಳಿದ್ದವು. ಅವರಿಗೆ ಉತ್ತಮ ಸಹಕಾರ ನೀಡಿದ ರಿಶಬ್ ಪಂತ್‌ 25 ಎಸೆತಕ್ಕೆ 47 ರನ್ ಗಳಿಸಿದರು. ಶ್ರೇಯಸ್ ಐಯರ್ 27 ರನ್ ಗಳಿಸಿದರು.

ಈ ಪಂದ್ಯದ ಮೂಲಕ ಡೆಲ್ಲಿ ಪಂದ್ಯ ಐಪಿಎಲ್‌ನಲ್ಲಿ ತನ್ನ ಜಯದ ಖಾತೆ ತೆರೆದಿದ್ದರೆ, ಮುಂಬೈ ತಂಡ ಮೂರನೇ ಸೋಲು ಕಂಡಿದೆ.

Story first published: Saturday, April 14, 2018, 19:44 [IST]
Other articles published on Apr 14, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+