Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸನ್ ರೈಸರ್ಸ್ ಗೆಲುವಿನೋಟವ ತಡೆಯಬಲ್ಲದೇ ಡೇರ್ ಡೆವಿಲ್ಸ್?

delhi-v-hyderabad-can-dd-turn-the-tables-on-Sunrisers

ನವದೆಹಲಿ, ಮೇ 10: ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 42ನೇ ಪಂದ್ಯಾಟ ನಡೆಯಲಿದೆ.

ಐಪಿಎಲ್ ಅಂಕಪಟ್ಟಿಯ ಮೇಲ್ತುದಿಯಲ್ಲಿರುವ ಹೈದರಾಬಾದ್ ತಂಡವೇ ಇಂದಿನ ಗೆಲ್ಲುವ ನೆಚ್ಚಿನ ತಂಡ. ಸದ್ಯ ಅಂಕಪಟ್ಟಿಯ ತಳದಲ್ಲಿರುವ ಡೆಲ್ಲಿಗೆ ಮರ್ಯಾದೆ ಪ್ರಶ್ನೆಯಾಗಿರುವುದರಿಂದ ಇಂದಿನ ಪಂದ್ಯ ಡೆಲ್ಲಿಪರವಾಗಿ ತಿರುಗಿದರೂ ತಿರುಗಬಲ್ಲದು.

ಈಗಾಗಲೇ ಟಾಸ್ ಮುಗಿದಿದೆ. ಟಾಸ್ ಗೆದ್ದು ಡೆಲ್ಲಿ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.

ಹೆಚ್ಚು ಯುವಕರೇ ತುಂಬಿದ್ದ ಡೆಲ್ಲಿ ಡೇರ್ ಡೆವಿಲ್ಸ್ ಈ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನವನ್ನೇ ನೀಡುತ್ತಾ ಬಂದಿತ್ತು. ಹೀಗಾಗಿಯೇ ಬೇಸತ್ತು ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್ ಸ್ವ-ಪ್ರೇರಣೆಯಿಂದ ನಾಯಕತ್ವದಿಂದ ಕೆಳಗಿಳಿದಿದ್ದರು.

ಗಂಭೀರ್ ನಾಯಕತ್ವದಿಂದ ಕೆಳಗಿಳಿದಿದ್ದೇ ಡೆಲ್ಲಿ ಕೊಂಚ ಗೆಲುವಿನ ದಾರಿ ಹಿಡಿದಂತೆ ಕಂಡಿತ್ತು. ಆದರೆ ಈಗ ಮತ್ತದೇ ಸೋಲಿನ ಯಾದಿ ಹಿಡಿಯುವ ಮೂಲಕ ಐಪಿಎಲ್ 8 ತಂಡಗಳಲ್ಲೇ ಡೆಲ್ಲಿ 'ಡಲ್' ತಂಡವಾಗಿ ಗುರುತಿಸಿಕೊಂಡಿದೆ. ಒಟ್ಟಿನಲ್ಲಿ ಇಂದಿನದು ಮೇಲ್ತುದಿಯ ಮತ್ತು ಕೆಳ ತುದಿಯ ತಂಡಗಳ ನಡುವಿನ ಪಂದ್ಯ.

ಕಾಲಿನ್ ಮುನ್ರೋ, ರಿಷಬ್ ಪಂತ್, ಟ್ರೆಂಟ್ ಬೌಲ್ಟ್, ಪೃಥ್ವಿ ಶಾ, ಶ್ರೇಯಸ್ ಐಯರ್, ಅಲ್ಬಿ ಮಾರ್ಕೆಲ್, ವಿ. ಶಂಕರ್ ಮಾಯಾಂಕ್ ಅಗರ್ವಾಲ್ ಇವರು ಡೆಲ್ಲಿ ಬಲಿಷ್ಠ ತಂಡವೇ. ಆದರೆ ಎಲ್ಲೋ ಒಂದೆಡೆ ತಂಡ ಎಡವುತ್ತಲೇ ಬಂದಿತ್ತು. ಈ ಬಾರಿ ತಪ್ಪನ್ನು ತಿದ್ದಿಕೊಂಡು ಆಡಿದರೆ ಡೆಲ್ಲಿ ಗೆಲ್ಲುವ ಸಾಧ್ಯತೆ ಇಲ್ಲದಿಲ್ಲ.

Story first published: Thursday, May 10, 2018, 19:39 [IST]
Other articles published on May 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+