For Quick Alerts
ALLOW NOTIFICATIONS  
For Daily Alerts
 

ಭಾರತ ವರ್ಸಸ್ ಡರ್ಬಿಶೈರ್ ಟಿ20 ಅಭ್ಯಾಸ ಪಂದ್ಯ: ಪಂದ್ಯದ ಪ್ರಿವ್ಯೂ, ಸ್ಕ್ವಾಡ್‌

Ind vs Derby t20

ಒಂದೆಡೆ ಇಂಗ್ಲೆಂಡ್ ವಿರುದ್ಧ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಶುಕ್ರವಾರ ಮತ್ತೊಂದೆಡೆ ಡರ್ಬಿಯ ಕೌಂಟಿ ಗ್ರೌಂಡ್‌ನಲ್ಲಿ ಟಿ20 ಅಭ್ಯಾಸ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಪಡೆ ಸಜ್ಜಾಗಿದೆ.

ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಟಿ20 ಸರಣಿ ಆಡಲಿದ್ದು, ಅದಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯವನ್ನಾಡಲಿದೆ. ಅದರಲ್ಲಿ ಮೊದಲನೇ ಪಂದ್ಯವು ಭಾರತ ಮತ್ತು ಡರ್ಬಿಶೈರ್ ಕ್ರಿಕೆಟ್ ಕ್ಲಬ್ ನಡುವೆ ನಡೆಯಲಿದೆ.

ಐರ್ಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ಮಾಡಿರುವ ಹಾರ್ದಿಕ್ ಪಡೆ

ಐರ್ಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ಮಾಡಿರುವ ಹಾರ್ದಿಕ್ ಪಡೆ

ಹಾರ್ದಿಕ್ ಮತ್ತು ಅವರ ತಂಡದ ತಂಡವು ಐರ್ಲೆಂಡ್ ವಿರುದ್ಧದ ಎರಡು-ಟಿ 20 ಸರಣಿಯನ್ನು ಸ್ವೀಪ್ ಮಾಡುವ ಬೆನ್ನಲ್ಲೇ ಇಂಗ್ಲೆಂಡ್‌ಗೆ ಕಾಲಿಟ್ಟಿದೆ. ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದ ಭಾರತ ಎರಡನೇ ಪಂದ್ಯದಲ್ಲಿ ನಾಲ್ಕು ರನ್‌ಗಳ ಸೋಲಿನಿಂದ ಪಾರಾಯಿತು. ಭಾರತ ಬ್ಯಾಟಿಂಗ್ ಲೈನ್ ಅಪ್ ಗಿಂತ ಬೌಲಿಂಗ್ ಲೈನ್ ಅಪ್ ಪ್ರದರ್ಶನದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಎರಡೂ ಪಂದ್ಯಗಳಲ್ಲಿ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಬೌಲರ್‌ಗಳು ಅಭ್ಯಾಸ ಪಂದ್ಯಗಳಲ್ಲಿ ತಮ್ಮ ತಪ್ಪನ್ನ ಸರಿದೂಗಿಸಲು ಪ್ರಯತ್ನಿಸುತ್ತಾರೆ.

ಸಂಜು ಸ್ಯಾಮ್ಸನ್‌ಗೆ ಸಿಗಲಿದೆ ಉತ್ತಮ ಅವಕಾಶ

ಸಂಜು ಸ್ಯಾಮ್ಸನ್‌ಗೆ ಸಿಗಲಿದೆ ಉತ್ತಮ ಅವಕಾಶ

ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಶುಕ್ರವಾರದ ಪಂದ್ಯಕ್ಕೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಶಾನ್ ಕಿಶನ್ ಜೊತೆಗೆ ಅವರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಕಳೆದ ಪಂದ್ಯದಲ್ಲಿ ಸಂಜು ಭಾರತದ ಜೆರ್ಸಿಯಲ್ಲಿ ಚೊಚ್ಚಲ ಅರ್ಧಶತಕ ಗಳಿಸಿ 77 ರನ್ ಕಲೆಹಾಕಿದರು. ಎರಡು ಅಭ್ಯಾಸ ಟಿ20ಗಳಲ್ಲಿ ಸಂಜು ತಮ್ಮ ಫಾರ್ಮ್ ಅನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಈ ಮೂಲಕ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆಯಬಹುದು.

ಹಳ್ಳಿ ದಾರಿಯಲ್ಲಿ ನಾಟಿ ವೈದ್ಯರಿಂದ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ ಪಡೆದ ಎಂಎಸ್ ಧೋನಿ

 ದೀಪಕ್ ಹೂಡಾ ಫಾರ್ಮ್‌ ಮುಂದುವರಿಸುವ ಬಯಕೆ

ದೀಪಕ್ ಹೂಡಾ ಫಾರ್ಮ್‌ ಮುಂದುವರಿಸುವ ಬಯಕೆ

ಕಳೆದ ಟಿ20 ಸರಣಿಯಲ್ಲಿ ಟ್ರಂಪ್ ಕಾರ್ಡ್ ಆಗಿದ್ದ ದೀಪಕ್ ಹೂಡಾ, ಟಿ20 ಅಭ್ಯಾಸ ಪಂದ್ಯದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ. ಅವರು ಐರ್ಲೆಂಡ್ ವಿರುದ್ಧದ ಪಂದ್ಯ ಶ್ರೇಷ್ಟ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು. ಮೊದಲ ಟಿ20ಯಲ್ಲಿ ಅಜೇಯ 47 ರನ್ ಗಳಿಸಿದ್ದ ಹೂಡಾ ಎರಡನೇ ಟಿ20ಯಲ್ಲಿ 104 ರನ್ ಗಳಿಸಿ ಎಲ್ಲರನ್ನೂ ದಂಗುಬಡಿಸಿದರು. ಅವರ ಶತಕ ವೃತ್ತಿಜೀವನದ ಮೂರನೇ ಟಿ20 ಪಂದ್ಯದಲ್ಲೇ ಆಗಿತ್ತು. ಇದರೊಂದಿಗೆ ಹೂಡಾ ಈ ಮಾದರಿಯಲ್ಲಿ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡರು. ಈ ಪ್ರದರ್ಶನದ ಮೂಲಕ ಅವರು ಈ ವರ್ಷದ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ತಮ್ಮ ಹಕ್ಕು ಸಾಧಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟಿ20, ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಘೋಷಣೆ

ಅಭ್ಯಾಸ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಅಭ್ಯಾಸ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಭಾರತ ಮತ್ತು ಡರ್ಬಿಶೈರ್ ನಡುವಿನ ಟಿ20 ಪಂದ್ಯ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11.30ಕ್ಕೆ ಆರಂಭವಾಗಲಿದೆ. ಪಂದ್ಯವು ಯಾವುದೇ ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗುವುದಿಲ್ಲ. ಆದರೆ ಕೆಲವು ಯೂಟ್ಯೂಬ್‌ ಚಾನಲ್‌ಗಳು ಆಟದ ಲೈವ್ ಸ್ಟ್ರೀಮಿಂಗ್ ಅನ್ನು ಹೊಂದಿರುತ್ತವೆ. ಇದಕ್ಕೂ ಮುನ್ನ ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ನಾಲ್ಕು ದಿನಗಳ ತರಬೇತಿ ಪಂದ್ಯವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು.

Cheteshwar Pujara ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ | *Cricket | OneIndia Kannada
ಉಭಯ ತಂಡಗಳ ಸ್ಕ್ವಾಡ್‌

ಉಭಯ ತಂಡಗಳ ಸ್ಕ್ವಾಡ್‌

ಭಾರತದ ಸ್ಕ್ವಾಡ್‌
ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಉಮ್ರಾನ್ ಮಲಿಕ್, ರಾಹುಲ್ ತ್ರಿಪಾಠಿ, ಅವೇಶ್ ಖಾನ್, ವೆಂಕಟೇಶ್ ಅಯ್ಯರ್, ರುತುರಾಜ್ ಗಾಯಕ್ವಾಡ್ , ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್

ಡರ್ಬಿಶೈರ್ ಸ್ಕ್ವಾಡ್‌
ಶಾನ್ ಮಸೂದ್ (ನಾಯಕ), ಲೂಯಿಸ್ ರೀಸ್, ಹೇಡನ್ ಕೆರ್, ವೇಯ್ನ್ ಮ್ಯಾಡ್ಸೆನ್, ಲ್ಯೂಸ್ ಡು ಪ್ಲೂಯ್, ಬ್ರೂಕ್ ಗೆಸ್ಟ್‌ (ವಿಕೆಟ್ ಕೀಪರ್), ಮ್ಯಾಟಿ ಮೆಕ್ ಕೀರ್ನಾನ್, ಅಲೆಕ್ಸ್ ಹ್ಯೂಸ್, ಅಲೆಕ್ಸ್ ಥಾಮ್ಸನ್, ಮಾರ್ಕ್ ವ್ಯಾಟ್, ಜಾರ್ಜ್ ಸ್ಕ್ರಿಮ್‌ಶಾ, ಅನುಜ್ ದಾಲ್, ಸ್ಯಾಮ್ಯುಯೆಲ್ ಕಾನರ್ಸ್, ಬೆನ್ ಐಚಿಸನ್, ಹಿಲ್ಟನ್ ಕಾರ್ಟ್‌ರೈಟ್, ಹ್ಯಾರಿ ಕೇಮ್

Story first published: Friday, July 1, 2022, 17:39 [IST]
Other articles published on Jul 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+