ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಳ್ಳಿ ದಾರಿಯಲ್ಲಿ ನಾಟಿ ವೈದ್ಯರಿಂದ ಮೊಣಕಾಲು ನೋವಿಗೆ 40 ರೂ. ಚಿಕಿತ್ಸೆ ಪಡೆದ ಎಂಎಸ್ ಧೋನಿ

MS Dhoni Gets Knee Treatment From Local Doctor Who Sits Under A Tree In Ranchi

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ರಾಂಚಿಯಲ್ಲಿರುವ ತಮ್ಮ ಅದ್ಧೂರಿ ಮನೆಯಲ್ಲಿ ಕ್ರಿಕೆಟ್‌ನಿಂದ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ. ಇದೇ ವೇಳೆ ಭಾರತದ ಮಾಜಿ ನಾಯಕ ವಿವಿಧ ಆಚರಣೆಗಳಿಗಾಗಿ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡುತ್ತಿದ್ದಾರೆ. ರಾಂಚಿಯ ಕೆಲವು ಯುವ ಕ್ರಿಕೆಟಿಗರನ್ನು ಭೇಟಿ ಮಾಡಲು ಅವರು ಜಾರ್ಖಂಡ್‌ನ ಜೆಎಸ್‌ಸಿಎ ಕ್ರೀಡಾಂಗಣಕ್ಕೆ ಹೋಗಿದ್ದರು.

ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡು ಎಂಎಸ್‌ ಧೋನಿ ಅವರು ಮೊಣಕಾಲು ನೋವಿಗೆ ಚಿಕಿತ್ಸೆಯನ್ನೂ ಪಡೆದರು. ಐಎಎನ್‌ಎಸ್‌ನಲ್ಲಿನ ವರದಿಯ ಪ್ರಕಾರ ಕ್ಯಾಪ್ಟನ್ ಕೂಲ್ ಅವರು ಚಿಕಿತ್ಸೆ ಪಡೆಯಲು ದೇಸಿ (ನಾಟಿ) ವೈದ್ಯರನ್ನು ಆಯ್ಕೆ ಮಾಡಿದ್ದಾರೆ.

IND vs ENG: 3 ಪಂದ್ಯಗಳ ODI ಸರಣಿಗೆ ಮರಳಿದ ಪಾಂಡ್ಯ, ಜಡೇಜಾ; ಹೀಗಿದೆ ಭಾರತ ತಂಡ

ಅವರು ಮೊಣಕಾಲು ನೋವಿಗೆ ರಾಂಚಿಯ ಹಳ್ಳಿಯೊಂದರಲ್ಲಿ ಔಷಧಿಯನ್ನು ಪಡೆಯಲು ವೈದ್ಯರ ಬಳಿಗೆ ಹೋಗಿದ್ದಾರೆ. ವೈದ್ಯರ ಪ್ರಕಾರ, ಔಷಧಿಯನ್ನು ಮನೆಗೆ ಕೊಂಡೊಯ್ಯಲಾಗುವುದಿಲ್ಲ, ಆದ್ದರಿಂದ ಡೋಸ್ ಪಡೆಯಲು ಎಂಎಸ್ ಧೋನಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ತನ್ನ ಮನೆಯಿಂದ 70 ಕಿ.ಮೀ ದೂರದ ಹಳ್ಳಿಗೆ ಪ್ರಯಾಣಿಸುತ್ತಾರೆ.

ರಾಂಚಿಯ ಹಳ್ಳಿಯೊಂದರಲ್ಲಿ 40 ರೂ.ಗೆ ಚಿಕಿತ್ಸೆ

ರಾಂಚಿಯ ಹಳ್ಳಿಯೊಂದರಲ್ಲಿ 40 ರೂ.ಗೆ ಚಿಕಿತ್ಸೆ

ಲೆಫ್ಟಿನೆಂಟ್ ಕರ್ನಲ್ ಸಹ ಆಗಿರುವ ಎಂಎಸ್ ಧೋನಿ ಅವರು ರಾಂಚಿ ಸಮೀಪದ ಅರಣ್ಯ ದಾರಿದಲ್ಲಿರುವ ಬುಡಕಟ್ಟು ಡಾಕ್ಟರ್‌ನಿಂದ 40 ರೂ.ಗೆ ತಮ್ಮ ಮೊಣಕಾಲುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಅವರ ಅತ್ಯಂತ ಸರಳ ವ್ಯಕ್ತಿತ್ವವನ್ನು ತೋರಿಸುತ್ತದೆ.

ಅದೇ ವರದಿಯು ಎಂಎಸ್ ಧೋನಿಗಿಂತ ಮೊದಲು ಅದೇ ವೈದ್ಯ ಧೋನಿಯ ಹೆತ್ತವರಿಗೂ ಔಷಧಿ ನೀಡಿದ್ದಾನೆ ಎಂದು ಹೇಳುತ್ತದೆ. ವರದಿಯ ಪ್ರಕಾರ, ವೈದ್ಯರು ಕಳೆದ 3 ದಶಕಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಮರದ ಕೆಳಗೆ ಟಾರ್ಪಾಲಿನ್ ಟೆಂಟ್‌ನಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಕಳೆದ ಒಂದು ತಿಂಗಳಿನಿಂದ ಎಂಎಸ್ ಧೋನಿ ತಮ್ಮ ಮೊಣಕಾಲು ನೋವಿಗೆ ಔಷಧಿಗಳನ್ನು ಪಡೆಯಲು ಬರುತ್ತಿದ್ದಾರೆ. ಅವರು ಕುಳಿತುಕೊಳ್ಳುವ ಸ್ಥಳವು ಲಾಪುಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕಟಿಂಗ್ಕೆಲಾದಲ್ಲಿದೆ. ವೈದ್ಯನ ಹೆಸರು ವೈದ್ಯ ಬಂಧನ್ ಸಿಂಗ್ ಖಾರ್ವಾರ್.

ಧೋನಿ ಯಾವುದೇ ಆಡಂಬರವಿಲ್ಲದೆ ಸಾಮಾನ್ಯ ರೋಗಿಯಂತೆ ಬರುತ್ತಾರೆ

ಧೋನಿ ಯಾವುದೇ ಆಡಂಬರವಿಲ್ಲದೆ ಸಾಮಾನ್ಯ ರೋಗಿಯಂತೆ ಬರುತ್ತಾರೆ

ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ ಬಂಧನ್ ಸಿಂಗ್ ಅವರು ಅಂತಹ ಜನಪ್ರಿಯ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾರೆಂದು ಮೊದಲಿಗೆ ತಿಳಿದಿರಲಿಲ್ಲ. ಒಂದು ದಿನ ಧೋನಿ ಕಾರಿನ ಸುತ್ತಲೂ ಅನೇಕ ಚಿಕ್ಕ ಮಕ್ಕಳು ಜಮಾಯಿಸಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡುವವರೆಗೂ ನಾಟಿ ವೈದ್ಯರಿಗೆ ಎಂಎಸ್ ಧೋನಿ ಬಗ್ಗೆ ತಿಳಿದಿರಲಿಲ್ಲ.

ನಾಟಿ ವೈದ್ಯ ಬಂಧನ್ ಸಿಂಗ್ ಖಾರ್ವಾರ್ ಹೇಳುವ ಪ್ರಕಾರ, "ಎಂಎಸ್ ಧೋನಿ ಯಾವುದೇ ಆಡಂಬರವಿಲ್ಲದೆ ಸಾಮಾನ್ಯ ರೋಗಿಯಂತೆ ಬರುತ್ತಾರೆ, ಅವರಿಗೆ ಸೆಲೆಬ್ರಿಟಿ ಎಂಬ ಹೆಮ್ಮೆ ಇಲ್ಲ. ಆದರೆ, ಈಗ ಪ್ರತಿ ನಾಲ್ಕು ದಿನಗಳಿಗೊಮ್ಮೆ ಧೋನಿ ಅವರ ಆಗಮನದ ಸುದ್ದಿ ಇಲ್ಲಿಗೆ ಅವರ ಅಭಿಮಾನಿಗಳನ್ನು ಸೇರುವಂತೆ ಮಾಡುತ್ತಿದೆ. ಆದ್ದರಿಂದ ಔಷಧಿ ತೆಗೆದುಕೊಳ್ಳುವಾಗ ಅವರು ತಮ್ಮ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಆಗ ನಾವು ಅವರಿಗೆ ಔಷಧಿ ನೀಡುವ ಕೆಲಸ ಮಾಡುತ್ತೇವೆ," ಎಂದು ಹೇಳಿದರು.

ಅಭಿಮಾನಿಗಳ ಸಮ್ಮುಖದಲ್ಲಿ ಕ್ರಿಕೆಟ್‌ಗೆ ವಿದಾಯ

ಅಭಿಮಾನಿಗಳ ಸಮ್ಮುಖದಲ್ಲಿ ಕ್ರಿಕೆಟ್‌ಗೆ ವಿದಾಯ

ಆಶಾದಾಯಕವಾದ ಸಗತಿಯೆಂದರೆ, ಎಂಎಸ್ ಧೋನಿ ತಮ್ಮ ಮೊಣಕಾಲು ನೋವನ್ನು ಶೀಘ್ರದಲ್ಲೇ ಗುಣಪಡಿಸಲು ಸಾಧ್ಯವಾಗುತ್ತದೆ. ಅವರು ಐಪಿಎಲ್ 2023ರಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ಐಪಿಎಲ್ 2022ರಲ್ಲಿ ಸಿಎಸ್‌ಕೆ ತಂಡದ ಪರ ಕೊನೆಯ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಎಲ್ಲಾ ಮಾದರಿಯ ಕ್ರೀಡೆಗೆ ಶಾಶ್ವತವಾಗಿ ವಿದಾಯ ಹೇಳಲು ಬಯಸುತ್ತಾರೆ ಎಂದು ಅವರೇ ಬಹಿರಂಗಪಡಿಸಿದ್ದಾರೆ.

Story first published: Friday, July 1, 2022, 17:40 [IST]
Other articles published on Jul 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X