Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನ್ನ ಮೇಲೆ ಎಲ್ಲರಿಗೂ ಅನುಮಾನವಿತ್ತು; ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದ ದೇವ್ ಮೀನಾ ನೋವಿನ ಕಥೆ

ಭುವನೇಶ್ವರ: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ 65ನೇ ರಾಷ್ಟ್ರೀಯ ಅಂತರ್ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಡೆಯುತ್ತಿದೆ. ಈ ಕ್ರೀಡಾಕೂಟದ ಮೊದಲ ದಿನವೇ ಮಧ್ಯ ಪ್ರದೇಶ ಯುವ ಪೋಲ್‌ ವಾಲ್ಟರ್‌ ದೇವ್ ಮೀನಾ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇವರು 18 ತಿಂಗಳಲ್ಲಿ 5ನೇ ಬಾರಿಗೆ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ ಮುಂಬರುವ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ.

21 ವರ್ಷದ ದೇವ್ ಮೀನಾ, 5.46 ಮೀಟರ್ ಎತ್ತರ ಜಿಗಿಯುವ ಮೂಲಕ ತಾವೇ ಹೊಂದಿದ್ದ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದರು. ಈ ಮೊದಲು ಇವರು 5.45 ಮೀಟರ್‌ಗಳ ರಾಷ್ಟ್ರೀಯ ದಾಖಲೆ ಹೊಂದಿದ್ದರು. ಈ ಜಿಗಿತದೊಂದಿಗೆ ಅವರು ಏಷ್ಯನ್ ಗೇಮ್ಸ್‌ಗೂ ಅರ್ಹತೆ ಪಡೆದರು.

Dev Meena

ಈ ಐತಿಹಾಸಿಕ ಸಾಧನೆಯ ನಂತರ 'ಮೈಖೇಲ್' ಜೊತೆ ಮಾತನಾಡಿದ ದೇವ್ ಮೀನಾ ಭಾವುಕರಾದರು. ನಾನು 14ನೇ ವಯಸ್ಸಿನಲ್ಲಿ ಪೋಲ್ ವಾಲ್ಟ್ ಕಲಿಯಲು ಆರಂಭಿಸಿದಾಗ, ನನ್ನ ಕೋಚ್ ಘನಶ್ಯಾಮ್ ಯಾದವ್ ಪದೇ ಪದೇ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ದರು. ಆಗ ಅದು ಬರೀ ಕನಸಿನಂತೆ ಕಾಣಿಸುತ್ತಿತ್ತು. ನಾನು ಈ ವಿಷಯವನ್ನು ನನ್ನ ಸ್ನೇಹಿತರಿಗೆ ತಿಳಿಸಿದಾಗ ಅವರೆಲ್ಲಾ ನಗುತ್ತಿದ್ದರು. ಆದರೆ ಇಂದು ಆ ಕನಸು ನನಸಾಗಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ತಾಯಿಯನ್ನು ಸ್ಮರಿಸಿದ ದೇವ್

ತಮ್ಮ ಯಶಸ್ಸಿನ ಹಿಂದೆ ಕುಟುಂಬದ ದೊಡ್ಡ ತ್ಯಾಗವಿದೆ ಎಂದು ಮೀನಾ ನೆನಪಿಸಿಕೊಂಡಿದ್ದಾರೆ ಆರಂಭದಲ್ಲಿ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಕಷ್ಟದ ನಡುವೆಯೂ ನನ್ನ ತಾಯಿ ತನ್ನ ಕೈಲಾದಷ್ಟು ಶ್ರಮಪಟ್ಟು ನನ್ನನ್ನು ಪ್ರೋತ್ಸಾಹಿಸಿದರು. ನನ್ನ ಕುಟುಂಬ ಹಾಗೂ ಕೋಚ್‌ ನನ್ನ ಮೇಲೆ ನಂಬಿಕೆ ಇಟ್ಟು ಅವರು ಹೆಮ್ಮೆ ಪಡುವಂತೆ ಮಾಡಿದಕ್ಕೆ ನನಗೆ ಹೆಮ್ಮೆಯಿದೆ ಎಂದು ದೇವ್ ಮೀನಾ ತಾಯಿಯನ್ನು ಸ್ಮರಿಸಿದರು.

ಅದೊಂದೆ ಗುರಿ

ಪೋಲ್ ವಾಲ್ಟ್‌ನಲ್ಲಿ ಸೂಕ್ತವಾದ ಪೋಲ್ (ಕೋಲು) ಆಯ್ಕೆ ಮಾಡಿಕೊಳ್ಳುವುದು ದೊಡ್ಡ ತಾಂತ್ರಿಕ ಸವಾಲು. ಏಷ್ಯನ್ ಗೇಮ್ಸ್ ಅರ್ಹತೆ ಕೇವಲ ಆರಂಭವಷ್ಟೇ ಎಂದು ಮೀನಾ ಭಾವಿಸಿದ್ದಾರೆ. ಇನ್ನು ಮುಂದೆ ಸಾಗಬೇಕಾದ ಹಾದಿ ಬಹಳಷ್ಟಿದೆ. ಏಷ್ಯನ್ ಗೇಮ್ಸ್ ಒಂದು ಕನಸಾಗಿತ್ತು, ಅದೀಗ ನನಸಾಗಿದೆ. ಆದರೆ ನನ್ನ ಮುಂದಿನ ಗುರಿ ಒಲಿಂಪಿಕ್ಸ್" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕ್ರೀಡೆಗೆ ಮೂಲ ಸೌಕರ್ಯ ಹಾಗೂ ಪ್ರಚಾರ ಸಿಗದ ಈ ಸಮಯದಲ್ಲಿ ದೇವ್ ಮೀನಾ ಅವರು ಹೊಸ ಭರವಸೆ ಮೂಡಿಸಿದ್ದಾರೆ.

ನಿಶ್ಚಿತವಾಗಿ ರಾಷ್ಟ್ರೀಯ ದಾಖಲೆ ಒಂದು ಮೈಲಿಗಲ್ಲು. ಆದರೆ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದಿದ್ದು ದೊಡ್ಡ ಸಾಧನೆ ಎಂದು ದೇವ್ ನಂಬಿದ್ದಾರೆ. ನಾವು ಇನ್ನು ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಮಹದಾಸೆ ಎಂದು ಅವರು ತಮ್ಮ ಮುಂದಿನ ಕನಸನ್ನು ಬಿಚ್ಚಿಟ್ಟಿದ್ದಾರೆ.

Story first published: Thursday, June 25, 2026, 13:45 [IST]
Other articles published on Jun 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+